Headlines

ಕಟಕಟೆಯಲ್ಲಿ ದಳಪತಿ ವಿಜಯ್ ದಾಂಪತ್ಯ: ತ್ರಿಷಾ ಹಳೆ ವಿಡಿಯೋ ವೈರಲ್ ಆಗುತ್ತಿರೋದೇಕೆ?

ಕಟಕಟೆಯಲ್ಲಿ ದಳಪತಿ ವಿಜಯ್ ದಾಂಪತ್ಯ: ತ್ರಿಷಾ ಹಳೆ ವಿಡಿಯೋ ವೈರಲ್ ಆಗುತ್ತಿರೋದೇಕೆ?


ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (ತಲಪತಿ ವಿಜಯ್) ಅವರ ಪತ್ನಿ ಸಂಗೀತ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ, ಇಬ್ಬರ 27 ವರ್ಷಗಳ ದಾಂಪತ್ಯ ಮುರಿದು ಬೀಳುವ ಸ್ಥಿತಿಯಲ್ಲಿದೆ. ನಟಿಯರೊಟ್ಟಿಗೆ ವಿಜಯ್ ಸಂಬಂಧ ಹೊಂದಿದ್ದು, ಅದೇ ಕಾರಣಕ್ಕೆ ತಮಗೆ ಬೇಕಾದುದನ್ನು ಕೊಡಿಸುವುದಾಗಿ ವಿಜಯ್ ಪತ್ನಿ ಸಂಗೀತ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ದಂಪತಿಯ ವಿಚ್ಛೇದನಕ್ಕೆ ನಟಿ ತ್ರಿಷಾ ಕಾರಣ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ನಡವೆಯೇ ತ್ರಿಷಾ ಅವರ ಹಳೆಯ ವಿಡಿಯೋ ಒಂದನ್ನು ಟ್ರೋಲ್ ಪೇಜುಗಳು ಹಂಚಿಕೊಳ್ಳುತ್ತಿವೆ.

ತ್ರಿಷಾ ಮತ್ತು ವಿಜಯ್ ಸಂಬಂಧದ ಬಗ್ಗೆ ಮೊದಲಿನಿಂದಲೂ ಗುಸು-ಗುಸು ನಡೆದೇ ಇತ್ತು. ಇದೀಗ ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿ ಪ್ರಮುಖ ನಟಿಯ ಉಲ್ಲೇಖ ಮಾಡಿದ್ದು, ವಿಜಯ್ ಜೊತೆಗೆ ತ್ರಿಷಾ ಅವರೇ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಜೊತೆಗೆ ವಿಜಯ್ ಹಾಗೂ ತ್ರಿಷಾ ಅವರ ಹಳೆಯ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿದೆ. ಅದರಲ್ಲೂ ಒಂದು ವಿಡಿಯೋ ಅಂತೂ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ:ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಳಪತಿ ವಿಜಯ್ ಪತ್ನಿ: ನಟಿ ಜೊತೆ ಅನೈತಿಕ ಸಂಬಂಧ ಆರೋಪ

ಇದೀಗ ವಿಜಯ್ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದು, ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ವಿಜಯ್, ಡಿಎಂಕೆಗೆ ಗಟ್ಟಿ ಎದುರಾಳಿ ಎನಿಸಿಕೊಂಡಿದೆ. ಇದೀಗ ಅವರ ವಿಚ್ಛೇದನದ ಸುದ್ದಿ ಹೊರಬೀಳುತ್ತಿದ್ದಂತೆ ತ್ರಿಷಾ ಅವರ ವಿಡಿಯೋ ಹಳೆಯ ವೈರಲ್ ಆಗಿದ್ದು, ಸಂದರ್ಶನದಲ್ಲಿ ತ್ರಿಷಾ ಅವರು ತಮಗೆ ತಮಿಳುನಾಡಿನ ಸಿಎಂ ಆಗುವ ಆಸೆ ಇದೆ ಎಂದು ಹೇಳಿದ್ದಾರೆ. ಇದೀಗ ನೆಟ್ಟಿಗರು ಈ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ, ತ್ರಿಷಾ ಸಿಎಂ ಆಗುವ ಆಸೆಯಿಂದ ವಿಜಯ್ ಜೊತೆಗೆ ಇದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಇನ್ನು ಕೆಲವರು ತ್ರಿಷಾ ಅವರನ್ನು ಜಯಲಲಿತಾ ಅವರೊಟ್ಟಿಗೆ ಹೋಲಿಕೆ ಮಾಡುತ್ತಿದ್ದಾರೆ. ಜಯಲಲಿತಾ, ಎಂಜಿಆರ್ ಜೊತೆಗೆ ಆಪ್ತ ಸಂಬಂಧ ಹೊಂದಿದ್ದರು. ಎಂಜಿಆರ್ ಕೂಡ ಬೇರೆ ಮದುವೆ ಆಗುತ್ತಿದೆ. ಆದರೆ ಎಂಜಿಆರ್ ಕಾಲವಾದ ಬಳಿಕ ಜಯಲಲಿತಾ ಸಿಎಂ ಆದರು. ಈಗ ತ್ರಿಷಾ ಅವರನ್ನು ಜಯಲಲಿತಾ ಅವರೊಟ್ಟಿಗೆ ಹೋಲಿಸಲಾಗುತ್ತಿಲ್ಲ, ತ್ರಿಷಾ ಸಹ ಮುಂದೊಮ್ಮೆ ಸಿಎಂ ಆಗುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 6:14 pm, ಶನಿ, 28 ಫೆಬ್ರವರಿ 26



Source link

Leave a Reply

Your email address will not be published. Required fields are marked *