ಭಾರತದಲ್ಲಿ ಮೆಸೇಜಿಂಗ್ ಆಯಪ್ಗಳ ಬಳಕೆ ಇಂದಿನಿಂದ (ಮಾರ್ಚ್ 1) ಹೊಸ ಮತ್ತು ಕಠಿಣ ನಿಯಮಗಳು ಜಾರಿಗೆ ಬರುತ್ತಿವೆ. ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯು ‘ಟೆಲಿಕಾಂ ಕಾಯ್ದೆ2023’ರ ಅಡಿಯಲ್ಲಿ ಸಿಮ್ ಬೈಂಡಿಂಗ್ ಎಂಬ ಹೊಸ ನಿಯಮವನ್ನು ಪರಿಚಯಿಸಿದೆ. ಇದರ ಪ್ರಕಾರ, ನಿಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಖಾತೆಗಳು ಕಾರ್ಯನಿರ್ವಹಿಸುತ್ತವೆ ನಿಮ್ಮ ಮೊಬೈಲ್ನಲ್ಲಿ ಆ ನಂಬರ್ನ ಸಕ್ರಿಯ ಸಿಮ್ ಕಾರ್ಡ್ ಇರುವುದು ಕಡ್ಡಾಯ. ಸಿಮ್ ತೆಗೆದರೆ, ನಿಲ್ಲಿಸಿದರೆ ಅಥವಾ ನಿಷ್ಕ್ರಿಯಗೊಂಡರೆ ನಿಮ್ಮ ಮೆಸೇಜಿಂಗ್ ಆಯಪ್ ಖಾತೆಯು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ.
ಸೈಬರ್ ಭದ್ರತೆಯನ್ನು ಹೆಚ್ಚಿಸಲು ಮತ್ತು ಆನ್ಲೈನ್ ವಂಚನೆಗಳನ್ನು ತಡೆಯಲು ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ನಿಯಮದಿಂದ, ಕದ್ದ OTP ಗಳನ್ನು ಬಳಸಿ ವಂಚನೆ ನಡೆಸುತ್ತಿದ್ದ ಸೈಬರ್ ಖದೀಮರಿಗೆ ಕಡಿವಾಣ ಬೀಳಲಿದೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಿಮ್ ಬೈಂಡಿಂಗ್ ಗಡುವನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ, ಮಾರ್ಚ್ 1 ರಿಂದ ವಾಟ್ಸ್ಆಯಪ್ ವೆಬ್ ಮತ್ತು ಡೆಸ್ಕ್ಟಾಪ್ ಸೆಷನ್ಗಳು ಪ್ರತಿ ಆರು ಗಂಟೆಗಳಿಗೊಮ್ಮೆ ಸ್ವಯಂಚಾಲಿತವಾಗಿ ಲಾಗ್ ಆಗಲಿವೆ. ಕಚೇರಿ ಕೆಲಸಗಳಿಗೆ ವಾಟ್ಸ್ ಆಯಪ್ ಬಳಸುವವರು ಪ್ರತಿ ಆರು ಗಂಟೆಗೊಮ್ಮೆ ತಮ್ಮ ಫೋನ್ ಮೂಲಕ QR ಕೋಡ್ ಸ್ಕ್ಯಾನ್ ಮಾಡಿ OTP ಪರಿಶೀಲನೆ. ಈ ನಿಯಮಗಳಿಂದ ಸಾಮಾನ್ಯ ಬಳಕೆದಾರರು ಆತಂಕಪಡಬೇಕಿಲ್ಲ, ಆದರೆ ತಮ್ಮ ಪ್ರಾಥಮಿಕ ಮೊಬೈಲ್ನಲ್ಲಿ ಸಿಮ್ ಕಾರ್ಡ್ ಇರಿಸಿಕೊಳ್ಳುವುದು ಮತ್ತು ಆಯಪ್ಗಳನ್ನು ಅಪ್ಡೇಟ್ ಮಾಡುವುದು ಅನಿವಾರ್ಯ. ಹೆಚ್ಚಿನ ವಿವರಗಳಿಗೆ ವಿಡಿಯೋ ನೋಡಿ.
ಇನ್ನಷ್ಟು ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ