ವಿಚ್ಛೇದನಕ್ಕೆ ಅರ್ಜಿ: ವಿಜಯ್ ಪತ್ನಿ ಇಟ್ಟಿರುವ ಬೇಡಿಕೆಗಳೇನು?

ವಿಚ್ಛೇದನಕ್ಕೆ ಅರ್ಜಿ: ವಿಜಯ್ ಪತ್ನಿ ಇಟ್ಟಿರುವ ಬೇಡಿಕೆಗಳೇನು?


ತಮಿಳುನಾಡಿನ ಸ್ಟಾರ್ ನಟ ದಳಪತಿ ವಿಜಯ್ (ತಲಪತಿ ವಿಜಯ್) ಅವರ ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ವಿಜಯ್ ಅವರು ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದು, ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇದೇ ಸಮಯದಲ್ಲಿ ವಿಜಯ್ ಅವರ ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿರುವುದು ವಿಜಯ್ ಗೆ ರಾಜಕೀಯವಾಗಿ ಸಣ್ಣ ಹಿನ್ನಡೆ ಮೂಡಿಸಿದೆ. ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಸಂಗೀತ, ವಿಜಯ್ ಎದುರು ಭಾರಿ ಬೇಡಿಕೆಗಳನ್ನು ಇರಿಸಿದ್ದಾರೆ. ವಿಚ್ಛೇದನಕ್ಕಾಗಿ ಭಾರಿ ಮೊತ್ತವನ್ನೇ ವಿಜಯ್ ಅವರು ಪತ್ನಿಗೆ ನೀಡಬೇಕಾಗಿದೆ.

ವಿಚ್ಛೇದನಕ್ಕೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯಲ್ಲಿ ಸಂಗೀತ ವಿವರಿಸಿರುವಂತೆ ತಮ್ಮ ಪತಿ ವಿಜಯ್ ಅವರಿಗೆ ನಟಿಯೊಬ್ಬರಿಗೆ ಸಂಬಂಧವಿದೆ, ಆ ಮಾಹಿತಿ ಸಂಗೀತಾ ಅವರಿಗೆ 2021ರಲ್ಲಿ ತಿಳಿದು ಬಂದಿದೆ. ಪತಿಗೆ ವಿವಾಹೇತರ ಸಂಬಂಧ ಇರುವ ಕಾರಣವನ್ನು ಪರಿಗಣಿಸಿ ತಮಗೆ ವಿಚ್ಛೇದನ ಕೊಡಿಸುವಂತೆ ಸಂಗೀತ ಬೇಡಿಕೆ ಇರಿಸಿದ್ದು, ಜೊತೆಗೆ ಜಿವನಾಂಶ ಹಾಗೂ ಇತರೆ ಬೇಡಿಕೆಗಳನ್ನು ಸಹ ಇರಿಸಲಾಗಿದೆ.

ವಿಜಯ್ ಪತ್ನಿ, ತಮ್ಮ ಹಾಗೂ ತಮ್ಮ ಮಕ್ಕಳ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಜೀವನಾಂಶ ಕೊಡಿಸುವಂತೆ ಬೇಡಿಕೆ ಇರಿಸಲಾಗಿದೆ. ತಮ್ಮ ಪ್ರಸ್ತುತ ಸಾಮಾಜಿಕ ಸ್ಟೇಟಸ್‌ಗೆ ತಕ್ಕಂತೆ ಜೀವನ ನಿರ್ವಹಣೆಯನ್ನು ಪರಿಗಣಿಸಿ ನಿಗದಿಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಜೊತೆಗೆ ವಿಚ್ಛೇದನ ಪ್ರಕ್ರಿಯೆ ಪೂರ್ಣ ಆಗುವವರೆಗೆ ತಮಗೆ ಈಗಿರುವ ಮನೆಯಲ್ಲಿ ನೆಲೆಸಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿದ್ದಾರೆ. ಜೊತೆಗೆ ಮಗ ಮತ್ತು ಮಕ್ಕಳ ಭವಿಷ್ಯದ ದೃಷ್ಟಿಯಿಂದ (ಶಿಕ್ಷಣ, ಮದುವೆ ಇತ್ಯಾದಿ) ಹಣದ ಭವಿಷ್ಯ ನಿಧಿ ಮಾಡಿಕೊಡಬೇಕು ಎಂದು ಸಹ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಕಟಕಟೆಯಲ್ಲಿ ದಳಪತಿ ವಿಜಯ್ ದಾಂಪತ್ಯ: ತ್ರಿಷಾ ಹಳೆ ವಿಡಿಯೋ ವೈರಲ್ ಆಗುತ್ತಿರೋದೇಕೆ?

ವಿಜಯ್ ಹಾಗೂ ಸಂಗೀತ ಅವರು 1999 ರಲ್ಲಿ ವಿವಾಹವಾಗಿದ್ದಾರೆ. ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇವರಿಗಿದೆ. ಮಗ ನಿರ್ದೇಶಕನಾಗಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಇದೀಗ ಬರೋಬ್ಬರಿ 27 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಲು ಪತ್ನಿ ಸಂಗೀತ ನಿರ್ಧರಿಸಿದ್ದಾರೆ. ವಿಜಯ್ ಅವರಿಗೆ ನಟಿ ಯಾರೊಟ್ಟಿಗೆ ಸಂಬಂಧ ಇರುವ ಬಗ್ಗೆ ಈ ಹಿಂದೆಯೂ ಸುದ್ದಿ ಹರಿದಾಡುತ್ತಿತ್ತು. ವಿಜಯ್ ಅವರಿಗೆ ನಟಿ ತ್ರಿಷಾ ಜೊತೆಗೆ ಸಂಬಂಧವಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *