VIROSH: ಏನೇ ಕೇಳಿ, ಈ ವಿಡಿಯೋ ನೋಡಿದ್ಮೇಲೆ ನಿಮ್ಮ ಮೇಲಿರೋ ಸಿಟ್ಟು ಕರಗಿಹೋಯ್ತು ಎಂದ ನೆಟ್ಟಿಗರು!

VIROSH: ಏನೇ ಕೇಳಿ, ಈ ವಿಡಿಯೋ ನೋಡಿದ್ಮೇಲೆ ನಿಮ್ಮ ಮೇಲಿರೋ ಸಿಟ್ಟು ಕರಗಿಹೋಯ್ತು ಎಂದ ನೆಟ್ಟಿಗರು!

VIROSH: ಏನೇ ಕೇಳಿ, ಈ ವಿಡಿಯೋ ನೋಡಿದ್ಮೇಲೆ ನಿಮ್ಮ ಮೇಲಿರೋ ಸಿಟ್ಟು ಕರಗಿಹೋಯ್ತು ಎಂದ ನೆಟ್ಟಿಗರು!
ವಿಜಯ ದೇವರಕೊಂಡ ಜೊತೆಗಿನ ಮದುವೆಯ ನಂತರ ರಶ್ಮಿಕಾ ಮಂದಣ್ಣ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮೈತುಂಬಾ ಸೀರೆ, ಮಲ್ಲಿಗೆ ಹೂವು ಹಾಗೂ ಮಂಗಳಸೂತ್ರ ಧರಿಸಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದು, ಅವರ ಈ ನಡೆ ಎಲ್ಲರ ಗಮನ ಸೆಳೆದಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ (Rashmika Manadanna and Vijaya Devarakonda) ಅವರ ಮದುವೆ ಭರ್ಜರಿಯಾಗಿ ನಡೆದಿದೆ. ಇದಾಗಲೇ ಫೋಟೋಗೆ ಹೆಚ್ಚಿನ ಕ್ಲಿಕ್ ಸೇರಿದಂತೆ ಈ ಮದುವೆ ಕೆಲವು ದಾಖಲೆಗಳನ್ನೂ ಬರೆದಿದೆ.

ವಜ್ರದ ಸೋಂಕು ಇಲ್ಲದೇ, ಕೆಜಿಗಟ್ಟಲೆ ಚಿನ್ನಾಭರಣಗಳನ್ನು ತೊಟ್ಟುಕೊಂಡಿದ್ದ ಜೋಡಿ ಒಂದಾದರೆ, ಗಂಡು ಮಕ್ಕಳಿಗೆ ಚಿನ್ನ ಹಾಕಿಕೊಳ್ಳಲು ಅವಕಾಶವೇ ಇಲ್ಲ ಎನ್ನುವವರಿಗೆ ಮಾದರಿಯಾಗಿ ನಿಂತವರು ವಿಜಯ ದೇವರಕೊಂಡ. ಗಂಡು ಹೆತ್ತವರ ಬಗ್ಗೆ ಇದಾಗಲೇ ಮೀಮ್ಸ್​ಗಳ ಸುರಿಮಳೆಯೇ ಆಗುತ್ತಿದೆ ಎನ್ನಿ.

ಕನ್ನಡಿಗರ ಪೈಕಿ ಹಲವರಿಗೆ ರಶ್ಮಿಕಾ ಮೇಲೆ ಕೋಪ ಇದೆ. ರಕ್ಷಿತ್​ ಶೆಟ್ಟಿ ಜೊತೆಗಿನ ಮದುವೆ ಮುರಿದದ್ದು ಯಾಕೋ ಗೊತ್ತಿಲ್ಲ, ಆದರೂ ರಶ್ಮಿಕಾ ಮೇಲೆಯೇ ಹಲವರು ಗೂಬೆ ಕೂಡ್ರಿಸುತ್ತಿದ್ದಾರೆ. ರಕ್ಷಿತ್​ ಅವರನ್ನು ತಮ್ಮ ಕರಿಯರ್ ಏಣಿಯಾಗಿ ಬಳಸಿಕೊಂಡ್ರು ಎನ್ನುವ ಗಂಭೀರ ಆರೋಪವನ್ನೂ ಮಾಡುತ್ತಿದ್ದಾರೆ.

ಅದೇನೇ ಇರಲಿ. ಆದರೆ ಹೆಚ್ಚಿನ ಸೆಲೆಬ್ರಿಟಿಗಳು, ಸೆಲೆಬ್ರಿಟಿಗಳು ಅಷ್ಟೇ ಏಕೆ, ಈಗಿನ ಹೆಣ್ಣುಮಕ್ಕಳು ಕೂಡ, ಸೀರೆ, ತಾಳಿ, ಕಾಲುಂಗುರ, ಕುಂಕುಮ ಎನ್ನುವುದನ್ನು ಕೇವಲ ಫ್ಯಾಷನ್​ ಆಗಿ ತೆಗೆದುಕೊಂಡಿದ್ದಾರೆ. ಇನ್ನು ಮಲ್ಲಿಗೆ ಹೂವು ಅಂತು ಬಿಡಿ ಅದು ದೇವರಿಗೇ ಪ್ರೀತಿ ಎನ್ನುವ ಹಾಗಿದೆ.

ಆದರೆ, ಮದುವೆಯ ಬಳಿಕ ರಶ್ಮಿಕಾ ಮಂದಣ್ಣ, ಪತಿಯ ಜೊತೆ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಮೈತುಂಬಾ ಸೀರೆ, ಕೂದಲಿಗೆ ಉದ್ದನೆಯ ಮಲ್ಲಿಗೆಯ ಮಾಲೆ ತೊಟ್ಟು ಬಂದಿರುವುದು ವಿಶೇಷ ಗಮನ ಸೆಳೆದಿದೆ. ಮದುವೆಯಾಗುತ್ತಿದ್ದಂತೆಯೇ ತಮಗೆ ಸೂಟ್​ ಆಗುವುದಿಲ್ಲ ಎಂದು ಮಂಗಳಸೂತ್ರವನ್ನು ಮನೆಯಲ್ಲಿ ಇಟ್ಟು ಬರುವವರ ನಡುವೆ, ರಶ್ಮಿಕಾ ಅವರ ಕತ್ತನ್ನು ನೋಡಿದವರೂ ಆಕೆಯನ್ನು ನಮಸ್ಕರಿಸುತ್ತಿದ್ದಾರೆ. ಈ ವಿಡಿಯೋ ಅನ್ನು ಇನ್​ಸ್ಟಾ ಬಾಲಿವುಡ್​ ಶೇರ್​ ಮಾಡಿದೆ.

ಸಾಮಾನ್ಯವಾಗಿ ಮದುವೆಯ ಬಳಿಕ ಸೆಲೆಬ್ರಿಟಿಗಳು ದೇವಸ್ಥಾನಕ್ಕೆ ಬರುವಾಗಲೂ ಮಾಡರ್ನ್​ ಡ್ರೆಸ್​ ಧರಿಸಿ ಬರುವುದು ಉಂಟು. ಇನ್ನು ಸೀರೆ ಉಟ್ಟರೆ, ಅದು ಸೀರೆ ಹೌದೋ, ಅಲ್ಲವೋ ಎಂದು ಡೌಟ್​ ಪಡುವ ರೀತಿಯಲ್ಲಿ ಪ್ರದರ್ಶನ ನಡೆಯುವುದು ಉಂಟು.

Source link

Leave a Reply

Your email address will not be published. Required fields are marked *