ಬೆಂಗಳೂರು ಆಟೋ ಸುಲಿಗೆ: ಮೆಜೆಸ್ಟಿಕ್‌-ಕತ್ರಿಗುಪ್ಪೆಗೆ ₹700 ಡಿಮ್ಯಾಂಡ್! ಬಿಲ್ ಕೇಳಿ ಶಾಕ್ ಆದ ಮಹಿಳೆ ವಿಡಿಯೋ ವೈರಲ್! | Bengaluru Auto Fare Extortion Majestic To Katriguppe 700 Rupees Viral Video Sat

ಬೆಂಗಳೂರು ಆಟೋ ಸುಲಿಗೆ: ಮೆಜೆಸ್ಟಿಕ್‌-ಕತ್ರಿಗುಪ್ಪೆಗೆ ₹700 ಡಿಮ್ಯಾಂಡ್! ಬಿಲ್ ಕೇಳಿ ಶಾಕ್ ಆದ ಮಹಿಳೆ ವಿಡಿಯೋ ವೈರಲ್! | Bengaluru Auto Fare Extortion Majestic To Katriguppe 700 Rupees Viral Video Sat



ಬೆಂಗಳೂರು ಆಟೋ ಸುಲಿಗೆ: ಮೆಜೆಸ್ಟಿಕ್‌-ಕತ್ರಿಗುಪ್ಪೆಗೆ ₹700 ಡಿಮ್ಯಾಂಡ್! ಬಿಲ್ ಕೇಳಿ ಶಾಕ್ ಆದ ಮಹಿಳೆ ವಿಡಿಯೋ ವೈರಲ್! | Bengaluru Auto Fare Extortion Majestic To Katriguppe 700 Rupees Viral Video Sat

ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮುಂಜಾನೆ ಮಹಿಳಾ ಪ್ರಯಾಣಿಕರೊಬ್ಬರಿಗೆ ಆಟೋ ಚಾಲಕ 700 ರೂ. ಕೇಳಿ ಸುಲಿಗೆಗೆ ಯತ್ನಿಸಿದ್ದಾನೆ. ಈ ಘಟನೆಯು ನಗರದಲ್ಲಿ ಆಟೋ ಚಾಲಕರ ಹಗಲು ದರೋಡೆ ಮತ್ತು ಪ್ರಯಾಣಿಕರ, ವಿಶೇಷವಾಗಿ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ.

ಬೆಂಗಳೂರು (ಫೆ.28): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಚಾಲಕರ ಸುಲಿಗೆ ಎಂಬುದು ದಿನನಿತ್ಯದ ಗೋಳಾಗಿ ಪರಿಣಮಿಸಿದೆ. ಅದರಲ್ಲೂ ಮುಂಜಾನೆ ಅಥವಾ ತಡರಾತ್ರಿ ರೈಲು ಮತ್ತು ಬಸ್ ನಿಲ್ದಾಣಗಳಿಗೆ ಬರುವ ಪ್ರಯಾಣಿಕರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳುವ ಕೆಲವು ಚಾಲಕರು ‘ಹಗಲು ದರೋಡೆ’ಗೆ ಇಳಿಯುತ್ತಿದ್ದಾರೆ. ಇತ್ತೀಚಿನ ಘಟನೆಯೊಂದರಲ್ಲಿ, ಮೆಜೆಸ್ಟಿಕ್‌ನಿಂದ ಕತ್ರಿಗುಪ್ಪೆಗೆ ಹೋಗಲು ಆಟೋ ಚಾಲಕನೊಬ್ಬ ಬರೋಬ್ಬರಿ 700 ರೂಪಾಯಿ ಬೇಡಿಕೆಯಿಟ್ಟು ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ವಿವರ:

ಇಂದು (ಫೆಬ್ರವರಿ 28, 2026) ಮುಂಜಾನೆ ಸುಮಾರು 5:15ರ ಸುಮಾರಿಗೆ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಮಹಿಳಾ ಪ್ರಯಾಣಿಕರೊಬ್ಬರು ಮೆಜೆಸ್ಟಿಕ್‌ನಿಂದ ಕತ್ರಿಗುಪ್ಪೆಗೆ ತೆರಳಲು ಆಟೋ ಒಂದನ್ನು ಬಾಡಿಗೆಗೆ ಕೇಳಿದ್ದಾರೆ. ಸಾಮಾನ್ಯವಾಗಿ ಈ ದೂರಕ್ಕೆ ಮೀಟರ್ ದರಕ್ಕಿಂತ ಒಂದೂವರೆ ಪಟ್ಟು ನೀಡಿದರೂ 200-250 ರೂಪಾಯಿ ಮೀರುವುದಿಲ್ಲ. ಆದರೆ, ಆ ಚಾಲಕ ಸೌಜನ್ಯವನ್ನೂ ಮರೆತು 700 ರೂಪಾಯಿ, ಕನಿಷ್ಠವೆಂದರೂ 670 ರೂಪಾಯಿ ನೀಡುವಂತೆ ಪಟ್ಟು ಹಿಡಿದಿದ್ದಾನೆ.

ಪರದಾಡಿದ ಮಹಿಳಾ ಪ್ರಯಾಣಿಕರು:

ಆರಂಭದಲ್ಲಿ ಆಟೋ ಹತ್ತಿದ ಮಹಿಳೆ, ದರ ಕೇಳಿ ತಕ್ಷಣವೇ ಕೆಳಗಿಳಿದಿದ್ದಾರೆ. ಆದರೆ ಚಾಲಕ ಮಾತ್ರ ಬಿಡದೆ, ‘ಇನ್ನೂ ಬೆಳಗಾಗಿಲ್ಲ ಮೇಡಂ, ಅಷ್ಟು ಕೊಡಲೇಬೇಕು’ ಎಂದು ಏರುಧ್ವನಿಯಲ್ಲಿ ಮಾತನಾಡಲು ಶುರು ಮಾಡಿದ್ದಾನೆ. ಮುಂಜಾನೆಯ ಸಮಯದಲ್ಲಿ ಬೇರೆ ವಾಹನಗಳ ಲಭ್ಯತೆ ಕಡಿಮೆ ಇರುವುದನ್ನೇ ಆತ ಅಸ್ತ್ರವಾಗಿ ಬಳಸಿಕೊಂಡಿದ್ದಾನೆ. ಚಾಲಕನ ವರ್ತನೆಯಿಂದ ಗಾಬರಿಗೊಂಡ ಮಹಿಳೆ, ತನ್ನ ಸುರಕ್ಷತೆಯ ದೃಷ್ಟಿಯಿಂದ ಮತ್ತು ಸಾಕ್ಷ್ಯಕ್ಕಾಗಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಲು ಆರಂಭಿಸಿದ್ದಾರೆ. ಇನ್‌ಸ್ಟಾಗ್ರಾಮ್ ಬಳಕೆದಾರರಾದ ಸೋನು ಸೌಮ್ಯ ಗೌಡ (@sonu_sowmya_gowda) ಎಂಬುವವರು ಈ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಹಿಳೆ ಹಂಚಿಕೊಂಡ ಮಾಹಿತಿ:

‘ಇದು ಇವತ್ತು 28.2.2026 morning 5.15 ಹಾಗೆ ಈ ಮೆಜೆಸ್ಟಿಕ್ ಬಸ್ ಸ್ಟಾಪ್ ನಲ್ಲಿ ಹಗಲು ದರೋಡೆ ಮಾಡ್ತವರೆ,,, ಮನುಷ್ಯತ್ವ ಬೇಡವ ಈ ಆಟೋ ದವರ ಮಾತು ಕೇಳಿ ಮೆಜೆಸ್ಟಿಕ್ ಇಂದ ಕತ್ರಿಗುಪ್ಪೆ ಗೆ 700 ಇಲಾ 670 ಆಗುತ್ಗೆ ಅಂತೆ. ಆಟೋ ಹತ್ತಿ ಇಳಿದೆ ಜಾಸ್ತಿ ಐತು ಅಮೌಂಟ್ ಅಂತ ಅಷ್ಟೇ ಅದೇನು ಮಾತಾಡುತ ಇದ್ದನ್ನೇ ಗೊತ್ತ ವಿಡಿಯೋ ಸ್ಟಾರ್ಟ್ ಮಾಡಿದ್ದೆ ತಡ ಮ್ಯಾಡಂ ಅಂತೆ ತು ಇಂಥ ಕಚ ಡಾ ಗಳಿಂದ ಒಳ್ಳೆ ರೀತಿ ನಲ್ಲಿ ಆಟೋ ಹೊಡಿಸೋ ಜನರಿಗೂ ಕೆಟ್ಟ ಹೆಸರು’ ಎಂದು ಬರೆದುಕೊಂಡಿದ್ದಾರೆ.

ಪ್ರಾಮಾಣಿಕ ಚಾಲಕರಿಗೂ ಕೆಟ್ಟ ಹೆಸರು:

ಬೆಂಗಳೂರಿನಲ್ಲಿ ನೂರಾರು ಪ್ರಾಮಾಣಿಕ ಆಟೋ ಚಾಲಕರಿದ್ದಾರೆ, ಅವರು ನಿಯಮಗಳನ್ನು ಪಾಲಿಸುತ್ತಾರೆ ಮತ್ತು ಪ್ರಯಾಣಿಕರನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ. ಆದರೆ ಇಂತಹ ಕೆಲವು ಚಾಲಕರಿಂದಾಗಿ ಇಡೀ ಆಟೋ ಚಾಲಕರ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಮುಂಜಾನೆ ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರಲ್ಲಿ ಇಂತಹ ಘಟನೆಗಳು ಭೀತಿ ಮತ್ತು ಹತಾಶೆಯನ್ನು ಉಂಟುಮಾಡುತ್ತಿವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಸುರಕ್ಷಿತವಾಗಿರಬೇಕು ಮತ್ತು ದರಗಳು ಪಾರದರ್ಶಕವಾಗಿರಬೇಕು. ಇಂತಹ ಸುಲಿಗೆಯ ವಿರುದ್ಧ ಸಂಚಾರಿ ಪೊಲೀಸರು ಮತ್ತು ಆರ್‌ಟಿಒ (RTO) ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮೆಜೆಸ್ಟಿಕ್‌ನಂತಹ ಪ್ರಮುಖ ಕೇಂದ್ರಗಳಲ್ಲಿ ಪೊಲೀಸರ ಗಸ್ತು ಹೆಚ್ಚಿರಬೇಕು ಮತ್ತು ಅತಿಯಾದ ದರ ಕೇಳುವ ಚಾಲಕರ ಪರವಾನಗಿ ರದ್ದುಪಡಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.

ಯಾವುದೇ ಪ್ರಯಾಣಿಕರು ಅನ್ಯಾಯಕ್ಕೆ ಒಳಗಾಗದಂತೆ ತಡೆಯಲು ಜಾಗೃತಿ ಅಗತ್ಯವಾಗಿದೆ. ನೀವು ಕೂಡ ಇಂತಹ ಸಂದರ್ಭಗಳನ್ನು ಎದುರಿಸಿದರೆ ತಕ್ಷಣವೇ ಸಹಾಯವಾಣಿಗೆ ಕರೆ ಮಾಡಿ ಅಥವಾ ವಿಡಿಯೋ ಸಾಕ್ಷ್ಯದೊಂದಿಗೆ ದೂರು ದಾಖಲಿಸಿ.



Source link

Leave a Reply

Your email address will not be published. Required fields are marked *