Headlines

Trisha Krishnan: ಪುರುಷರಲ್ಲಿ ಉದಯನಿಧಿ ಸ್ಟಾಲಿನ್, ಮಹಿಳೆಯರಲ್ಲಿ ರಮ್ಯಾ ಕೃಷ್ಣನ್ ಅವರನ್ನು ತ್ರಿಶಾ ಪ್ರೀತಿಸುತ್ತಿದ್ದಾರೆ, ವಿಜಯ್ ಅಲ್ಲ: ಗಾಯಕಿ ಸುಚಿತ್ರಾ! | Singer Suchitra Claims Trisha Is Not In Love With Vijay Says She Loves Udhayanidhi Stalin And Ramya Krishnan Instead

Trisha Krishnan: ಪುರುಷರಲ್ಲಿ ಉದಯನಿಧಿ ಸ್ಟಾಲಿನ್, ಮಹಿಳೆಯರಲ್ಲಿ ರಮ್ಯಾ ಕೃಷ್ಣನ್ ಅವರನ್ನು ತ್ರಿಶಾ ಪ್ರೀತಿಸುತ್ತಿದ್ದಾರೆ, ವಿಜಯ್ ಅಲ್ಲ: ಗಾಯಕಿ ಸುಚಿತ್ರಾ! | Singer Suchitra Claims Trisha Is Not In Love With Vijay Says She Loves Udhayanidhi Stalin And Ramya Krishnan Instead



Trisha Krishnan: ಪುರುಷರಲ್ಲಿ ಉದಯನಿಧಿ ಸ್ಟಾಲಿನ್, ಮಹಿಳೆಯರಲ್ಲಿ ರಮ್ಯಾ ಕೃಷ್ಣನ್ ಅವರನ್ನು ತ್ರಿಶಾ ಪ್ರೀತಿಸುತ್ತಿದ್ದಾರೆ, ವಿಜಯ್ ಅಲ್ಲ: ಗಾಯಕಿ ಸುಚಿತ್ರಾ! | Singer Suchitra Claims Trisha Is Not In Love With Vijay Says She Loves Udhayanidhi Stalin And Ramya Krishnan Instead

“ವಿಜಯ್ ಅವರಿಗೆ ತ್ರಿಶಾ ಮೇಲೆ ಅತಿಯಾದ ಪ್ರೀತಿ ಇರಬಹುದು, ಆದರೆ ತ್ರಿಶಾ ಪ್ರೀತಿಸುತ್ತಿರುವುದು ಉದಯನಿಧಿ ಸ್ಟಾಲಿನ್ ಅವರನ್ನು! ಅಸಲಿಗೆ ತ್ರಿಶಾ ಮತ್ತು ವರುಣ್ ಮಣಿಯನ್ ಮದುವೆ ನಿಂತಿದ್ದೇ ಉದಯನಿಧಿ ಸ್ಟಾಲಿನ್ ಅವರಿಂದ’ ಎಂದಿದ್ದಾರೆ ಗಾಯಕಿ ಸುಚಿತ್ರಾ.

ಸೌತ್ ಕ್ವೀನ್ ತ್ರಿಶಾ ಕೃಷ್ಣನ್ ಲೈಫ್‌ನಲ್ಲಿ ಅಸಲಿ ಕಿರಿಕ್ ಏನು? ಗಾಯಕಿ ಸುಚಿತ್ರಾ ಬಿಚ್ಚಿಟ್ಟ ಸ್ಫೋಟಕ ಸತ್ಯಗಳು! ಮದುವೆ ನಿಂತಿದ್ದಕ್ಕೆ ಉದಯನಿಧಿ ಸ್ಟಾಲಿನ್ ಕಾರಣವಾ?

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಸುಮಾರು ಎರಡು ದಶಕಗಳಿಂದ ತನ್ನ ಅಧಿಪತ್ಯ ಸ್ಥಾಪಿಸಿರುವ ನಟಿ ಎಂದರೆ ಅದು ತ್ರಿಶಾ ಕೃಷ್ಣನ್. 42 ವರ್ಷ ವಯಸ್ಸಾದರೂ ಇಂದಿನ ಯುವ ನಾಯಕಿಯರಿಗೂ ಪೈಪೋಟಿ ನೀಡುವಂತಹ ಸೌಂದರ್ಯ ಮತ್ತು ನಟನೆ ಇವರದ್ದು. ಸದ್ಯ ತ್ರಿಶಾ (Trisha Krishnan) ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಕಮಲ್ ಹಾಸನ್ ಅವರ ‘ಥಗ್ ಲೈಫ್’, ಅಜಿತ್ ಅವರ ‘ಗುಡ್ ಬ್ಯಾಡ್ ಅಗ್ಲಿ’ ಮತ್ತು ‘ವಿದ್ಯಾಮುಯರ್ಚಿ’ಯಂತಹ ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿರುವ ತ್ರಿಶಾ, ಈಗ ನಟ ಸೂರ್ಯ ಜೊತೆ ‘ಕರುಪ್ಪು’ ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ. ಆದರೆ, ಸಿನಿಮಾ ಯಶಸ್ಸಿನ ಜೊತೆಜೊತೆಗೇ ತ್ರಿಶಾ ಅವರ ವೈಯಕ್ತಿಕ ಜೀವನದ ಬಗ್ಗೆ ಕೇಳಿಬರುತ್ತಿರುವ ವಿವಾದಾತ್ಮಕ ಮಾತುಗಳು ಈಗ ಕಾಲಿವುಡ್‌ನಲ್ಲಿ ಸಂಚಲನ ಮೂಡಿಸಿವೆ.

ಸ್ಟಾರ್ ನಟರ ಜೊತೆಗಿನ ಯಶಸ್ವಿ ಪಯಣ:

ತ್ರಿಶಾ ಕೇವಲ ತಮಿಳು ಚಿತ್ರರಂಗಕ್ಕೆ ಸೀಮಿತವಾಗಿಲ್ಲ. ರಜನಿಕಾಂತ್, ಕಮಲ್ ಹಾಸನ್, ವಿಜಯ್, ಅಜಿತ್, ವಿಕ್ರಮ್, ಸೂರ್ಯ ಮತ್ತು ಧನುಷ್ ಅಂತಹ ದಿಗ್ಗಜರ ಜೊತೆ ನಟಿಸಿರುವ ಇವರು, ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ‘ಪವರ್’ ಚಿತ್ರದಲ್ಲಿ ನಾಯಕಿಯಾಗಿದ್ದರು. ದಕ್ಷಿಣ ಭಾರತದ ಪ್ರತಿಯೊಬ್ಬ ಸೂಪರ್ ಸ್ಟಾರ್ ಜೊತೆ ಸ್ಕ್ರೀನ್ ಹಂಚಿಕೊಂಡಿರುವ ಹೆಗ್ಗಳಿಕೆ ಇವರದ್ದು. ಆದರೆ, ವೃತ್ತಿಜೀವನದಲ್ಲಿ ಇಷ್ಟೊಂದು ಯಶಸ್ಸು ಕಂಡಿರುವ ತ್ರಿಶಾ, ವೈಯಕ್ತಿಕ ಜೀವನದಲ್ಲಿ ಮಾತ್ರ ಇಂದಿಗೂ ಒಂಟಿಯಾಗಿಯೇ ಉಳಿದಿದ್ದಾರೆ.

ಮದುವೆ ಮತ್ತು ಬ್ರೇಕಪ್‌ಗಳ ಕಹಿ ನೆನಪು:

ತ್ರಿಶಾ ಅವರ ಮದುವೆಯ ವಿಚಾರ ಸದಾ ಚರ್ಚೆಯಲ್ಲಿರುತ್ತದೆ. ಆರಂಭದಲ್ಲಿ ತೆಲುಗು ನಟ ರಾಣಾ ದಗ್ಗುಬಾಟಿ ಜೊತೆ ತ್ರಿಶಾ ಡೇಟಿಂಗ್ ಮಾಡುತ್ತಿದ್ದರು ಎಂಬ ಬಲವಾದ ವದಂತಿ ಇತ್ತು. ಆದರೆ ಕುಟುಂಬದ ಕಾರಣಗಳಿಂದ ಆ ಸಂಬಂಧ ಮುರಿದುಬಿತ್ತು ಎನ್ನಲಾಗುತ್ತದೆ. ನಂತರ ಉದ್ಯಮಿ ವರುಣ್ ಮಣಿಯನ್ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರೂ, ಮದುವೆಯ ಮಂಟಪ ಹತ್ತುವ ಮೊದಲೇ ಆ ಸಂಬಂಧವೂ ಅಂತ್ಯವಾಯಿತು. ಅಂದಿನಿಂದ ಇಂದಿನವರೆಗೆ ತ್ರಿಶಾ ಮದುವೆ ಎಂಬ ಹೆಸರನ್ನೇ ಎತ್ತಿಲ್ಲ.

ಗಾಯಕಿ ಸುಚಿತ್ರಾ ನೀಡಿದ ಸ್ಫೋಟಕ ಹೇಳಿಕೆ:

ಇವೆಲ್ಲದರ ನಡುವೆ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ಗಾಯಕಿ ಸುಚಿತ್ರಾ ಇತ್ತೀಚೆಗೆ ‘ಸಿನಿ ಬಝ್’ ಎಂಬ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತ್ರಿಶಾ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸುಚಿತ್ರಾ ಹೇಳುವ ಪ್ರಕಾರ, “ವಿಜಯ್ ಅವರಿಗೆ ತ್ರಿಶಾ ಮೇಲೆ ಅತಿಯಾದ ಪ್ರೀತಿ ಇರಬಹುದು, ಆದರೆ ತ್ರಿಶಾ ಪ್ರೀತಿಸುತ್ತಿರುವುದು ಉದಯನಿಧಿ ಸ್ಟಾಲಿನ್ ಅವರನ್ನು! ಅಸಲಿಗೆ ತ್ರಿಶಾ ಮತ್ತು ವರುಣ್ ಮಣಿಯನ್ ಮದುವೆ ನಿಂತಿದ್ದೇ ಉದಯನಿಧಿ ಸ್ಟಾಲಿನ್ ಅವರಿಂದ. ಅವರಿಬ್ಬರ ಮದುವೆ ಆಗುವುದನ್ನು ಉದಯನಿಧಿಗೆ ಸಹಿಸಲಾಗಲಿಲ್ಲ,” ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ಸುಚಿತ್ರಾ ಅವರ ಮಾತು ಇಲ್ಲಿಗೇ ನಿಲ್ಲಲಿಲ್ಲ. ಅವರು ಮುಂದುವರಿದು, “ನಟಿ ತ್ರಿಷಾ ಬೈ-ಸೆ*ಕ್ಸುವಲ್.. ತ್ರಿಶಾ ಅವರು ಪುರುಷರಲ್ಲಿ ಉದಯನಿಧಿ ಸ್ಟಾಲಿನ್ ಹಾಗೂ ಮಹಿಳೆಯರಲ್ಲಿ ನಟಿ ರಮ್ಯಾ ಕೃಷ್ಣನ್ ಅವರನ್ನೂ ಅತಿಯಾಗಿ ಹಚ್ಚಿಕೊಂಡಿದ್ದಾರೆ. ಇನ್ನು ಧನುಷ್ ಹೆಸರನ್ನು ತ್ರಿಶಾ ಕೇವಲ ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ನನ್ನ ಪ್ರಕಾರ ತ್ರಿಶಾ ಯಾರನ್ನೂ ಮದುವೆಯಾಗುವುದಿಲ್ಲ, ಅವರು ಈ ಎಲ್ಲಾ ಬಂಧನಗಳನ್ನು ಮೀರಿದ ಪ್ರೀತಿಯನ್ನು ಮಾಡುತ್ತಾರೆ,” ಎಂದು ಹೇಳಿದ್ದಾರೆ.

ಮೌನಕ್ಕೆ ಶರಣಾದ ತ್ರಿಶಾ:

ಈಗಾಗಲೇ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಅವರ ಡಿವೋರ್ಸ್ ಪ್ರಕರಣದಲ್ಲೂ ತ್ರಿಶಾ ಹೆಸರು ಕೇಳಿಬರುತ್ತಿದೆ. ಇಷ್ಟೆಲ್ಲಾ ಆರೋಪಗಳು ಮತ್ತು ವಿವಾದಾತ್ಮಕ ಹೇಳಿಕೆಗಳು ಹರಿದಾಡುತ್ತಿದ್ದರೂ ತ್ರಿಶಾ ಮಾತ್ರ ಯಾವುದಕ್ಕೂ ಪ್ರತಿಕ್ರಿಯಿಸದೆ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದ ರಾಜಕಾರಣಿಗಳ ವಿರುದ್ಧ ಕಾನೂನು ಸಮರ ಸಾರಿದ್ದ ತ್ರಿಶಾ, ಈಗ ಸುಚಿತ್ರಾ ಅವರ ಈ ಹೇಳಿಕೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ, ಸೌತ್ ಸಿನಿಮಾರಂಗದ ಈ ಚೆಲುವೆಯ ಜೀವನ ಸದ್ಯಕ್ಕೆ ವಿವಾದಗಳ ಸುಳಿಯಲ್ಲಿದೆ!



Source link

Leave a Reply

Your email address will not be published. Required fields are marked *