
ಇರಾನ್ ದಾಳಿಯ ಕಾರಣ ವಿಶ್ವದ ಅತಿ ಬ್ಯುಸಿ ಏರ್‌ಪೋರ್ಟ್ ಎಂದೇ ಪ್ರಖ್ಯಾತಿ ಪಡೆದ ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ
ದುಬೈ: ಇರಾನ್ ದಾಳಿಯ ಕಾರಣ ವಿಶ್ವದ ಅತಿ ಬ್ಯುಸಿ ಏರ್‌ಪೋರ್ಟ್ ಎಂದೇ ಪ್ರಖ್ಯಾತಿ ಪಡೆದ ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆಯನ್ನು ನಿಲ್ಲಿಸಿದೆ.
ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆ
ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿರಾರು ಪ್ರಯಾಣಿಕರು ಏರ್ಪೋರ್ಟ್‌ಗಳಲ್ಲೇ ಸಿಲುಕಿದ್ದಾರೆ
ಈ ದಿಢೀರ್ ಘೋಷಣೆ ಪರಿಣಾಮ ಸಾವಿರಾರು ಪ್ರಯಾಣಿಕರು ಏರ್ಪೋರ್ಟ್‌ಗಳಲ್ಲೇ ಸಿಲುಕಿದ್ದು, ಅತಂತ್ರರಾಗಿದ್ದಾರೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ವ್ಯಸ್ತ ವಿಮಾನ ನಿಲ್ದಾಣವಾಗಿದ್ದು, 100ಕ್ಕೂ ಅಧಿಕ ಸಂಸ್ಥೆಗಳ ವಿಮಾನಗಳನ್ನು ನಿರ್ವಹಿಸುತ್ತದೆ.