ಗದಗ, (ಮಾರ್ಚ್ 01): ಜಿಲ್ಲೆಯ ಲಕ್ಷ್ಮೇಶ್ವರ ಹೊರವಲಯದ ಜಮೀನಿನಲ್ಲಿ ಯುವಕ ಫಾರೂಕ್ ಸನದಿ (ಫಾರೂಕ್ ಸನದಿ ಕೊಲೆ ಪ್ರಕರಣ) ಎಂಬಾತನನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಿಶ್ವಿತಾರ್ಥ ಮಾಡಿಕೊಂಡಿದ್ದ ಹುಡುಗಿ ಪ್ರಿಯಕರನೇ ಫಾರೂಕ್ ಸನದಿಯನ್ನು ಕೊಲೆ ಮಾಡಿರುವುದು ಗೊತ್ತಾಗಿದೆ. ಪ್ರಿಯಕರ ದಾವಲಸಾಬ್ ಹಾಗೂ ಸ್ನೇಹಿತ ಮಕ್ಕಬೂಲ್ ಸಾಬ್ ಹಾಗೂ ಇಬ್ಬರು ಅಪ್ರಾಪ್ತರು ಹತ್ಯೆಗೈದಿರುವುದು ಬೆಳಕಿಗೆ ಬಂದಿದ್ದು, ಹತ್ಯೆಗೀಡಾದ 24 ಗಂಟೆಗಳಲ್ಲಿ ನಾಲ್ಕು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಔಷಧ ಶೈಲಿಯಲ್ಲಿ ಹಂತಕರನ್ನು ವಿಚಾರಣೆಗೊಳಪಡಿಸಿದಾಗ ತನ್ನ ಹುಡುಗಿಯನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಫಾರೂಕ್ ಸನದಿ ಕೊಲೆ ಮಾಡಿದ್ದಾಗಿ ದಾವಲಸಾಬ್ ಬಾಯ್ಬಿಟ್ಟಿದ್ದಾನೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ಶಿಗ್ಲಿ ಗ್ರಾಮದ ನಿವಾಸಿಯಾದ 25 ವರ್ಷದ ಫಾರೂಕ್ ಸನದಿ ಎಂಬಾತ ಮೂರು ತಿಂಗಳ ಹಿಂದೆ ಯುವತಿ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ. ಆದರೆ ಯುವತಿ ಹಾಗೂ ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ನಿವಾಸಿಯಾದ ದಾವಲಸಾಬ್ ಮಕಂದಾರ್ ಲವ್ ಮಾಡುತ್ತಿದ್ದಾರೆ. ಹೀಗಾಗಿ ದಾವಲಸಾಬ್, ನಿಶ್ವಿತಾರ್ಥ ಮಾಡಿಕೊಡುತ್ತಿದ್ದ ಫಾರೂಕ್ ಸನದಿಯನ್ನು ಮಾತನಾಡಿಸಿಕೊಂಡು ಜಮೀನಿಗೆ ಕರೆಯಿಸಿಕೊಂಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆಯಾಗಿದೆ. ಬಳಿಕ ಗಲಾಟ ವಿಕೋಪಕ್ಕೆ ತಿರುಗಿದ್ದು, ಇದೇ ಕೋಪದಲ್ಲಿ ಕೊಡಲಿಯಿಂದ ಫಾರೂಕ್ ಸವದಿಯನ್ನು ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.
ಇದನ್ನೂ ಓದಿ: ಭೀಕರ ಅಪಘಾತ : ದೇವರ ದರ್ಶನಕ್ಕೆ ಹೋಗಿ ಬರುತ್ತಿದ್ದ ನವದಂಪತಿ ಸ್ಥಳದಲ್ಲೇ ಸಾವು
ಘಟನೆ ಹಿನ್ನೆಲೆ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಜಮೀನು ನಿನ್ನೆ (ಫೆಬ್ರವರಿ 28) ಫಾರೂಕ್ ಸನದಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು. ಕತ್ತು ಕೊಯ್ದು ಬಳಿಕ ಹತ್ಯೆ ಮಾಡಲಾಯಿತು. ಕೊಲೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಂತಕರ ಸುಳಿವಿಗಾಗಿ ತೀವ್ರ ಶೋಧ ನಡೆಸಿದ್ದರು. ಸ್ಥಳಕ್ಕೆ ಗದಗ ಎಸ್ಪಿ ರೋಹನ್ ಜಗದೀಶ್, ಡಿವೈಎಸ್ಪಿ ಮುರ್ತುಜ ಖಾದ್ರಿ ಸೇರಿದಂತೆ ಅಧಿಕಾರಿಗಳು ದೌಡಾಯಿಸಿ ಹಂತಕರ ಪತ್ತೆಗೆ ತಂಡಗಳು ರಚನೆಯಾದವು. ಬಳಿಕ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಅಂತಿಮವಾಗಿ ಘಟನೆ ನಡೆದಿದ್ದು 24 ಗಂಟೆಗಳಲ್ಲಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮದುವೆಯಾಗಿ ಸುಂದರ ಜೀವನ ಮಾಡಬೇಕು ಎಂದು ಕನಸು ಕಂಡಿದ್ದ ಫಾರೂಕ್ ಸಾವಿನ ಮನೆ ಸೇರಿದ್ದಾನೆ. ಏನು ತಪ್ಪು ಮಾಡಿದ ಯುವಕ ಹತ್ಯೆ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.