ಒಂದು ಎಲೆಯೂ ಕೊಳೆಯದಂತೆ ಕೊತ್ತಂಬರಿ ಸೊಪ್ಪನ್ನ 2 ವಾರದವರೆಗೆ ಫ್ರೆಶ್ ಆಗಿಡಲು ಇಲ್ಲಿದೆ ಸೀಕ್ರೆಟ್ ಟಿಪ್ಸ್

ಒಂದು ಎಲೆಯೂ ಕೊಳೆಯದಂತೆ ಕೊತ್ತಂಬರಿ ಸೊಪ್ಪನ್ನ 2 ವಾರದವರೆಗೆ ಫ್ರೆಶ್ ಆಗಿಡಲು ಇಲ್ಲಿದೆ ಸೀಕ್ರೆಟ್ ಟಿಪ್ಸ್

ಒಂದು ಎಲೆಯೂ ಕೊಳೆಯದಂತೆ ಕೊತ್ತಂಬರಿ ಸೊಪ್ಪನ್ನ 2 ವಾರದವರೆಗೆ ಫ್ರೆಶ್ ಆಗಿಡಲು ಇಲ್ಲಿದೆ ಸೀಕ್ರೆಟ್ ಟಿಪ್ಸ್

How to store coriander for 15 days: ಅಡುಗೆಯ ರುಚಿ ಹೆಚ್ಚಿಸುವಲ್ಲಿ ಕೊತ್ತಂಬರಿ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ತಂದ ಎರಡೇ ದಿನಕ್ಕೆ ಕಪ್ಪಾಗಿ ಕೊಳೆಯುವುದು ಗೃಹಿಣಿಯರಿಗೆ ದೊಡ್ಡ ತಲೆನೋವು. ಈ ಸಮಸ್ಯೆಗೆ ಪರಿಹಾರವಾಗಿ ಲಕ್ನೋದ ಮಹಿಳೆ ಅದ್ಭುತ ‘ಸ್ಮಾರ್ಟ್ ಟ್ರಿಕ್’ ಹಂಚಿಕೊಂಡಿದ್ದಾರೆ.

ಹಸಿ ಕೊತ್ತಂಬರಿ ಸೊಪ್ಪು ಅಡುಗೆಯ ರುಚಿ ಹೆಚ್ಚಿಸುವುದು ನಿಜ. ಆದರೆ ಅದನ್ನು ಫ್ರಿಜ್‌ನಲ್ಲಿಟ್ಟರೂ 2-3 ದಿನಗಳಲ್ಲಿ ಕಪ್ಪಾಗಿ ಕೊಳೆಯುವುದು ಸಾಮಾನ್ಯ. ಲಕ್ನೋದ ಗೃಹಿಣಿಯೊಬ್ಬರು ಹಂಚಿಕೊಂಡಿರುವ ಈ ವಿಧಾನ ಅನುಸರಿಸಿದರೆ ನಿಮ್ಮ ಕೊತ್ತಂಬರಿ ಸೊಪ್ಪು 15 ದಿನಗಳವರೆಗೆ ಫ್ರೆಶ್ ಆಗಿರುತ್ತದೆ. ಬಣ್ಣವೂ ಬದಲಾಗಲ್ಲ, ರುಚಿಯೂ ಕೆಡಲ್ಲ.

ಮಾರುಕಟ್ಟೆಯಿಂದ ತಂದ ತಕ್ಷಣ ಸೊಪ್ಪಿನ ಬೇರುಗಳಲ್ಲಿರುವ ಮಣ್ಣನ್ನು ಪೂರ್ತಿಯಾಗಿ ತೆಗೆಯಿರಿ. ಇದರಲ್ಲಿರುವ ಹಳದಿ ಅಥವಾ ಒಣಗಿದ ಎಲೆಗಳನ್ನು ಆರಿಸಿ ಬಿಸಾಡಿ. ನೆನಪಿಡಿ, ಒಂದು ಕೊಳೆತ ಎಲೆ ಇದ್ದರೂ ಅದು ಇಡೀ ಕಂತೆಯನ್ನು ಬೇಗನೆ ಹಾಳಾಗುವಂತೆ ಮಾಡುತ್ತದೆ. ನಂತರ ಒಂದು ಪಾತ್ರೆಯಲ್ಲಿ ಶುದ್ಧ ನೀರು ತೆಗೆದುಕೊಂಡು ಸೊಪ್ಪನ್ನು ಚೆನ್ನಾಗಿ ತೊಳೆಯಿರಿ.

ತೊಳೆದ ಸೊಪ್ಪನ್ನು ನೇರವಾಗಿ ಶೇಖರಿಸುವುದು ದೊಡ್ಡ ತಪ್ಪು. ತೊಳೆದ ನಂತರ ಸ್ವಲ್ಪ ಸಮಯದವರೆಗೆ ಅದನ್ನು ಯಾವುದಾದರೂ ಎತ್ತರದ ಜಾಗದಲ್ಲಿ ಅಥವಾ ನಲ್ಲಿಗೆ (Tap) ತೂಗು ಹಾಕಿ. ಸೊಪ್ಪಿನ ಎಲೆಗಳಲ್ಲಿ ಸಿಲುಕಿರುವ ನೀರು ಪೂರ್ತಿಯಾಗಿ ಹನಿ ಹನಿಯಾಗಿ ಕೆಳಗೆ ಇಳಿಯುವವರೆಗೆ ಕಾಯಿರಿ.

ನೀರು ಪೂರ್ತಿಯಾಗಿ ಆರಿದ ನಂತರ, ಕೊತ್ತಂಬರಿ ಸೊಪ್ಪಿನ ಕಂತೆಯನ್ನು ಬಿಡಿಸಿ ಎಲೆಗಳನ್ನು ದಂಟುಗಳಿಂದ ಬೇರ್ಪಡಿಸಿ (ಎಳೆಯ ದಂಟುಗಳಿದ್ದರೆ ಪರವಾಗಿಲ್ಲ). ಈಗ ಅದನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಇದರಿಂದ ಅಡುಗೆ ಮಾಡುವಾಗ ಸಮಯ ಉಳಿಯುವುದಲ್ಲದೆ, ಸೊಪ್ಪು ದೀರ್ಘಕಾಲ ಬಾಳಿಕೆ ಬರುತ್ತದೆ.

ಕತ್ತರಿಸಿದ ಸೊಪ್ಪನ್ನು ಒಂದು ಶುದ್ಧವಾದ ಪೇಪರ್ ಅಥವಾ ಟಿಶ್ಯೂ ಪೇಪರ್ ಮೇಲೆ ಹರಡಿ. ಇದರ ಮೇಲೆಯೂ ಒಂದು ಪೇಪರ್ ಅಥವಾ ಟಿಶ್ಯೂ ಪೇಪರ್ ಹಾಕಿ ಲಘುವಾಗಿ ಒತ್ತಿ. ಇದು ಎಲೆಗಳ ನಡುವೆ ಉಳಿದಿರುವ ತೇವಾಂಶವನ್ನು ಹೀರಿಕೊಳ್ಳುತ್ತದೆ. ಬಿಸಿಲಿನಲ್ಲಿ ಒಣಗಿಸಬಾರದು. ಕೇವಲ ಹಸಿಪಸೆಯನ್ನು ಹೋಗಲಾಡಿಸಬೇಕು.

ಒಂದು ಗಾಜಿನ ಅಥವಾ ಪ್ಲಾಸ್ಟಿಕ್‌ನ ಏರ್‌ಟೈಟ್ ಡಬ್ಬದ (Air-tight Container) ಕೆಳಭಾಗದಲ್ಲಿ ಟಿಶ್ಯೂ ಪೇಪರ್ ಇಡಿ. ಅದರ ಮೇಲೆ ಕತ್ತರಿಸಿದ ಸೊಪ್ಪನ್ನು ಹಾಕಿ, ಮತ್ತೆ ಅದರ ಮೇಲೆ ಒಂದು ಟಿಶ್ಯೂ ಪೇಪರ್ ಪದರವನ್ನು ಇಟ್ಟು ಡಬ್ಬವನ್ನು ಭದ್ರವಾಗಿ ಮುಚ್ಚಿ ಫ್ರಿಡ್ಜ್‌ನಲ್ಲಿಡಿ. ಟಿಶ್ಯೂ ಪೇಪರ್ ಡಬ್ಬದ ಒಳಗೆ ಉಂಟಾಗುವ ಆವಿಯನ್ನು (Moisture) ಹೀರಿಕೊಳ್ಳುವುದರಿಂದ ಸೊಪ್ಪು ಕೊಳೆಯುವುದಿಲ್ಲ.

Source link

Leave a Reply

Your email address will not be published. Required fields are marked *