
ಟೆಹ್ರಾನ್, ಫೆಬ್ರವರಿ 28: ಇರಾನ್ ಮೇಲೆ ಇಸ್ರೇಲ್ (ಇಸ್ರೇಲ್ ದಾಳಿ) ನಡೆಸಿದ ವೈಮಾನಿಕ ದಾಳಿಯ ವೇಳೆ ವಾಯುನೆಲೆಗಳು, ಅನೇಕ ಕಟ್ಟಡಗಳು ನೆಲಸಮವಾಗಿವೆ. ಇದರ ನಡುವೆ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ದಕ್ಷಿಣ ಇರಾನ್ನ ಹಾರ್ಮೋಜ್ಗನ್ ಪ್ರಾಂತದಲ್ಲಿರುವ ಮಿನಾಬ್ನ ಪ್ರಾಥಮಿಕ ಬಾಲಕಿಯರ ಶಾಲೆಯ ಮೇಲೆ ಇಸ್ರೇಲಿ ದಾಳಿ ನಡೆದಿದೆ. ಇದರಿಂದ ಆ ಶಾಲೆಯೊಳಗಿದ್ದ 40 ವಿದ್ಯಾರ್ಥಿನಿಯರ ದೇಹ ಛಿದ್ರವಾಗಿದೆ. ಆ ಶಾಲೆಯ ಅವಶೇಷಗಳಡಿ ತಮ್ಮ ಮಕ್ಕಳ ದೇಹಗಳನ್ನು ಹುಡುಕುತ್ತಾ ಪೋಷಕರ ಗೋಳಾಡುವ ದೃಶ್ಯ ಮನಕಲಕುವಂತಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ