ಡಾಗ್ ಸತೀಶ್, ಬಿಗ್ ಬಾಸ್ (ಬಿಗ್ ಬಾಸ್) ಬಂದ ಮೇಲೆ ಹೆಚ್ಚು ಜನಪ್ರಿಯರಾಗಿದ್ದಾರೆ. ಬಿಗ್ಬಾಸ್ ಇಂದ ಹೊರಬಂದ ಬಳಿಕ ಡಾಗ್ ಸತೀಶ್ ಒಳ್ಳೆಯ ಟ್ರೋಲ್ ಸರಕಾಗಿದ್ದಾರೆ. ಅವರ ಸುಳ್ಳುಗಳು, ಅವರ ಒಣಪ್ರತಿಷ್ಟೆ, ತೋರಿಕೆಯ ಸಿರಿವಂತಿಕೆ, ಸ್ವಹೊಗಳಿಕೆ ಎಲ್ಲವೂ ಟ್ರೋಲರ್‌ಗಳಿಗೆ ವಸ್ತುವಾಗಿದೆ. ಆದರೆ ಸತೀಶ್ ಮಾತ್ರ, ತಮ್ಮ ಶ್ರೇಷ್ಠತೆಯ ವ್ಯಸನವನ್ನು ಮುಂದುವರೆಸಿರುವುದು ಮಾತ್ರವೇ ಅಲ್ಲದೆ, ಇತರರನ್ನು ಕ್ಷುಲ್ಲಕವಾಗಿ ಕಂಡು ಹೇಳಿಕೆಗಳನ್ನು ನೀಡುತ್ತಿದೆ. ಇದೀಗ ಡಾಗ್ ಸತೀಶ್ ಅವರು ಸುದೀಪ್ ಅವರನ್ನು ಕಿಚಾಯಿಸುವ ಪ್ರಯತ್ನ ಮಾಡಿದ್ದು, ಸುದೀಪ್ ಆಪ್ತರುಗಳಾದ ವಿನಯ್ ಗೌಡ ಮತ್ತು ಬುಜ್ಜಿ ರಜತ್, ಡಾಗ್ ಸತೀಶ್ ಅವರಿಗೆ ಸ್ಟ್ರಾಂಗ್ ಆಗಿಯೇ ಎಚ್ಚರಿಕೆ ನೀಡಿದ್ದಾರೆ.
ಸತೀಶ್ ಅವರ ಹೆಸರಿನ ಇನ್ಸ್ಟಾಗ್ರಾಮ್ ಪೇಜಿನಲ್ಲಿ ಅವರ ವಿಡಿಯೋ ಒಂದನ್ನು ಹಂಚಿಕೊಂಡಿದೆ, ಇದೀಗ ಈ ವಿಡಿಯೋ ಸುದೀಪ್ ಅಭಿಮಾನಿಗಳ ಸಿಟ್ಟು ನೆತ್ತಿಗೆ ಏರಿದೆ. ವಿಡಿಯೋದಲ್ಲಿ ಸತೀಶ್ ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಸುದೀಪ್ ಅವರ ‘ಅವರು ಯಾರು ಗೊತ್ತಾ?’ ಹಾಡು ಹಾಕಲಾಗಿದೆ. ವಿಡಿಯೋ ಮೇಲೆ, ‘ಅಣ್ಣ ಸೂಸು ಮಾಡಿದರೂ ನ್ಯೂಸ್ ಆಗುತ್ತೆ’ ಎಂದಿದೆ. ಸತೀಶ್ ಕಾಲಿನ ಬಳಿ, ‘ಅಣ್ಣ ಯಾರ್ ಗೊತ್ತ?’ ಎಂಬ ಸಾಲು ಬರೆದಿದೆ.
ಸತೀಶ್ ಅವರ ಅಧಿಕೃತ ಖಾತೆಗೂ ಈ ವಿಡಿಯೋ ಟ್ಯಾಗ್ ಆಗಿದ್ದು, ಸುದೀಪ್ ಅವರನ್ನು ಅವಮಾನಿಸಲೆಂದೇ ಹೀಗೆ ಮಾಡಿರುವುದು ವಿಡಿಯೋ ನೋಡಿ ತಿಳಿಯಿರಿ. ಜೊತೆಗೆ, ಪರೋಕ್ಷವಾಗಿ ತಾನು ಸುದೀಪ್ ಇನ್ನೂ ದೊಡ್ಡ ಸೆಲೆಬ್ರಿಟಿ ಎಂದು ಬಿಂಬಿಸಿಕೊಳ್ಳುವ ಸತೀಶ್ ಅವರ ಪ್ರಯತ್ನವೂ ಕಾಣುತ್ತಿದೆ. ಇದೀಗ ಈ ವಿಡಿಯೋ ಸುದೀಪ್ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿಗೆ ಹೊಡೆಯಲು ಯತ್ನಿಸಿದ್ದ ಡಾಗ್ ಸತೀಶ್?
ವಿಡಿಯೋಕ್ಕೆ ಕಮೆಂಟ್ ಮಾಡಿರುವ ವಿನಯ್ ಗೌಡ, ‘ಮೊದಲು ಹಾಡು ಡಿಲೀಟ್ ಮಾಡು, ಇಲ್ಲ ಅಂದ್ರೆ ಸ್ವಲ್ಪ ತಾಳು ನಿನ್ನ ಜನ್ನರು ನಾಯಿ ತರ ಹೊಡಿತಾರೆ ಆ ವಿಡಿಯೋ ನಾನ್ ಹಾಕ್ತಿನಿ’. ಕಮೆಂಟ್’ನಲ್ಲಿಯೇ ಸತೀಶ್ ಅನ್ನು ಸಿಟ್ಟಿನಿಂದ ನಿಂದಿಸಿದ್ದಾರೆ ಸಹ. ಇನ್ನು ಅದೇ ವಿಡಿಯೋಕ್ಕೆ ರಜತ್ ಸಹ ಕಮೆಂಟ್ ಮಾಡಿದ್ದು, ‘ವಿಡಿಯೋ ತೆಗೆಯೋ ಕಿತ್ತೋದವನೆ, ಸುದೀಪ್ ಸರ್ ಸಾಂಗ್ ಹೆಂಗೋ ಹಾಕಿದೆ. ಸಾಂಗ್ ಡಿಲೀಟ್ ಆಗ್ಲಿಲ್ಲ ಅಂದ್ರೆ ಇದೆ ನಿಂಗೆ, ಆಟ ಆಡ್ತೀಯ ಕಿತ್ತೋದವನೆ, ಕಾಲ್ ಮಾಡ್ತಿದ್ದೀನಿ ಫೋನ್ ಪಿಕ್ ಮಾಡು’ ಎಂದು ಖಡಕ್ ಆಗಿಯೇ ವಾರ್ನಿಂಗ್ ಮಾಡಿದ್ದಾರೆ.
ವಿನಯ್ ಮತ್ತು ರಜತ್ ಮಾತ್ರವೇ ಅಲ್ಲದೆ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಧನರಾಜ್ ಇನ್ನೂ ಕೆಲವರು ವಿಡಿಯೋಕ್ಕೆ ಕಮೆಂಟ್ ಮಾಡಿದ್ದು, ಸತೀಶ್‌ಗೆ ಹಿಗ್ಗಾ ಮುಗ್ಗಾ ಬೈದಿದ್ದಾರೆ. ಆದರೆ ಡಾಗ್ ಸತೀಶ್ ಆ ವಿಡಿಯೋವನ್ನು ಡಿಲೀಟ್ ಮಾಡಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ