Headlines

ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಡಿಸಿಎಂ ಮಾತು; ಶಾಸಕರೇ ಕಾಂಟ್ಯಾಕ್ಟ್​ಗೆ ಸಿಗ್ತಿಲ್ಲ ಅಂದ್ರೆ ಏನು ಗತಿ!

ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಡಿಸಿಎಂ ಮಾತು; ಶಾಸಕರೇ ಕಾಂಟ್ಯಾಕ್ಟ್​ಗೆ ಸಿಗ್ತಿಲ್ಲ ಅಂದ್ರೆ ಏನು ಗತಿ!


ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಡಿಸಿಎಂ ಮಾತು; ಶಾಸಕರೇ ಕಾಂಟ್ಯಾಕ್ಟ್ಗೆ ಸಿಗ್ತಿಲ್ಲ ಅಂದ್ರೆ ಏನು ಗತಿ!

ಬೆಂಗಳೂರು, ಮಾರ್ಚ್ 01: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇಸ್ರೇಲ್–ಇರಾನ್ ಸಂಘರ್ಷದ ವೇಳೆ ದುಬೈ ಹಾಗೂ ಇರಾನ್‌ನಲ್ಲಿ ಸಿಲುಕಿರುವ ಕನ್ನಡಿಗರ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿಕೆ ಶಿವಕುಮಾರ್) ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಸಿಕ್ಕಿಕೊಂಡಿರುವವರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲವೆಂದು ಅವರು ಬಯಸುತ್ತಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಮ್ಮ ಇಬ್ಬರು ಶಾಸಕರಾದ ಭೋಜೇಗೌಡ ಮತ್ತು ಎ.ಸಿ. ಶ್ರೀನಿವಾಸ ಕೂಡ ದುಬೈನಲ್ಲಿ ಇದ್ದಾರೆ. ನಾನು ಸಂಪರ್ಕಕ್ಕೆ ಪ್ರಯತ್ನಪಡುತ್ತಿದ್ದೇನೆ. ಆದರೆ ಕಾಂಟ್ಯಾಕ್ಟ್‌ಗೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ದೆಹಲಿ ರೆಸಿಡೆಂಟ್ ಕಮಿಷನರ್ ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ, ಎಲ್ಲ ನಾಗರಿಕರ ರಕ್ಷಣೆ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ.ಅಲ್ಲಿ ಲಕ್ಷಾಂತರ ಭಾರತೀಯರು ಇದ್ದಾರೆ. ಕರ್ನಾಟಕ ಮತ್ತು ಕೇರಳದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಬೇಕು ಎಂದರು.

ಇದನ್ನೂ ಓದಿ ವಿದೇಶಗಳಲ್ಲಿ ಕನ್ನಡಿಗರಿಗೂ ತಟ್ಟಿದ ಯುದ್ಧದ ಬಿಸಿ; ದುಬೈ, ಬಹ್ರಾನ್‌ನಲ್ಲಿ ಸಿಲುಕಿದವರೆಷ್ಟು ಗೊತ್ತಾ?

ನಡೆಯುತ್ತಿರುವ ದಾಳಿಗಳನ್ನು ಖಂಡಿಸಿದ ಡಿಸಿಎಂ, ಮಕ್ಕಳ ಶಾಲೆಗಳ ಮೇಲಿನ ದಾಳಿಗಳು ಖಂಡನೀಯ ಎಂದು ಹೇಳಿದರು. ನಮ್ಮ ದೇಶ ಶಾಂತಿಯನ್ನು ನಂಬುತ್ತದೆ. ಇಂತಹ ದಾಳಿಗಳು ಸರಿಯಲ್ಲ. ಆದರೆ ನಾವು ಆತಂಕಪಡಬೇಕಾಗಿಲ್ಲ. ಹೆಚ್ಚಿನ ಒತ್ತಡ ಹೇರಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಭರವಸೆ ನೀಡಲಾಗುವುದು. ರಾಜ್ಯ ಸರ್ಕಾರದಿಂದ ಪ್ರತ್ಯೇಕ ಹೆಲ್ಪ್‌ಲೈನ್ ಆರಂಭಿಸುವ ಸಾಧ್ಯತೆ ಇಲ್ಲ, ಏನೇ ಮಾಹಿತಿ ಬಂದರೂ ವಿದೇಶಾಂಗ ಇಲಾಖೆಯಿಂದ ಬರಬೇಕು ಎಂದ ಅವರು, ಕನ್ನಡ ಸಂಘಟನೆಗಳು ಸಿಲುಕಿರುವವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *