ರಕ್ತಚರಿತ್ರೆಯ ನಾಡಿನಲ್ಲಿ ಕ್ರಿಕೆಟ್ ಕ್ರಾಂತಿ; ಭೂಲೋಕದ ಸ್ವರ್ಗಕ್ಕೆ ಮೊಟ್ಟ ಮೊದಲ ರಣಜಿ ಕಿರೀಟ

ರಕ್ತಚರಿತ್ರೆಯ ನಾಡಿನಲ್ಲಿ ಕ್ರಿಕೆಟ್ ಕ್ರಾಂತಿ; ಭೂಲೋಕದ ಸ್ವರ್ಗಕ್ಕೆ ಮೊಟ್ಟ ಮೊದಲ ರಣಜಿ ಕಿರೀಟ


ಕಾಶ್ಮೀರ ಅಂದ್ರೆ ಥಟ್ಟನೆ ನೆನಪಾಗೋದು ಅಲ್ಲಿನ ಹಿಂಸಾಚಾರಗಳು, ಭಯೋತ್ಪಾದಕ ದಾಳಿಗಳು, ಇಂಡಿಯಾ ಪಾಕಿಸ್ತಾನ್ ಸಂಘರ್ಷ ಸೇರಿದಂತೆ ಅನೇಕ ಘಟನೆಗಳು. ಇದೇ ಕಾರಣಕ್ಕೆ ಭೂಲೋಕದ ಸ್ವರ್ಗ ಕಾಶ್ಮೀರ ಕೆಟ್ಟ ಘಟನೆಗಳಿಂದ ಸುದ್ದಿಯಾಗಿತ್ತು. ಆದರೆ ಅದೇ ಕಾಶ್ಮೀರದಲ್ಲಿ ಕಳೆದ ಒಂದು ಕ್ಷಣದಿಂದ ಪರಿಸ್ಥಿತಿ ಬದಲಾಗುತ್ತಿದೆ. ಬಂದೂಕು ಹಿಡಿಯೋ ಕೈಗಳು ಇದೀಗ ಕ್ರಿಕೆಟ್ ಬ್ಯಾಟ್ ಬಾಲ್ ಹಿಡಿಯುತ್ತಿವೆ. ಕಾಶ್ಮೀರ ದಲ್ಲಿ ಅದ್ಯಾವ ಕ್ರಿಕೆಟ್ ಕ್ರೇಜ್ ಬೆಳದಿದೆ ಅಂದ್ರೆ ಇಂದು ಮೊಟ್ಟಮೊದಲ ಬಾರಿಗೆ ರಣಜಿ ಕಪ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಹೌದು ಇದೇ ಮೊದಲ ಬಾರಿಗೆ ರಣಜಿ ಪೈನಲ್ಗೇರಿದ್ದ ಪ್ರಶಸ್ತಿ ಕಾಶ್ಮೀರ ಮೊದಲ ಯತ್ನದಲ್ಲಿಯೇ ರಣಜಿ ಕಪ್ ಗೆದ್ದು ಬೀಗಿದೆ.

ಪಂದ್ಯ ಹೀಗಿತ್ತು

ಹುಬ್ಬಳ್ಳಿಯ ರಾಜ್ ನಗರದಲ್ಲಿರುವ ಕೆಎಸ್‌ಸಿಎ ಸ್ಟೇಡಿಯಂನಲ್ಲಿ ಇದೇ ಪೆಬ್ರವರಿ 24 ರಿಂದ ರಣಜಿ ಪೈನಲ್ ಪಂದ್ಯ ಆರಂಭವಾಯಿತು. ಈ ಬಟ್ಟೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಕಾಶ್ಮೀರ ತಂಡ ಸುಡು ಬಿಸಿಲಿನ ಹುಬ್ಬಳ್ಳಿ ಮೈದಾನದಲ್ಲಿ ರನ್ ಹೊಳೆಯನ್ನೇ ಹರಿಸಿತ್ತು. ಒಂದುವರೆ ದಿನ ಆಟವಾಡಿದ ಕಾಶ್ಮೀರ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 58 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ಆಲೌಟ್ ಆಗುತ್ತಿದೆ. ನಂತರ ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ತಂಡ 293 ರನ್‌ಗಳಿಗೆ ಅಲೌಟ್ ಆಗಿದೆ.

ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ಪ್ರದರ್ಶನದ್ರೆ ಬೇರಾವ ಆಟಗಾರರು ಉತ್ತಮ ತೋರಲಿಲ್ಲ. ಹೀಗಾಗಿ ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ 293 ರನ್ ಗಳಿಗೆ ಸುಸ್ತಾಗಿತ್ತು. ಪಂದ್ಯದ ನಾಲ್ಕನೇ ದಿನದಂದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಪ್ರಶಸ್ತಿಕಾಶ್ಮಿರ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಆಟಗಾರ ಇಕ್ಬಾಲ್ ಶತಕ, ಕರ್ನಾಟಕದ ಜಯವನ್ನು ಮತ್ತಷ್ಟು ದೂರ ಮಾಡಿತು.

ಎಲ್ಲರ ಲೆಕ್ಕಾಚಾರ ಸುಳ್ಳು ಮಾಡಿದ ಜೆಕೆ

ಕಳೆದ 67 ವರ್ಷಗಳಿಂದ ಪ್ರತಿನಿಧಿಕಾಶ್ಮಿರ ತಂಡ ಕ್ರಿಕೆಟ್ ಆಡುತ್ತಿದೆ. ಆದರೆ ಇತಿಹಾಸದಲ್ಲಿ ಮೊದಲ ಗೆಲುವಿಗಾಗಿ ಕಾಶ್ಮೀರ ತಂಡ 23 ವರ್ಷಗಳ ಕಾಲ ಕಾಯಬೇಕಾಯಿತು. 1982-83ರಲ್ಲಿ ಸರ್ವಿಸಸ್ ತಂಡದ ವಿರುದ್ಧ ಮೊದಲ ಜಯ ಸಾಧಿಸಿತ್ತು. ಅನಂತರ ದೇಶಿ ಕ್ರಿಕೆಟ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತಂಡದಿಂದ ಬರದೇ ಇದ್ರು ಕಳೆದ ಕೆಲ ವರ್ಷಗಳಿಂದ ತಂಡ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಅದೇ ಮೊದಲ ಬಾರಿಗೆ 67 ವರ್ಷದ ಇತಿಹಾಸದಲ್ಲಿ ಪೈನಲ್ ಪ್ರವೇಶಿಸಿದ್ದಕಾಶ್ಮಿರ ತಂಡ ಮೊದಲ ತ್ನದಲ್ಲಿಯೇ ಗೆಲವು ಸಾಧಿಸಿದೆ.

ಕ್ರಿಕೆಟ್ ನೋಡಲು ಬಂದ ಕಾಶ್ಮೀರ ಸಿಎಂ

ಇನ್ನು ಕಾಶ್ಮಿರ ತಂಡ ಮೊದಲ ಬಾರಿಗೆ ರಣಜಿ ಕಪ್ ಎತ್ತಿಹಿಡಿಯೋದು ಖಾತ್ರಿಯಾಗಬೇಕೆಂದು ಬಯಸಿದ ಕಾಶ್ಮಿರ ಸಿಎಂ ಓಮರ್ ಅಬ್ದುಲ್ಲಾ, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಹುಬ್ಬಳ್ಳಿಗೆ ಆಗಮಿಸಿದ್ದರು. ನಿನ್ನೆ ರಾತ್ರಿಯೇ ಹುಬ್ಬಳ್ಳಿಗೆ ಬಂದಿದ್ದ ಓಮರ್ ಅಬ್ದುಲ್ಲಾ, ಇಂದು ಕೆಎಸ್ಸಿ ಮೈದಾನಕ್ಕೆ ಆಗಮಿಸಿ ಕ್ರಿಕೆಟ್ ವೀಕ್ಷಿಸಿದರು. ತಮ್ಮ ಆಟಗಾರರಿಗೆ ಪ್ರೋತ್ಸಾಹ ನೀಡಿದ್ರು. ಇಡೀ ದಿನದ ಮೈದಾನದಲ್ಲಿ ಐತಿಹಾಸಿಕ ಕ್ಷಣಗಳನ್ನು, ತಮ್ಮ ತಂಡದ ಆಟಗಾರರ ಇಷ್ಟವನ್ನು ನೋಡಿ ಸಂತೋಷ ಪಟ್ಟರು. ಈ ಬಗ್ಗೆ ಮಾತನಾಡಿರೋ ಓಮರ್ ಅಬ್ದುಲ್ಲಾ, ನಮ್ಮ ತಂಡ ಈ ಹಂತಕ್ಕೆ ಬರೋದಿಲ್ಲ ಅಂತ ಎಲ್ಲರೂ ಹೇಳಿದ್ದರು. ಆದರೆ ನಮ್ಮ ಆಟಗಾರರು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಪೈನಲ್‌ಗೆ ಬಂದಿದ್ದಾರೆ. ಪೈನಲ್‌ನಲ್ಲಿಯೂ ಉತ್ತಮ ಆಟವಾಡಿದ್ದಾರೆ. ಈ ಬಾರಿ ಕಪ್ ನಾವು ಹೋಗ್ತೇವೆ ಅಂತ ಹೇಳಿದ್ದರು. ಅದರಂತೆ ಜೆಕೆ ತಂಡಕ್ಕೆ ಚಾಂಪಿಯನ್ ಪಟ್ಟ ಒಲಿದಿದೆ.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *