Headlines

Raichur: ಓವರ್‌ಟೇಕ್ ದುರಂತ; ಆಟೋದಿಂದ ಕೆಳಗೆ ಬಿದ್ದ ಯುವಕನ ಮೇಲೆ ಹರಿದ ಸಾರಿಗೆ ಬಸ್

Raichur: ಓವರ್‌ಟೇಕ್ ದುರಂತ; ಆಟೋದಿಂದ ಕೆಳಗೆ ಬಿದ್ದ ಯುವಕನ ಮೇಲೆ ಹರಿದ ಸಾರಿಗೆ ಬಸ್

Raichur: ಓವರ್‌ಟೇಕ್ ದುರಂತ; ಆಟೋದಿಂದ ಕೆಳಗೆ ಬಿದ್ದ ಯುವಕನ ಮೇಲೆ ಹರಿದ ಸಾರಿಗೆ ಬಸ್

ರಾಯಚೂರು ನಗರದಲ್ಲಿ ವೇಗವಾಗಿ ಚಲಿಸುತ್ತಿದ್ದ ಆಟೋದಿಂದ ಕೆಳಗೆ ಬಿದ್ದ 21 ವರ್ಷದ ಯುವಕನ ಮೇಲೆ ಬಸ್ ಹರಿದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಓವರ್‌ಟೇಕ್ ಮಾಡುವ ಭರದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅಪಘಾತದ ಸಂಪೂರ್ಣ ದೃಶ್ಯ ಬಸ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೇಗವಾಗಿ ಚಲಿಸುತ್ತಿದ್ದ ಆಟೋದಿಂದ ಕೆಳಗೆ ಬಿದ್ದ ಯುವಕನ ಮೇಲೆ ಬಸ್ ಹರಿದ ಪರಿಣಾಮ 21 ವರ್ಷದ ಯುವಕನೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಭೀಕರ ಅಪಘಾತದ ದೃಶ್ಯಗಳು ಬಸ್‌ನ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ರಾಯಚೂರು ನಗರದ ಸ್ಟೇಶನ್ ರಸ್ತೆಯಲ್ಲಿ ಭೀಕರ ಅಪಘಾತ ನಡೆದಿದೆ. ದೇಹದ ಮೇಲೆ ಬಸ್‌ ಚಕ್ರಗಳು ಚಲಿಸಿದ ಪರಿಣಾಮ 21 ವರ್ಷದ ಬಸವರಾಜ್ ಪ್ರಾಣಪಕ್ಷಿ ಕ್ಷಣಾರ್ಧದಲ್ಲೇ ಹಾರಿ ಹೋಗಿದೆ. ಆಟೋ ಹಿಂಭಾಗದ ಆಸನದಲ್ಲಿ ಬಸವರಾಜ್ ಕುಳಿತಿದ್ದನು.

ಆಟೋ ಆಶಾಪುರ ರಸ್ತೆಯಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಹೊರಟಿತ್ತು. ಈ ವೇಳೆ ರಸ್ತೆಯ ಎಡ ಬದಿಯಲ್ಲಿ ಮತ್ತೊಂದು ಆಟೋ ನಿಂತಿತ್ತು. ಈ ವೇಳೆ ಚಲಿಸುತ್ತಿದ್ದ ಆಟೋ ವೇಗವಾಗಿ ಬಲಭಾಗದಲ್ಲಿದ್ದ ಬಸ್‌ ಓವರ್‌ ಟೇಕ್ ಮಾಡಿದೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಆಟೋ ಕೊಂಚ ವಾಲಿದೆ. ಇದರಿಂದ ಹಿಂದೆ ಕುಳಿತಿದ್ದ ಬಸವರಾಜ್ ರಸ್ತೆ ಮೇಲೆ ಬಿದ್ದಿದ್ದಾನೆ.

ಆಟೋ ಹಿಂದೆಯೇ ಬರುತ್ತಿದ್ದ ಬಸ್ ಬಸವರಾಜ್ ಮೇಲೆ ಹರಿದಿದೆ. ಕ್ಷಣಾರ್ಧದಲ್ಲಿ ಈ ಘಟನೆ ನಡೆದಿದ್ದು, ಅಪಘಾತದ ಎಲ್ಲಾ ದೃಶ್ಯಗಳು ಬಸ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಹಟ್ಟಿ ಗೋಲ್ಡ್ ಮೈನ್ಸ್‌ ಎದುರು ಸ್ಫೋಟಕಗಳ ರಾಶಿ!: ಸಿಸಿಟಿವಿಯಲ್ಲಿ ಕಂಡ ನಂಬರ್ ಪ್ಲೇಟ್ ಇಲ್ಲದ ಆ ನಿಗೂಢ ಬೈಕ್ ಯಾರದ್ದು?

ಮೃತ ಬಸವರಾಜ್ ಕುಟುಂಬಸ್ಥರು ಬಸ್ ಚಾಲಕನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪಘಾತ ಸಂಬಂಧ ಪೊಲೀಸರು ಬಸ್‌ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸಾರಿಗೆ ಇಲಾಖೆ ಪರಿಹಾರ ನೀಡಬೇಕೆಂದು ಬಸವರಾಜ್ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ರಾಯಚೂರು: ರಾಷ್ಟ್ರ ಧ್ವಜ ಮತ್ತು ಭಗವದ್ಗೀತೆಗೆ ಚಪ್ಪಲಿ ಹಾಕಿ ಮೆಟ್ಟಿ ಅವಮಾನ, ಸ್ಟೇಟಸ್ ಶೋಕಿ ತೋರಿದ ಇಬ್ಬರು ಅರೆಸ್ಟ್

Source link

Leave a Reply

Your email address will not be published. Required fields are marked *