ಇವತ್ತಿನ ಎಐ ಯುಗದಲ್ಲಿ ಯಾರ ಕೆಲಸ ಯಾವಾಗ ಹೊರಟುಹೋಗುತ್ತೋ ಗೊತ್ತಿಲ್ಲ. ಕೆಲಸ ಹೋದರೂ ಒಂದು ಖಾಯಂ ಆದ ಮಾಸಿಕ ವರಮಾನ ಬರಬೇಕೆನ್ನುವ ಅಪೇಕ್ಷೆ ಹಲವರಿಗೆ ಇರುತ್ತದೆ. ಹಾಗೆಯೇ, ನಿವೃತ್ತಿಯ ನಂತರ ಪಿಂಚಣಿ ಸೌಲಭ್ಯ ಇಲ್ಲದವರು ಮಾಸಿಕ ವರಮಾನಕ್ಕೆ ಏನು ಮಾಡುತ್ತಿದ್ದಾರೆ? ಇವತ್ತು ನೀವು ಬಾಡಿಗೆ ಮನೆಯಲ್ಲಿ ವಾಸ ಇದ್ದು ಬಹಳ ಸರಳ ಜೀವನ ನಡೆಸುತ್ತೇನೆಂದರೂ ತಿಂಗಳಿಗೆ 50,000 ರೂ. ಇಷ್ಟಾದರೂ ಮಾಸಿಕ ಆದಾಯ ಸೃಷ್ಟಿಸುವ ತಂತ್ರ ಇಲ್ಲಿದೆ.
ನಿಮ್ಮ ವಯಸ್ಸು ಈಗ 40 ವರ್ಷ ಇದ್ದು, ಈಗಿನಿಂದಲೇ ನೀವು ಉದ್ಯೋಗಕ್ಕೆ ಪೂರ್ಣ ವಿರಾಮ ಹಾಕಲು ಬಯಸುತ್ತೀರಿ ಎಂದಿಟ್ಟುಕೊಳ್ಳಿ. ನಿಮಗೆ ಈಗ 50,000 ರೂ ಮಾಸಿಕ ವೆಚ್ಚವಾಗುತ್ತಿದೆ ಎಂದಾದರೂ, ವರ್ಷದಿಂದ ವರ್ಷಕ್ಕೆ ಈ ವೆಚ್ಚವು ಹಣದುಬ್ಬರಕ್ಕೆ ಹೆಚ್ಚುತ್ತಾ ಹೋಗುತ್ತದೆ. ನಿಮಗೆ 40 ವರ್ಷ ವಯಸ್ಸಾಗಿದ್ದರೆ ನಿಮ್ಮ ಆಯುಸ್ಸು ಇನ್ನೂ 40 ವರ್ಷ ಎಂದು ಭಾವಿಸಿ ಅದರಂತೆ ಹಣಕಾಸು ಲೆಕ್ಕಾಚಾರ ಹಾಕಬಹುದು.
40 ವರ್ಷ ಎಂದರೆ 480 ತಿಂಗಳು. ನಿಮ್ಮ ತಿಂಗಳ 50,000 ವೆಚ್ಚ ರೂ ಎಂದರೆ ವರ್ಷಕ್ಕೆ 6 ಲಕ್ಷ ರೂ. 40 ವರ್ಷ ಕಾಲ ಇಷ್ಟು ಹಣ ಹಿಂಪಡೆಯಬೇಕೆಂದರೆ ನಿಮ್ಮ ಬಳಿ ಒಂದೂವರೆ ಕೋಟಿ ರೂ ಹಣ ಇರಬೇಕು.
ಇದನ್ನೂ ಓದಿ: ಕ್ಯಾಷ್ ಪೆಮೆಂಟ್ ಹಿಡಿದು ವಿತ್ತರಾಯಲ್ ವರೆಗೆ, ಆದಾಯ ತೆರಿಗೆ ಇಲಾಖೆಯಿಂದ ತಪ್ಪಿಸಿಕೊಳ್ಳಲಾಗದ 16 ಹಣಕಾಸು ವಹಿವಾಟುಗಳು…
ಈ ಹಣವನ್ನು ಉತ್ತಮ ರಿಟರ್ನ್ ತರಬಲ್ಲಂತಹ ಕಡೆ ಹೂಡಿಕೆ ಮಾಡಬೇಕು. ಹಣದುಬ್ಬರ ವರ್ಷಕ್ಕೆ ಶೇ. 6ರಷ್ಟು ಹೆಚ್ಚಾಗಿರುತ್ತದೆ ಎಂದು ಪರಿಗಣಿಸಿದರೆ, ಅದನ್ನು ಮೀರಿಸುವಂತಹ ರಿಟರ್ನ್ ಸಿಗುವಂತಿರಬೇಕು.
ಎಲ್ಲಿ ಹೂಡಿಕೆ ಮಾಡಬಹುದು?
ಷೇರು ಮಾರುಕಟ್ಟೆ ಕೆಲವೊಮ್ಮೆ ಕುಸಿದು ಬೀಳಬಹುದು. ಉದಾಹರಣೆಗೆ, ಕಳೆದ ಒಂದು ಷೇರುಪೇಟೆ ಹಿನ್ನಡೆ ಕಂಡಿದೆ. ಈ ರೀತಿ ಆಗಾಗ ಮಾರುಕಟ್ಟೆ ಸಂಚಲನ ಕಾಣುತ್ತಿರುತ್ತದೆ. ಹೀಗಾಗಿ, ಎಲ್ಲಾ ಹಣವನ್ನು ಈಕ್ವಿಟಿಗಳಿಗೆ ಹೂಡಿಕೆ ಮಾಡುವುದು ತಪ್ಪು. ನಿಮ್ಮ ಬಳಿ 2 ಕೋಟಿ ರೂ ಕಾರ್ಪಸ್ ಇದೆ ಎಂದಿಟ್ಟುಕೊಳ್ಳೋಣ. ಈ ಹಣವನ್ನು ಎಲ್ಲಿ ಇರಿಸಿದರೆ ಸೂಕ್ತ:
- ಈಕ್ವಿಟಿ ಮ್ಯೂಚುವಲ್ ಫಂಡ್: 90 ಲಕ್ಷ ರೂ (ಶೇ. 11 ರಿಟರ್ನ್ ನಿರೀಕ್ಷೆ)
- ಡೆಟ್ ಫಂಡ್ಸ್ ಅಥವಾ ಬಾಂಡ್ಗಳು: 60 ಲಕ್ಷ ರೂ (ಶೇ. 7.5 ರಿಟರ್ನ್ ನಿರೀಕ್ಷೆ)
- ಸರ್ಕಾರಿ ಬಾಂಡ್ಗಳು: 30 ಲಕ್ಷ ರೂ (ಶೇ. 8 ರಿಟರ್ನ್ ನಿರೀಕ್ಷೆ)
- ಲಿಕ್ವಿಡ್ ಅಥವಾ ಎಮರ್ಜೆನ್ಸಿ ಫಂಡ್: 20 ಲಕ್ಷ ರೂ (ಶೇ. 7 ರಿಟರ್ನ್ ನಿರೀಕ್ಷೆ)
ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್ನಿಂದ ತೆರಿಗೆ ಉಳಿತಾಯದ ಜೊತೆಗೆ ತಿಂಗಳಿಗೆ 20,000 ರೂ ಆದಾಯವನ್ನು ಹೇಗೆ ಸೃಷ್ಟಿಸುವುದು? ಇಲ್ಲಿದೆ ಡೀಟೇಲ್ಸ್
ಅಂದರೆ, ಶೇ. 45ರಷ್ಟು ಹಣವು ಈಕ್ವಿಟಿ ಫಂಡ್ಗಳಲ್ಲಿ ಇರಬೇಕು. ಡೆಟ್ ಫಂಡ್ಗಳಲ್ಲಿ ಶೇ. 30, ಸರ್ಕಾರಿ ಬಾಂಡ್ಗಳಲ್ಲಿ ಅಥವಾ ಎಫ್ಡಿಗಳಲ್ಲಿ ಶೇ. 15, ಎಮರ್ಜೆನ್ಸಿ ಫಂಡ್ ಆಗಿ ಶೇ. 10ರಷ್ಟು ಇರಬೇಕು ಎಂಬುದು ಸಲಹೆ. ಈಕ್ವಿಟಿ ಫಂಡ್ಗಳಲ್ಲಿ ಸಿಸ್ಟಮ್ಯಾಟಿಕ್ ವಿಟ್ರಾಯಲ್ ಪ್ಲಾನ್ ಆಯ್ಕೆ ಮಾಡಿಕೊಂಡಿದೆ, ವರ್ಷಕ್ಕೆ ಶೇ. 4 ಅಥವಾ ಶೇ. 3 ಹಣವನ್ನು ಹಿಂಪಡೆಯುತ್ತಾ ಹೋಗಬಹುದು. ಮಾರುಕಟ್ಟೆ ಹಿನ್ನಡೆಯಲ್ಲಿದ್ದ ಸಂದರ್ಭದಲ್ಲಿ ಡೆಟ್ ಫಂಡ್ಗಳಿಂದ ಹಣ ಹಿಂಪಡೆಯಲು ಯತ್ನಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ