Headlines

Nanda Gokula Serial: ತನ್ನ ಬೇಳೆ ಬೇಯಿಸಿಕೊಳ್ಳಲು, ಬಾಕಿಯವ್ರ ಖುಷಿಗೆ ಕೊಳ್ಳಿ ಇಟ್ಟ ಪ್ರಿಯಾ! | Colors Kannada Nanda Gokula Serial Kannada Priya Entry Sad In Family

Nanda Gokula Serial: ತನ್ನ ಬೇಳೆ ಬೇಯಿಸಿಕೊಳ್ಳಲು, ಬಾಕಿಯವ್ರ ಖುಷಿಗೆ ಕೊಳ್ಳಿ ಇಟ್ಟ ಪ್ರಿಯಾ! | Colors Kannada Nanda Gokula Serial Kannada Priya Entry Sad In Family



Nanda Gokula Serial: ತನ್ನ ಬೇಳೆ ಬೇಯಿಸಿಕೊಳ್ಳಲು, ಬಾಕಿಯವ್ರ ಖುಷಿಗೆ ಕೊಳ್ಳಿ ಇಟ್ಟ ಪ್ರಿಯಾ! | Colors Kannada Nanda Gokula Serial Kannada Priya Entry Sad In Family

Nanda Gokula Kannada Serial Episode: ನಂದಗೋಕುಲ ಧಾರಾವಾಹಿಯಲ್ಲಿ ಪ್ರಿಯಾ ಬಂದಿದ್ದೇ ಬಂದಿದ್ದು, ಮೀನಾ, ಅಮೂಲ್ಯ, ಗಿರಿಜಾರಿಗೆ ಬಹಳ ಬೇಸರ ಆಗುತ್ತಿದೆ. ತನ್ನ ಬೇಳೆ ಬೇಯಿಸಿಕೊಳ್ಳಲು ಪ್ರಿಯಾ, ಬೇರೆಯವರಿಗೆ ಬೇಸರ ಮಾಡುತ್ತಿದ್ದಾಳೆ. ಮುಂದೆ ಏನಾಗುವುದು? 

‘ನಂದಗೋಕುಲ’ ಧಾರಾವಾಹಿಯಲ್ಲಿ ರೋಚಕ ತಿರುವು ಸಿಕ್ಕಿದೆ. ಇದೀಗ ಇಡೀ ಧಾರಾವಾಹಿ ಕಥೆಯ ಹಾದಿಯೇ ಬದಲಾಗುವ ಸೂಚನೆ ಸಿಕ್ಕಿದೆ. ನಂದಕುಮಾರ್ ಅವರ ಮುದ್ದಿನ ಹಿರಿ ಸೊಸೆ ಪ್ರಿಯಾಳಿಂದಲೇ ಇದೆಲ್ಲ ಆಗುತ್ತಿರುವುದು.

ಪ್ರಿಯಾ ಕಂಡರೆ ತುಂಬ ಇಷ್ಟ

ತಾನು ತೋರಿಸಿದ ಹುಡುಗಿಯನ್ನೇ ತನ್ನ ಮೂವರೂ ಮಕ್ಕಳು ಮದುವೆಯಾಗಬೇಕು ಎಂದು ನಂದಕುಮಾರ್‌ ಅಂದುಕೊಂಡಿದ್ದನು. ಆದರೆ ಎರಡನೇ ಮಗ ಕೇಶವ-ಮೀನಾ ಲವ್‌ ಮ್ಯಾರೇಜ್‌ ಆದರೆ, ಅತ್ತ ನಂದನಿಗೆ ಗೊತ್ತಾಗದಂತೆ ವಲ್ಲಭ ಕೂಡ ಅಮೂಲ್ಯಳನ್ನು ಮದುವೆಯಾದ. ಆದರೆ ಹಿರಿಯ ಮಗ ಮಾಧವ ಮಾತ್ರ, ತಂದೆಯ ಮಾತಿಗೆ ಬೆಲೆ ನೀಡಿ ಅವರು ಆಯ್ಕೆ ಮಾಡಿದ ಹುಡುಗಿಯನ್ನೇ ಮದುವೆಯಾಗುತ್ತಾನೆ. ಹೀಗಾಗಿ ನಂದಕುಮಾರ್‌ಗೆ ಮಾಧವ, ಅವನ ಪತ್ನಿ ಪ್ರಿಯಾ ಮೇಲೆ ತುಂಬ ಪ್ರೀತಿ, ಹೆಮ್ಮೆ.

ಪ್ರಿಯಾಳಿಂದ ಎಲ್ಲರಿಗೂ ಬೇಸರ

ಈಗ ಪ್ರಿಯಾ ಏನೇ ಹೇಳಿದರೂ ಕೂಡ, ಅದು ಸರಿಯಾಗಿಯೇ ಇರುತ್ತದೆ ಎಂದು ನಂದಕುಮಾರ್‌ ನಂಬಿದ್ದಾನೆ. ಹೀಗಾಗಿ ಅವಳು ಕೂಡ ಎಲ್ಲ ವಿಷಯದಲ್ಲಿಯೂ ಮಾವನನ್ನು ಇಂಪ್ರೆಸ್‌ ಮಾಡಬೇಕು ಎಂದುಕೊಂಡಿದ್ದಾಳೆ. ತನ್ನ ನಡುವಳಿಕೆಯಿಂದ ಬೇರೆಯವರಿಗೆ ಬೇಸರ ಆಗುತ್ತಿದೆ ಎಂದು ಅವಳು ಯೋಚನೆ ಮಾಡ್ತಿಲ್ಲ.

ಭರ್ಜರಿ ಟ್ವಿಸ್ಟ್‌ ಸಿಕ್ಕಿತು

ಅತ್ತೆ ಗಿರಿಜಾ, ಮೀನಾ, ಅಮೂಲ್ಯ ಒಂದು ಕಡೆಯಾದರೆ, ಪ್ರಿಯಾ ಮತ್ತೊಂದು ಕಡೆ ಇದ್ದಾಳೆ. ಬೇರೆಯವರನ್ನು ನೋಡಿದರೆ ಪ್ರಿಯಾಗೆ ಹೊಟ್ಟೆಕಿಚ್ಚು ಆಗುವುದು. ಪ್ರಿಯಾಳಿಂದ ಇನ್ನುಳಿದ ಸೊಸೆಯಂದಿರು, ಅತ್ತೆಗೆ ಬೇಸರ ಆಗ್ತಿದೆ. ಇನ್ನು ನಂದಕುಮಾರನ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಶುರುವಾಗಿವೆ. ಇದು ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲವಿದೆ. ಪ್ರಿಯಾಳ ಗುಣವೋ ಅಥವಾ ಅವಳು ವಿಲನ್‌ ಎಂಬ ಪ್ರಶ್ನೆ ಶುರುವಾಗಿದೆ.

ವಲ್ಲಭವನ ಪ್ಲ್ಯಾನ್‌ ಯಶಸ್ಸು ಪಡೆಯುತ್ತಾ?

ಮದುವೆಯಾದ ಮೇಲೆ ಅಮೂಲ್ಯ ಇನ್ನೂ ತನ್ನ ತವರು ಮನೆಗೆ ಹೋಗಿಲ್ಲ. ಅಮೂಲ್ಯ ತನ್ನ ತಾಯಿ ಜೊತೆ ಮಾತಾಡಲಿ ಎಂದು ವಲ್ಲಭ ಅಂದುಕೊಂಡಿದ್ದಾನೆ. ಈ ನಡುವೆ ಹೋಳಿ ಹಬ್ಬವನ್ನು ಬಳಸಿಕೊಂಡು ಅಮೂಲ್ಯಳನ್ನು ತವರಿಗೆ ಕಳಿಸಲು ವಲ್ಲಭ ಪ್ಲಾನ್ ಮಾಡಿದ್ದಾನೆ.

ಮುಂದೆ ಏನಾಗಲಿದೆ?

ಅಮೂಲ್ಯ ತವರಿಗೆ ಹೋಗಬೇಕು ಎಂಬ ಆಸೆ ಈಡೇರುತ್ತಾ? ವಲ್ಲಭನ ಪ್ಲ್ಯಾನ್‌ ಏನು? ಹಿರಿ ಸೊಸೆ ಪ್ರಿಯಾಳ ಅಸಲಿ ಮುಖ ನಂದಕುಮಾರ್ ಮುಂದೆ ಬಯಲಾಗುತ್ತಾ? ಎಂಬ ಕುತೂಹಲಕಾರಿ ಸಂಚಿಕೆಗಳು ಪ್ರಸಾರ ಆಗಲಿವೆ. ತಪ್ಪದೇ ವೀಕ್ಷಿಸಿ ‘ನಂದಗೋಕುಲ’, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ, ನಿಮ್ಮ ನೆಚ್ಚಿನ ಕಲರ್ಸ್ ಕನ್ನಡದಲ್ಲಿ.



Source link

Leave a Reply

Your email address will not be published. Required fields are marked *