Headlines

ಕೃಷಿಯಲ್ಲಿ ತೊಡಗಲು ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಗೆ ರಾಜೀನಾಮೆ! -ಹುಟ್ಟೂರಲ್ಲಿ ಕೃಷಿ ಮಾಡುವ ಉದ್ದೇಶ | Police Constable Quits Job To Take Up Farming

ಕೊಡಗಿನ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್‌ ಆಗಿ ಕರ್ತವ್ಯದಲ್ಲಿದ್ದ ತೇಜಸ್ವಿ (32) ಅವರು ತಮ್ಮ ಹುಟ್ಟೂರಲ್ಲಿ ಕೃಷಿ ಮಾಡುವ ಆಸಕ್ತಿಯಿಂದ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿದ್ದಾರೆ.

ಕುಶಾಲನಗರ : ಕೊಡಗಿನ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್‌ ಆಗಿ ಕರ್ತವ್ಯದಲ್ಲಿದ್ದ ತೇಜಸ್ವಿ (32) ಅವರು ತಮ್ಮ ಹುಟ್ಟೂರಲ್ಲಿ ಕೃಷಿ ಮಾಡುವ ಆಸಕ್ತಿಯಿಂದ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿದ್ದಾರೆ.

ಅವರಿಗೆ ಸ್ವಂತ ಊರು ಶಿವಮೊಗ್ಗ ಜಿಲ್ಲೆಯ ಸಿರಿಗೆರೆಯಲ್ಲಿ ಪಿತ್ರಾರ್ಜಿತ ಜಮೀನು

ಅವರಿಗೆ ಸ್ವಂತ ಊರು ಶಿವಮೊಗ್ಗ ಜಿಲ್ಲೆಯ ಸಿರಿಗೆರೆಯಲ್ಲಿ ಪಿತ್ರಾರ್ಜಿತ ಜಮೀನು ಇದೆ. ಅವರು ವಿವಾಹಿತರಾಗಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

ಆರು ವರ್ಷಗಳಿಂದ ಕೊಡಗಿನಲ್ಲಿ ಕರ್ತವ್ಯ

ತೇಜಸ್ವಿ ಕಳೆದ ಆರು ವರ್ಷಗಳಿಂದ ಕೊಡಗಿನ ಸುಂಟಿಕೊಪ್ಪ ಮತ್ತು ಕುಶಾಲನಗರ ಠಾಣೆಯಲ್ಲಿ ಸಿವಿಲ್‌ ಕಾನ್‌ಸ್ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಊರಲ್ಲಿ ಸುಮಾರು 10 ಎಕರೆ ಕೃಷಿ ಭೂಮಿ ಹೊಂದಿರುವ ತೇಜಸ್ವಿ, ತಂದೆ- ತಾಯಿ ಮೇಲ್ವಿಚಾರಣೆಯಲ್ಲಿ ಕಾರ್ಮಿಕರನ್ನು ಇರಿಸಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ತಾವು ಕೃಷಿಯತ್ತ ಒಲವು ತೋರಿದ್ದು, ಫೆ.28 ರಿಂದ ಅನ್ವಯವಾಗುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕೆಂದು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಅವರು ಮನವಿ ಸಲ್ಲಿಸಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ತೇಜಸ್ವಿ ಅವರ ಮನವಿ ಪರಿಶೀಲಿಸಿ, ರಾಜೀನಾಮೆ ಅಂಗೀಕರಿಸಿ, ಕರ್ತವ್ಯದಿಂದ ಬಿಡುಗಡೆಗೆ ಅನುಮತಿ ನೀಡಿದ್ದಾರೆ.

Source link

Leave a Reply

Your email address will not be published. Required fields are marked *