Headlines

ಭಾರತಿ-ವಿಷ್ಣುವರ್ಧನ್ ಮದುವೆಯಾಗಿ 51 ವರ್ಷ… ಮತ್ತೆ ವೈರಲ್ ಆಯ್ತು ಜೋಡಿಯ ಮದುವೆ ಫೋಟೊ | Bharathi Vishnuvardhan Marriage Photo Going Viral After 51 Year Of Marriage

ಭಾರತಿ-ವಿಷ್ಣುವರ್ಧನ್ ಮದುವೆಯಾಗಿ 51 ವರ್ಷ… ಮತ್ತೆ ವೈರಲ್ ಆಯ್ತು ಜೋಡಿಯ ಮದುವೆ ಫೋಟೊ | Bharathi Vishnuvardhan Marriage Photo Going Viral After 51 Year Of Marriage



ಭಾರತಿ-ವಿಷ್ಣುವರ್ಧನ್ ಮದುವೆಯಾಗಿ 51 ವರ್ಷ… ಮತ್ತೆ ವೈರಲ್ ಆಯ್ತು ಜೋಡಿಯ ಮದುವೆ ಫೋಟೊ | Bharathi Vishnuvardhan Marriage Photo Going Viral After 51 Year Of Marriage

Bharathi Vishnuvardhan : ಕನ್ನಡ ಚಿತ್ರರಂಗದ ಜನಪ್ರಿಯ ತಾರಾ ಜೋಡಿ ಅಂದ್ರೆ ಅದು ಭಾರತಿ -ವಿಷ್ಣುವರ್ಧನ್. ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು 51 ವರ್ಷಗಳ ಹಿಂದೆ ಫೆಬ್ರುವರಿ 27ರಂದು. ಇದೀಗ ಮತ್ತೆ ಈ ಜೋಡಿಯ ಮದುವೆಯ ಫೋಟೊ ವೈರಲ್ ಆಗುತ್ತಿದೆ. ಇವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? 

ಭಾರತಿ ವಿಷ್ಣುವರ್ಧನ್ ಮದುವೆ ಫೋಟೊ

ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಜನಪ್ರಿಯತೆ ಪಡೆದವರು, ಭಾರತಿ ಮತ್ತು ವಿಷ್ಣುವರ್ಧ. ಈ ಜೋಡಿ ಕನ್ನಡದ ಜನಪ್ರಿಯ ತಾರಾ ಜೋಡಿ ಕೂಡ ಹೌದು. ಭಾರತಿ ವಿಷ್ಣುವರ್ಧನ್ ಅವರ 51ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಂದರೆ ಫೆಬ್ರುವರಿ 27ರಂದು ಇದೀಗ ಮತ್ತೆ ಈ ಜೋಡಿಯ ಮದುವೆಯ ಸುಂದರವಾದ ಫೋಟೊ ವೈರಲ್ ಆಗುತ್ತಿದೆ. ಚಿತ್ರರಂಗದಲ್ಲಿ ಆಗಲೇ ಸ್ಟಾರ್ ನಟಿ ಎಂದು ಗುರುತಿಸಿಕೊಂಡಿದ್ದ, ಹಿರಿಯ ನಟಿ ಭಾರತಿ ಅವರನ್ನು ಆಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟ ಕಿರಿಯ ನಟ ವಿಷ್ಣುವರ್ಧನ್ ಪ್ರೀತಿಸಿ ಮದುವೆಯಾಗಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಭಾರತಿ ವಿಷ್ಣುವರ್ಧನ್ ಅವರ ಲವ್ ಸ್ಟೋರಿ ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ. ‘ಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ‘ದೂರದ ಬೆಟ್ಟ’ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಆ ಚಿತ್ರದ ಹೀರೋ ನಟ ಡಾ ರಾಜ್‌ಕುಮಾರ್ ತಮ್ಮ ಪಾತ್ರದ ಶೂಟಿಂಗ್ ಮುಗಿಸಿ ಮನೆಗೆ ಹೊರಟಿರುತ್ತಾರೆ. ಆಗ ದೂರದ ಬೆಟ್ಟ ಚಿತ್ರದ ನಾಯಕಿಯಾಗಿದ್ದ ನಟಿ ಭಾರತಿ ಅವರು ಅಲ್ಲೇ ಇದ್ದರು. ಈ ಸಂದರ್ಭದಲ್ಲಿ ತಮ್ಮ ‘ನಾಗರಹಾವು’ ಚಿತ್ರದ ‘100ನೇ ದಿನ’ದ ಸೆಲೆಬ್ರೇಶನ್‌ಗೆ ಜನಪ್ರಿಯ ನಟಿ ಭಾರತಿಯವರನ್ನು ಆಹ್ವಾನಿಸಲು ವಿಷ್ಣುವರ್ಧನ್ ಬಂದಿದ್ದರು. ಆ ಕಾರ್ಯಕ್ರಮದಲ್ಲೂ ಭಾರತಿ ಭಾಗವಹಿಸಿದ್ದರು.

ಬಳಿಕ, ನಟ ವಿಷ್ಣುವರ್ಧನ್ ಹಾಗು ನಟಿ ಭಾರತಿ ‘ಮನೆ ಬೆಳಗಿದ ಸೊಸೆ’ ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿದರು. ಈ ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರ ನಡುವೆ ಸ್ನೇಹ ಚಿಗುರೊಡೆದಿತ್ತು. ಇನ್ನು ಭಾರತಿ-ವಿಷ್ಣುವರ್ಧನ್ ಸಂಗೀತ ಪ್ರೇಮ ಅವರಿಬ್ಬರನ್ನೂ ಮತ್ತಷ್ಟು ಹತ್ತಿರಕ್ಕೆ ತಂದಿತು. ಭಾರತಿ ಸಂಗೀತ ಕಲಿಯುತ್ತಿದ್ದರು, ವಿಷ್ಣುವರ್ಧನ್‌ ಕೂಡ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ಸಿನಿಮಾ ಶೂಟಿಂಗ್ ಬಿಡುವಿನ ವೇಳೆ ಇಬ್ಬರು ಜೊತೆಯಾಗಿ ಹಾಡುತ್ತಿದ್ದರು. ಹೀಗೆ ಇಬ್ಬರ ಸ್ನೇಹ ಮತ್ತಷ್ಟು ಗಾಢವಾಯ್ತು. ಬಳಿಕ ಹಲವಾರು ಸಿನಿಮಾಗಳಲ್ಲಿ ಈ ಜೋಡಿ ಜೊತೆಯಾಗಿ ನಟಿಸಿದರು. ವಿಷ್ಣುವರ್ಧನ್ ಹಾಗೂ ಭಾರತಿ ಇಬ್ಬರೂ ‘ದೇವರ ಗುಡಿ’, ‘ಅಣ್ಣ ಅತ್ತಿಗೆ’, ‘ಒಂದೇ ರೂಪ ಎರಡು ಗುಣ’, ‘ಭಾಗ್ಯ ಜ್ಯೋತಿ’, ‘ನಾಗರಹೊಳೆ’, ‘ಬಂಗಾರದ ಜಿಂಕೆ’ ಸಿನಿಮಾಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು.

ಕನ್ನಡ ಚಿತ್ರರಂಗದಲ್ಲಿ ಭಾರತಿ ಅವರು ವಿಷ್ಣುವರ್ಧನ್ ಅವರಿಗಿಂತ ಸೀನಿಯರ್. ಈಗಾಗಲೇ ಭಾರತಿ ಡಾ. ರಾಜಕುಮಾರ್ ಜೊತೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಗಳಿಸಿದ್ದರು. ಇಬ್ಬರು ಭೇಟಿಯಾದಾಗ ವಿಷ್ಣು ಆಗಷ್ಟೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಹಾಗಂತ ವಯಸ್ಸಿನ ಅಂತರ ಹೆಚ್ಚೇನೂ ಇಲ್ಲ. ಭಾರತಿಯವರು ವಿಷ್ಣುವರ್ಧನ್ ಅವರಿಗಿಂತ ಕೇವಲ ಒಂದು ತಿಂಗಳು ಹಿರಿಯರು. ಆದರೂ ನಟಿಯ ಪ್ರೇಮದಲ್ಲಿ ಬಿದ್ದ ವಿಷ್ಣು, ಒಂದು ದಿನ ಕಾರಲ್ಲೇ ಭಾರತಿಯವರಿಗೆ ಪ್ರಪೋಸ್ ಮಾಡಿ ಬಿಟ್ಟರು, ಇಬ್ಬರ ಆಸಕ್ತಿ, ಇಷ್ಟಗಳು ಎಲ್ಲವೂ ಒಂದೇ ಆಗಿರೋದರಿಂದ ಭಾರತಿಯವರಿಗೆ ಪ್ರೀತಿಯನ್ನು ಒಪ್ಪಿಕೊಳ್ಳಲು ಹೆಚ್ಚು ಸಮಯ ಬೇಕಾಗಿರಲಿಲ್ಲ. 27 ಫೆಬ್ರವರಿ 1975ರಂದು ವಿಷ್ಣುವರ್ಧನ್-ಭಾರತಿ ಮದುವೆಯಾಗಿ ದಾಂಪತ್ಯಕ್ಕೆ ಕಾಲಿಟ್ಟರು. ಮದುವೆ ಬಳಿಕ ಭಾರತಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಕಡಿಮೆ, ಆದರೆ ಪತಿಯ ಬೆಂಬಲವಾಗಿ ಇವರು ನಿಂತರು. ಇವರಿಬ್ಬರ ದಾಂಪತ್ಯ ಜೀವನ ಯುವ ಜೋಡಿಗಳಿಗೆ ಮಾದರಿಯಂತಾಗಿತ್ತು. ಆದರೆ 30 ಡಿಸೆಂಬರ್ 2009ರಲ್ಲಿ ನಟ ವಿಷ್ಣುವರ್ಧನ್ ತಮ್ಮ 59ನೆಯ ವಯಸ್ಸಿನಲ್ಲಿ ಮೃತರಾಗಿ, ಕರುನಾಡನ್ನು ಶೋಕದಲ್ಲಿ ಮುಳುಗಿಸಿದ್ದರು.



Source link

Leave a Reply

Your email address will not be published. Required fields are marked *