ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆ ನಿಂತ ಒಕ್ಕಲಿಗರ ಸಂಘ

ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆ ನಿಂತ ಒಕ್ಕಲಿಗರ ಸಂಘ


ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷ ಯತೀಶ್ ಗೌಡ

ಹಾಸನ, ಮಾರ್ಚ್ 01: ಇರಾನ್‌ನಾದ್ಯಂತ ಅಮೆರಿಕ ಮತ್ತು ಇಸ್ರೇಲ್ ದಾಳಿ ಮುಂದುವರಿಸಿದೆ. ಯುದ್ಧದ (ಮಧ್ಯಪ್ರಾಚ್ಯ ಸಂಘರ್ಷ) ಎಫೆಕ್ಟ್ ಭಾರತೀಯರಿಗೂ ತಟ್ಟಿದೆ. ವಿಮಾನ ಇಲ್ಲದೇ ಪರದಾಟ. ಬೇರೆ ಬೇರೆ ದೇಶಗಳಲ್ಲಿ ನೂರಾರು ಕನ್ನಡಿಗರು ಸಿಲುಕಿದ್ದಾರೆ. ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಹೀಗಾಗಿ ದುಬೈನಲ್ಲಿ ಸಿಲುಕಿದ ಕನ್ನಡಿಗರಿಗೆ ದುಬೈ ಒಕ್ಕಲಿಗರ ಸಂಘ ನೆರವಿಗೆ ಮುಂದಾಗಿದೆ. ತುರ್ತು ಪರಿಸ್ಥಿತಿ ಉಂಟಾದರೆ ಸಂಪರ್ಕವನ್ನು ಮಾಡುವಂತೆ ಮನವಿ ಮಾಡಲಾಗಿದೆ.

ಕನ್ನಡಿಗರ ಸಹಾಯಕ್ಕೆ ಮುಂದಾದ ದುಬೈ ಒಕ್ಕಲಿಗರ ಸಂಘ

ದುಬೈ, ಅಬುಧಾಬಿ ಮೇಲೆ ಇರಾನ್ ದಾಳಿ ಹಿನ್ನೆಲೆ ವಿಮಾನಗಳು ರದ್ದಾಗಿವೆ. ವಿಮಾನ ಇಲ್ಲದೇ ಭಾರತೀಯರು ಪರದಾಟ. ಇದಲ್ದೇ 50ಕ್ಕೂ ಹೆಚ್ಚು ಕನ್ನಡಿಗರು ದುಬೈನಲ್ಲೇ ಸಿಲುಕಿದ್ದು, ಸಾಹಸ ಹಸ್ತ ಚಾಚಿದ್ದಾರೆ. ದುಬೈನಲ್ಲಿ ಸಿಲುಕಿದ ಕನ್ನಡಿಗರ ಸಹಾಯಕ್ಕೆ ದುಬೈ ಒಕ್ಕಲಿಗರ ಸಂಘ ಮುಂದಾಗಿದೆ. ತುರ್ತು ಪರಿಸ್ಥಿತಿ ಉಂಟಾದರೆ ಸಂಪರ್ಕ’ ಮಾಡುವಂತೆ ಟಿವಿ9 ಮೂಲಕ ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷ ಯತೀಶ್ ಮನವಿ ಮಾಡಿದ್ದಾರೆ. ದುಬೈನಲ್ಲಿರುವ ಕನ್ನಡಿಗರು +97155511425 ಸಂಖ್ಯೆಗೆ ಕರೆ ಮಾಡುವಂತೆ ಮಾಡಬೇಕು.

ದುಬೈನಲ್ಲಿ ಸಿಲುಕಿದ ದಾವಣಗೆರೆ, ಬಳ್ಳಾರಿ ಜನ

ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ಜನ ಪ್ರವಾಸಕ್ಕೆ ತೆರಳಿದ್ದರು. ನಿನ್ನೆ ಅವರೆಲ್ಲರೂ ಭಾರತಕ್ಕೆ ವಾಪಸ್ಸಾಗಬೇಕಿತ್ತು. ಆದರೆ ಯುದ್ಧ ಆರಂಭವಾದ ಹಿನ್ನೆಲೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಪ್ರವಾಸಕ್ಕೆ ತೆರಳಿದ್ದ 20 ಜನ ಮಹಿಳೆ 30 ಜನ ಪುರುಷರು ಫೆಬ್ರವರಿ 28ಕ್ಕೆ ಹಿಂದಿರುಗಬೇಕಿತ್ತು. ಆದರೆ ಇದೀಗ ಯುದ್ಧದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ.

ದುಬೈನಲ್ಲಿ ಸಿಲುಕಿದ ರಾಜ್ಯದ ಟೆಕ್ಕಿ

ದುಬೈ ಮಾರ್ಗವಾಗಿ ಪ್ಯಾರಿಸ್‌ಗೆ ತೆರಳುತ್ತಿದ್ದ ಬಾಗಲಕೋಟೆಯ ಪಟ್ಟಣದ ಗಿರೀಶ್ ಕೆರೂರು ಯುದ್ಧದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ಯಾರಿಸ್ಗೆ ಹೋಗಲು ವಿಮಾನವಿಲ್ಲದೇ ದುಬೈನ ಅಬುಧಾಬಿಯಲ್ಲೇ ಗಿರೀಶ್ ಸಿಲುಕಿದ್ದಾರೆ. ಸೆಲ್ಪಿ ವಿಡಿಯೋ ಮೂಲಕ ಗಿರೀಶ್ ಮಾಹಿತಿ.

ಸಿಎಂ ಕಾರ್ಯದರ್ಶಿಗೆ ದುಬೈ ಕನ್ನಡಿಗರ ಮಾಹಿತಿ

ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸಿಎಂ, ಕಾರ್ಯದರ್ಶಿ ಅಂಜುಂ ಪರ್ವೇಜ್ ಜತೆ ಮಾತಾಡಿ, ದುಬೈನಲ್ಲಿ ಸಿಲುಕಿರುವವರ ಬಗ್ಗೆ ಮಾಹಿತಿ ನೀಡಿದ್ದಾರೆ. ಏರ್ ಸ್ಟ್ರೈಕ್ ಕಾರಣ, ಎಲ್ಲಾ ವಿಮಾನಗಳು ಹಾರಾಟ ರದ್ದಾಗಿದೆ. ಮಾರ್ಚ್ 2ರವರೆಗೆ ಯಾವುದೇ ವಿಮಾನ ಹಾರಾಟವಿಲ್ಲ ಅಂತಾ ಹೇಳುತ್ತಿದ್ದಾರೆ. ಬಳ್ಳಾರಿ ನಗರ ಶಾಸಕ ನಾರಾ.ಭರತ್ ರೆಡ್ಡಿ ದುಬೈನಲ್ಲಿ ಸಿಲುಕಿರುವ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *