Amir Hatam Death: ಇಸ್ರೇಲ್ ವಾಯುದಾಳಿಗೆ ಬಲಿಯಾದ ಇರಾನ್ ರಕ್ಷಣಾ ಸಚಿವ ಅಮಿರ್ ಹಟಾಮಿ | Iran S Defense Minister Amir Hatami Died In Airstrike Mrq

ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ ಅಮೀರ್ ಹಟಾಮಿ ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್, ಮಧ್ಯಪ್ರಾಚ್ಯದ ಅಮೆರಿಕಾದ ವಾಯುನೆಲೆಗಳು ಮತ್ತು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ.

ಟೆಹ್ರಾನ್: ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ ಅಮಿರ್ ಹಟಾಮಿಯ ಹತ್ಯೆಯಾಗಿದ ಎಂದು ವರದಿಯಾಗಿದೆ. ಮಧ್ಯಪ್ರಾಚ್ಯದ ಅಮೆರಿಕಾದ ವಾಯುನೆಲೆಗಳ ಮೇಲೆ ಇರಾನ್‌ ಸತತವಾಗಿ ದಾಳಿ ನಡೆಸುತ್ತಿದೆ. ಹಾಗೆಯೇ ಇಸ್ರೇಲ್ ಮೇಲೆ 400ಕ್ಕೂ ಅಧಿಕ ಕ್ಷಿಪಣಿಗಳಿಂದ ಇರಾನ್ ದಾಳಿ ನಡೆಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರಮಣಕಾರಿ ದಾಳಿಯ ವಿಡಿಯೋಗಳು ವೈರಲ್ ಆಗುತ್ತಿವೆ. ಇರಾನ್‌ ದಾಳಿಯಿಂದಾಗಿ ಯುಎಇ ರಾಜಧಾನಿ ಅಬುಧಾಬಿಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಇರಾನ್ ದಾಳಿ ಕುರಿತು ಪ್ರತಿಕ್ರಿಯಿಸಿರುವ ಯುಎಇ, ಇದು ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ದಾಳಿಗೆ ಪ್ರತಿಕ್ರಿಯಿಸುವ ಹಕ್ಕು ನಮ್ಮದಾಗಿದೆ ಎಂದು ಹೇಳಿದೆ.

ಕತಾರ್, ಕುವೈತ್, ಬಹ್ರೇನ್, ಯುಎಇ, ಒಮನ್, ಲೆಬನಾನ್, ಸಿರಿಯಾ, ಇರಾನ್ ಮತ್ತು ಜೊರ್ಡಾನ್ ದೇಶಗಳಿಗೆ ಟರ್ಕಿಷ್ ಏರ್‌ಲೈನ್ಸ್‌ ತನ್ನೆಲ್ಲಾ ವಿಮಾನ ಸೇವೆಗಳು ಮಾರ್ಚ್ 2ರವರಗೆ ರದ್ದು ಮಾಡಿ ಅಧಿಕೃತ ಪ್ರಕಟನೆ ಹೊರಡಿಸಿದೆ. ಇತ್ತ ಇರಾನ್ ದಾಳಿ ಬೆನ್ನಲ್ಲೇ ಅಬುಧಾಬಿ, ಸಿರಿಯಾ ವಾಯುಮಾರ್ಗಗಳನ್ನು ಮುಚ್ಚಿದೆ.

ಇದನ್ನೂ ಓದಿ: ಅಬುಧಾಬಿ, ಬಹರೇನ್‌, ಕುವೈತ್‌.. ಮಧ್ಯಪ್ರಾಚ್ಯದ ಅಮೆರಿಕ ಸೇನಾ ನೆಲೆಗಳ ಮೇಲೆ ರುದ್ರತಾಂಡವ ಆರಂಭಿಸಿದ ಇರಾನ್‌!

ಇದನ್ನೂ ಓದಿ: ಸೌದಿ ಅರೇಬಿಯಾ, ಬಹರೇನ್‌, ಕತಾರ್‌ ದೇಶಗಳ ರಾಜಧಾನಿ, ದುಬೈ ಮೇಲೂ ಕ್ಷಿಪಣಿ ಮಳೆ ಸುರಿಸಿದ ಇರಾನ್‌!

Scroll to load tweet…

Source link

Leave a Reply

Your email address will not be published. Required fields are marked *