Headlines

Rashmika Vijay ರೆಸೆಪ್ಶನ್‌ಗೂ ಮುನ್ನ ಮ್ಯಾಚಿಂಗ್ ಡ್ರೆಸ್‌ಗಾಗಿ ಜಟಾಪಟಿ, ರಶ್ಮಿಕಾ ವಿಜಯ್ ಕ್ಯೂಟ್ ವಿಡಿಯೋ ಬಹಿರಂಗ | Rashmika Mandanna Vijay Deverakonda Adorable Tussle Over Matching Clothes Before Reception

Rashmika Vijay ರೆಸೆಪ್ಶನ್‌ಗೂ ಮುನ್ನ ಮ್ಯಾಚಿಂಗ್ ಡ್ರೆಸ್‌ಗಾಗಿ ಜಟಾಪಟಿ, ರಶ್ಮಿಕಾ ವಿಜಯ್ ಕ್ಯೂಟ್ ವಿಡಿಯೋ ಬಹಿರಂಗ | Rashmika Mandanna Vijay Deverakonda Adorable Tussle Over Matching Clothes Before Reception



Rashmika Vijay ರೆಸೆಪ್ಶನ್‌ಗೂ ಮುನ್ನ ಮ್ಯಾಚಿಂಗ್ ಡ್ರೆಸ್‌ಗಾಗಿ ಜಟಾಪಟಿ, ರಶ್ಮಿಕಾ ವಿಜಯ್ ಕ್ಯೂಟ್ ವಿಡಿಯೋ ಬಹಿರಂಗ | Rashmika Mandanna Vijay Deverakonda Adorable Tussle Over Matching Clothes Before Reception

ರೆಸೆಪ್ಶನ್‌ಗೂ ಮುನ್ನ ಮ್ಯಾಚಿಂಗ್ ಡ್ರೆಸ್‌ಗಾಗಿ ಜಟಾಪಟಿ, ರಶ್ಮಿಕಾ ವಿಜಯ್ ಕ್ಯೂಟ್ ವಿಡಿಯೋ ಬಹಿರಂಗ, ರೆಸೆಪ್ಶೆನ್ ತಯಾರಿ ನಡುವೆ ಈ ಜೋಡಿಯ ವಿಡಿಯೋ ಒಂದು ಭಾರಿ ಸದ್ದು ಮಾಡುತ್ತಿದೆ. ರಶ್ಮಿಕಾ ಮ್ಯಾಚಿಂಗ್ ಡ್ರೆಸ್ ಹೇಳಿದ್ದರೆ, ವಿಜಯ್ ಡ್ರೆಸ್ ಕಲರ್ ಬಣ್ಣವೇ ಬೇರೆ. 

ಹೈದರಾಬಾದ್ (ಮಾ.01) ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಅದ್ಧೂರಿಯಾಗಿ ನಡೆದಿದೆ. ಕಳೆದ ಕೆಲ ದಿನಗಳಿಂದ ಈ ಸೆಲೆಬ್ರೆಟಿ ಜೋಡಿಯ ಮದುವೆಯದ್ದೇ ಸದ್ದು. ಸದ್ಯ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಹೈದರಾಬಾದ್‌‌ಗೆ ಮರಳಿದ್ದಾರೆ. ಇಂದು ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಇದೀಗ ಮಾರ್ಚ್ 4 ಆರತಕ್ಷತೆಗೆ ಅದ್ಧೂರಿ ತಯಾರಿ ನಡೆಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಈ ಸೆಲೆಬ್ರೆಟಿ ಜೋಡಿಗಳ ರೆಸೆಪ್ಶನ್ ಆಯೋಜನೆಗೊಂಡಿದೆ. ಹಲವು ಗಣ್ಯರು ಈ ರೆಸೆಪ್ಶನ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ರೆಸೆಪ್ಶನ್‌ಗೂ ಮೊದಲೇ ಈ ಜೋಡಿಯ ಕ್ಯೂಟ್ ಜಟಾಪಟಿ ಬಹಿರಂಗವಾಗಿದೆ. ಇಬ್ಬರು ಮ್ಯಾಚಿಂಗ್ ಡ್ರೆಸ್ ಹಾಕಲು ಎಲ್ಲಾ ಪ್ಲಾನ್ ಮಾಡಿದ್ದಾರೆ. ಭರ್ಜರಿ ತಯಾರಿಯೊಂದಿಗೆ ರಶ್ಮಿಕಾ ಆಗಮಿಸಿದ್ದಾರೆ. ಇತ್ತ ವಿಜಯ್ ದೇವರಕೊಂಡ ಕೂಡ ಅಷ್ಟೇ ಹ್ಯಾಂಡ್‌ಸಮ್ ಆಗಿ ಆಗಮಿಸಿದ್ದಾರೆ. ಇಬ್ಬರ ಡ್ರೆಸ್ ಬಣ್ಣ ಬೇರೆ ಬೇರೆ. ಇದು ರಶ್ಮಿಕಾ ಕೋಪಕ್ಕೂ ಕಾರಣವಾಗಿದೆ. ಇವರಿಬ್ಬರ ಈ ಕ್ಯೂಟ್ ಜಗಳದ ವಿಡಿಯೋ ಬಹಿರಂಗವಾಗಿದೆ.

ಟ್ವಿನ್ನಿಂಗ್ ಪ್ಲಾನ್ ಉಲ್ಟಾ

ಸೆಲೆಬ್ರೆಟಿ ಜೋಡಿಗಳ ಈ ವಿಡಿಯೋ ಒಂದು ಸಾರಿ ನೋಡಿದರೆ ನಿಮ್ಮ ಟೆನ್ಶನ್ ಕಡಿಮೆಯಾಗುತ್ತೆ. ಈ ಕ್ಯೂಟ್ ಜೋಡಿ ಕಿತ್ತಾಡಿಕೊಂಡಿರುವುದು ನಿಜ. ಆದರೆ ರಿಯಲ್ ಅಲ್ಲ, ಇದು ಜಾಹೀರಾತಿಗಾಗಿ ಚಿತ್ರೀಕರಿಸಿದ ವಿಡಿಯೋ. ಪ್ರತಿಷ್ಠಿತ ಡ್ರೆಸ್ ಬ್ರ್ಯಾಂಡ್ ಮೇಡ್ ಫಾರ್ ಈಚ್ ಅದರ್ ಪರಿಕಲ್ಪನೆಯಲ್ಲಿ ಈ ಜಾಹೀರಾತು ಬಿಡುಗಡೆ ಮಾಡಿದೆ. ಟ್ವಿನ್ನಿಂಗ್ ಪ್ಲಾನ್ ಇದೀಗ ಎಲ್ಲಾ ಮದುವೆಯಲ್ಲಿ ಸಾಮಾನ್ಯ. ಇದಕ್ಕಾಗಿ ನವ ಜೋಡಿಗಳು ಸಾಕಷ್ಚು ಚರ್ಚೆ ನಡೆಸಿ ಮದುವೆ ಸಮಾರಂಭದಲ್ಲಿ ಒಂದೇ ರೀತಿ, ಒಂದೇ ಬಣ್ಣದ ಮ್ಯಾಚಿಂಗ್ ಡ್ರೆಸ್ ಧರಿಸುತ್ತಾರೆ. ಇದೇ ಪರಿಕಲ್ಪನೆಯಲ್ಲಿ ಈ ಜಾಹೀರಾತು ವಿಡಿಯೋ ಬಿಡುಗಡೆಯಾಗಿದೆ.

ಮಾನ್ಯವರ್ ಬ್ರ್ಯಾಂಡ್ ನವ ಜೋಡಿಗಳಾದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿಯನ್ನು ತನ್ನ ಬ್ರ್ಯಾಂಡ್ ಪ್ರಮೋಶನ್‌ಗೆ ಬಳಸಿಕೊಂಡಿದೆ. ಇಬ್ಬರು ಮ್ಯಾಚಿಂಗ್ ಡ್ರೆಸ್ ಪ್ಲಾನ್ ಮಾಡಿರುತ್ತಾರೆ. ಆದರೆ ಕೊನೆಯ ಕ್ಷಣದಲ್ಲಿ ವಿಜಯ್ ದೇವರಕೊಂಡ ಬೇರೆ ಬಣ್ಣದ ಡ್ರೆಸ್ ಧರಿಸಿ ಆಗಮಿಸಿರುತ್ತಾರೆ. ಮ್ಯಾಚಿಂಗ್ ಪ್ಲಾನ್ ಮಾಡಿದ್ದೆವು. ಯಾಕೆ ನೀನು ಬೇರೆ ಬಣ್ಣಧ ಡ್ರೆಸ್ ಧರಿಸಿದ್ದಿಯಾ, ಕ್ಯಾನ್ಸಲ್ ಎಂದು ರಶ್ಮಿಕಾ ಮಂದಣ್ಣ ಖಡಕ್ ಆಗಿ ಹೇಳಿದ್ದಾಳೆ. ಇತ್ತ ಇವರಿಬ್ಬ ನಡುವಿನ ಸಂಭಾಷೆಯನ್ನು ಹಾಡಿನ ಮೂಲಕ ತೋರಿಸಲಾಗಿದೆ. ಅದ್ಭುತ ಜಾಹೀರಾತು ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.

ಕ್ಯೂಟ್ ಕಪಲ್

ಕ್ಯೂಟ್ ಜೋಡಿಯ ಕ್ಯೂಟ್ ಜಟಾಪಟಿ, ಇಬ್ಬರ ನಡುವಿನ ಸಣ್ಣ ಮುನಿಸು, ಪ್ಲಾನ್ ಎಲ್ಲವನ್ನೂ ಅಚ್ಚುಕಟ್ಟಾಗಿ ಈ ಜಾಹೀರಾತಿನಲ್ಲಿ ತೋರಿಸಲಾಗಿದೆ. ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಹೈದರಾಬಾದ್ ಆರತಕ್ಷತೆ ಬೆನ್ನಲ್ಲೇ ಈ ವಿಡಿಯೋ ಬಹಿರಂಗಪಡಿಲಾಗಿದೆ. ಎಲ್ಲವೂ ಕ್ಯೂಟ್ ಕಪಲ್ ಎಂದು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಇಬ್ಬರು ಈ ಡ್ರೆಸ್‌ನಲಿ ಸುಂದರವಾಗಿ ಕಾಣುತ್ತಿದ್ದೀರಿ, ಇದೇ ಡ್ರೆಸ್‌ನಲ್ಲಿ ರೆಸೆಪ್ಶನ್ ಮುಗಿಸಿಬಿಡಿ ಎಂದು ಸಲಹೆ ನೀಡಿದ್ದಾರೆ.



Source link

Leave a Reply

Your email address will not be published. Required fields are marked *