ಅಪ್ಪನ ಚಿತೆಯ ಮುಂದೆ ವಕೀಲಿ ವೃತ್ತಿ ಮಾಡುವುದಿಲ್ಲವೆಂದು ಪ್ರಮಾಣ ಮಾಡಿದ ಭಾರ್ಗವಿ, ಇದೀಗ ಕಾಳಿಯ ಅವತಾರ ತಾಳಿದ್ದಾಳೆ. ದುಷ್ಟರನ್ನು ಶಿಕ್ಷಿಸಿ, ಅಪ್ಪನ ಸಾವಿಗೆ ನ್ಯಾಯ ದೊರಕಿಸಿಕೊಡಲು ಹೊರಟ ಆಕೆಗೆ Bigg Boss ಸ್ಪರ್ಧಿ, ಲೇಡಿ ಡಾನ್ ಒಬ್ಬರ ಸಾಥ್ ಸಿಕ್ಕಿದೆ. ಅವರು ಯಾರು?

ಕಲರ್ಸ್ ಕನ್ನಡದ ಭಾರ್ಗವಿ ಎಲ್ಎಲ್ಬಿ ಸೀರಿಯಲ್ನಲ್ಲಿ ಸದ್ಯ ಭಾರ್ಗವಿ ತಾನು ವಕೀಲಿಕೆ ಪ್ರಾಕ್ಟೀಸ್ ಮಾಡುವುದಿಲ್ಲ. ಕೋರ್ಟ್ಗೆ ಹೋಗುವುದಿಲ್ಲ ಎಂದು ಅಪ್ಪನ ಚಿತೆಯ ಮುಂದೆ ಪ್ರಮಾಣ ಮಾಡಿದ್ದಾಳೆ. ಆಕೆನೇ ಹೀಗೆ ಪ್ರಮಾಣ ಮಾಡಿಬಿಟ್ಟರೆ ಸೀರಿಯಲ್ ಕಥೆ ಏನು ಎಂದುಕೊಂಡವರೇ ಹೆಚ್ಚು.

ಆದರೆ, ಇದೀಗ ಭಾರ್ಗವಿ ದುಷ್ಟರನ್ನು ಸದೆಬಡಿಯಲು ಕಾಳಿಯ ಅವತಾರದಲ್ಲಿ ಬಂದಿದ್ದಾಳೆ. ವಕೀಲಿ ವೃತ್ತಿಯಲ್ಲಿ ಸತ್ಯದ ಪರ ಹೋಗಿ ಅಪ್ಪನನ್ನೂ ಕಳೆದುಕೊಳ್ಳುವ ಸ್ಥಿತಿ ಭಾರ್ಗವಿಗೆ ಬಂದಿದೆ. ಇದೀಗ ದುಷ್ಟರ ದಮನಕ್ಕೆ ಬೇರೆಯ ರೂಪದಲ್ಲಿ ಹೋಗಿದ್ದಾಳೆ.

ತನ್ನನ್ನು ತಾನು ಕಾಳಿ ಎಂದು ಹೇಳಿಕೊಂಡಿರೋ ಭಾರ್ಗವಿ ಮಾರುವೇಷದಲ್ಲಿ ಹೋಗಿ ದುಷ್ಟರನ್ನು ಶಿಕ್ಷಿಸುತ್ತಿದ್ದಾಳೆ. ಸಂಧ್ಯಾಳಿಗೆ ನ್ಯಾಯ ಕೊಡಿಸುವ ಕಾರ್ಯದ ಜೊತೆಗೆ ಯಾವ ಹೆಣ್ಣುಮಕ್ಕಳಿಗೂ ಅನ್ಯಾಯ ಆಗಬಾರದು ಹಾಗೂ ಅಪ್ಪನ ಸಾವಿಗೆ ಕಾರಣ ಆದವರನ್ನು ಬಿಡಬಾರದು ಎನ್ನುವುದನ್ನೇ ಮುಖ್ಯವಾಗಿರಿಸಿಕೊಂಡಿರೋ ಭಾರ್ಗವಿ, ಈ ರೂಪದಲ್ಲಿ ಬಂದಿದ್ದಾಳೆ.

ಇವಳಿಗೆ ಈಗ ಲೇಡಿ ಡಾನ್ ಒಬ್ಬರು ಸಾಥ್ ಕೊಡುತ್ತಿದ್ದಾರೆ. ಕಲರ್ಸ್ ವಾಹಿನಿಯು ಈ ಬಗ್ಗೆ ಪ್ರೊಮೋ ಒಂದನ್ನು ಶೇರ್ ಮಾಡಿದೆ. ಭಾರ್ಗವಿಗೆ ಸಹಾಯ ಮಾಡಲು ಬರುತ್ತಿರುವವರು ಯಾರು ಎಂದು ಪ್ರಶ್ನಿಸಿದೆ.

ಇದಾಗಲೇ ಔಟ್ಲೈನ್ ನೋಡಿಯೇ ಆಕೆ, ಬಿಗ್ಬಾಸ್ ಮಾಜಿ ಸ್ಪರ್ಧಿ, ಸತ್ಯ ಸೀರಿಯಲ್ ಲೇಡಿ ಡಾನ್ ಸತ್ಯ ಗೌತಮಿ ಜಾಧವ್ ಎನ್ನುವುದಾಗಿ ಕಮೆಂಟ್ಗಳಿಂದ ತುಂಬಿ ಹೋಗಿದೆ.

ಒಟ್ಟಿನಲ್ಲಿ ಈ ಸೀರಿಯಲ್ ಇನ್ನಷ್ಟು ರೋಚಕಗೊಳಿಸಲಾಗುತ್ತಿದೆ. ಇದರ ನಡುವೆಯೇ ಭಾರ್ಗವಿ ಪಾತ್ರಧಾರಿಯಾಗಿರುವ ರಾಧಾ ಭಗವತಿ ಹಾಗೂ ಅಮೃತಧಾರೆಯ ಜೈದೇವ್ ರಾಣವ್ ಅವರ ನಿಶ್ಚಿತಾರ್ಥವೂ ನಡೆದಿದ್ದು, ಇವರ ಮದುವೆಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

Source link
Bhargavi LLb ರೋಚಕ ಸಂಚಿಕೆ: ಭಾರ್ಗವಿಗೆ ಸಹಾಯ ಮಾಡಲು ಬರ್ತಿದ್ದಾರೆ ಬಿಗ್ಬಾಸ್ ಬ್ಯೂಟಿ