ಮೊದಲ ರಾತ್ರಿ ವರನಿಗೆ ಬಿಗ್ ಶಾಕ್, ಚಾಕು ತೋರಿಸಿದ ಪತ್ನಿ ಮರುದಿನ ಮಾಡಿದ್ದೇನು ಗೊತ್ತಾ? | Bride Attacked Groom With Knife On Wedding Night And Flee With Lover

ಮೊದಲ ರಾತ್ರಿ ವರನಿಗೆ ಬಿಗ್ ಶಾಕ್, ಚಾಕು ತೋರಿಸಿದ ಪತ್ನಿ ಮರುದಿನ ಮಾಡಿದ್ದೇನು ಗೊತ್ತಾ? | Bride Attacked Groom With Knife On Wedding Night And Flee With Lover



ಮೊದಲ ರಾತ್ರಿ ವರನಿಗೆ ಬಿಗ್ ಶಾಕ್, ಚಾಕು ತೋರಿಸಿದ ಪತ್ನಿ ಮರುದಿನ ಮಾಡಿದ್ದೇನು ಗೊತ್ತಾ? | Bride Attacked Groom With Knife On Wedding Night And Flee With Lover

bride cheating : ಮದುವೆ ಕನಸು ಕಂಡಿದ್ದ ವರನಿಗೆ ಮಹಾ ಮೋಸವಾಗಿದೆ. ಫಸ್ಟ್ ನೈಟ್ ನಲ್ಲೇ ಹುಡುಗಿ ಕೈಕೊಟ್ಟಿದ್ದಾಳೆ. ಚಾಕು ದಾಳಿ ನಡೆಸಿದ್ದಲ್ದೆ ಚಿಕ್ಕಪ್ಪನ ಜೊತೆ ಮನೆ ಖಾಲಿ ಮಾಡಿದ್ದಾಳೆ. 

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮೊದಲ ರಾತ್ರಿ ವಧು ವರನ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾಳೆ. ಭಯದಲ್ಲಿ ದೂರ ಮಲಗಿದ್ದವನಿಗೆ ಬೆಳಿಗ್ಗೆ ಶಾಕ್ ಕಾದಿತ್ತು. ಮಾತುಕತೆ ಮೂಲಕ ಸರಿಪಡಿಸಿಕೊಳ್ಳುವ ಭರವಸೆಯಲ್ಲಿದ್ದ ವರ, ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಪತ್ನಿ ಚಿಕ್ಕಪ್ಪನ ಜೊತೆ ಪರಾರಿಯಾಗಿದ್ದು ಮಾತ್ರವಲ್ಲ ಮನೆಯನ್ನು ದೋಚಿದ್ದಾಳೆ.

ಚಿಕ್ಕಪ್ಪನ ಜೊತೆ ವಧು ಪರಾರಿ

ಘಟನೆ ಉತ್ತರ ಪ್ರದೇಶ (Uttar Pradesh)ದ ಹತ್ರಾಸ್ ನಲ್ಲಿ ನಡೆದಿದೆ. ಫೆಬ್ರವರಿ 21 ರಂದು ಅದ್ಧೂರಿಯಾಗಿ ಮದುವೆ ನಡೆದಿತ್ತು. ವರ ಹೊಸ ಜೀವನದ ಕನಸು ಕಂಡಿದ್ದ. ಮದುವೆಯಲ್ಲಿ ಯಾವುದೇ ಸಮಸ್ಯೆ ಆಗಿರಲಿಲ್ಲ. ವಧು ಕೂಡ ಖುಷಿಯಾಗಿ ಮದುವೆ ಕಾರ್ಯದಲ್ಲಿ ಪಾಲ್ಗೊಂಡಿದ್ದಳು. ಫೆಬ್ರವರಿ 22 ರಂದು ವಧು, ವರನ ಮನೆಗೆ ಬಂದಿದ್ದಾಳೆ. ರಾತ್ರಿ ವರ, ವಧುವನ್ನು ಟಚ್ ಮಾಡ್ತಿದ್ದಂತೆ ಚಾಕುವಿನಿಂದ ದಾಳಿ ನಡೆಸಿದ್ದಾಳೆ. ನಂತ್ರ ಚಿಕ್ಕಪ್ಪನ ಜೊತೆ ಓಡಿ ಹೋಗಿದ್ದಾಳೆ.

ಕೋಡಿಮಠ ಶ್ರೀ ಹೇಳಿದ್ರು ದರ್ಶನ್ ಭವಿಷ್ಯ! ರಾಜಕೀಯದಲ್ಲಿ ಕಾಟೇರನಿಗಿದೆಯಾ ವೈಭೋಗ?

ವರನ ಪ್ರಕಾರ, ಹೆಂಡ್ತಿ ಫೆಬ್ರವರಿ 22 ರಂದು ಮನೆಗೆ ಬಂದಿದ್ದಾಳೆ. ರಾತ್ರಿ 9 ಗಂಟೆಗೆ ವರ ರೂಮ್ ಸೇರಿದ್ದಾನೆ. ವಧು ಜೊತೆ ಮಾತನಾಡುವ ಪ್ರಯತ್ನ ನಡೆಸಿದ್ದಾನೆ. ಆದರೆ ವಧು ಮಾತನಾಡಲು ನಿರಾಕರಿಸಿದ್ದಾಳೆ. ವರ, ವಧುವನ್ನು ಟಚ್ ಮಾಡಲು ಮುಂದಾದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಅಷ್ಟೇ ಅಲ್ಲ ಚಾಕು ತೋರಿಸಿದ್ದಾಳೆ. ಒಂದು ನಾನು ಸಾಯ್ಬೇಕು ಇಲ್ಲ ನಿನ್ನನ್ನು ಸಾಯಿಸ್ಬೇಕು ಎನ್ನುತ್ತ ದಾಳಿ ನಡೆಸಿದ್ದಾಳೆ. ವರನ ಕೈ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾಳೆ. ಭಯಗೊಂಡ ವರ , ವಧು ಮನೆಯವರಿಗೆ ಮಾಹಿತಿ ನೀಡಿದ್ದಾನೆ. ವಧು ಕಡೆಯವರು ಮನೆಗೆ ಬಂದಿದ್ದಾರೆ. ಮೊದಲ ದಿನವಾಗಿದ್ದರಿಂದ ಆಕೆಗೆ ತೊಂದರೆ ಆಗಿದೆ ಅಂತ ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲ ಉಲ್ಟಾ ಆಗಿದೆ.

ಮರುದಿನ ಮನೆಯವರಿಗೆಲ್ಲ ನಶೆ ಪದಾರ್ಥ ನೀಡಿದ್ದಾಳೆ ವಧು. ಇದನ್ನು ತಿಂದ ಮನೆಯವರು ಪ್ರಜ್ಞೆ ತಪ್ಪಿದ್ದಾರೆ. ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆ ತೆಗೆದ್ಕೊಂಡು ಚಿಕ್ಕಪ್ಪನ ಜೊತೆ ವಧು ಪರಾರಿಯಾಗಿದ್ದಾಳೆ. ಬೆಳಿಗ್ಗೆ ಮನೆಯವರೆಲ್ಲ ಎದ್ದಾಗ ವಧು ಕಾಣಿಸಲಿಲ್ಲಿ. ಎಲ್ಲ ವಿಚಾರಿಸಿದಾಗ ಆಕೆ ಹಾಗೂ ಆಕೆ ಚಿಕ್ಕಪ್ಪನ ನಡುವೆ ಪ್ರೀತಿ ಚಿಗುರಿತ್ತು ಎಂದು ಮನೆಯವರಿಂದ ತಿಳಿದಿದೆ. ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಧು ಹಾಗೂ ಚಿಕ್ಕಪ್ಪನ ಹುಡುಕಾಟ ನಡೆಸಿದ್ದಾರೆ.

ಮದ್ವೆಗೆ ಕೆಲವೇ ದಿನ ಇರೋವಾಗ ಜ್ಯೋತಿಷಿ ಮಾತು ನಂಬಿ ನೇಣು

ಇಂಥ ಘಟನೆ ಇದೇ ಮೊದಲಲ್ಲ. ಇತ್ತೀಚಿನ ದಿನಗಳಲ್ಲಿ ಇಂಥ ಘಟನೆಗಳ ಸಂಖ್ಯೆ ಹೆಚ್ಚಾಗ್ತಿದೆ. ಮದುವೆ ನಂತ್ರ ಪ್ರೇಮಿ ಜೊತೆ ಓಡಿ ಹೋಗ್ತಿರುವ ಕೆಲ ಹುಡುಗಿಯರು, ಮನೆಯಲ್ಲಿದ್ದ ಒಡವೆ, ನಗದನ್ನು ತೆಗೆದುಕೊಂಡು ಹೋಗ್ತಿದ್ದಾರೆ. ಮತ್ತೆ ಕೆಲವರು ಮನಸ್ಸಿಲ್ಲದ ಮನಸ್ಸಿಂದ ಹಸೆಮಣೆ ಏರಿ ಗಂಡನ ಹತ್ಯೆಗೆ ಸ್ಕೆಚ್ ಹಾಕ್ತಿದ್ದಾರೆ. ಈಗಿನ ದಿನಗಳಲ್ಲಿ ವಧು – ವರರ ಆಯ್ಕೆ ಸವಾಲಿನ ಕೆಲ್ಸವಾಗಿದ್ದು, ಇಂಥ ಘಟನೆ ಕೇಳಿದ, ನೋಡಿದ ಬ್ಯಾಚ್ಯುಲರ್ಸ್ ಮದುವೆ ಸಹವಾಸ ಬೇಡ ಎನ್ನುತ್ತಿದ್ದಾರೆ.



Source link

Leave a Reply

Your email address will not be published. Required fields are marked *