Headlines

ಡಿವೋರ್ಸ್‌ ಆಗಿ 13 ವರ್ಷಗಳೇ ಕಳೆದರೂ ನಿಲ್ಲದ ಟ್ರೋಲ್: ಕಾನೂನು ಕ್ರಮದ ಎಚ್ಚರಿಕೆ ನೀಡಿದ ಪವನ್ ಕಲ್ಯಾಣ್ ಮಾಜಿ ಪತ್ನಿ

ಡಿವೋರ್ಸ್‌ ಆಗಿ 13 ವರ್ಷಗಳೇ ಕಳೆದರೂ ನಿಲ್ಲದ ಟ್ರೋಲ್: ಕಾನೂನು ಕ್ರಮದ ಎಚ್ಚರಿಕೆ ನೀಡಿದ ಪವನ್ ಕಲ್ಯಾಣ್ ಮಾಜಿ ಪತ್ನಿ

ಡಿವೋರ್ಸ್‌ ಆಗಿ 13 ವರ್ಷಗಳೇ ಕಳೆದರೂ ನಿಲ್ಲದ ಟ್ರೋಲ್: ಕಾನೂನು ಕ್ರಮದ ಎಚ್ಚರಿಕೆ ನೀಡಿದ ಪವನ್ ಕಲ್ಯಾಣ್ ಮಾಜಿ ಪತ್ನಿ

ನಟ ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದ 13 ವರ್ಷಗಳೇ  ಕಳೆದರೂ ನಿರಂತರ ಟ್ರೋಲಿಂಗ್ ಎದುರಿಸುತ್ತಿರುವ ನಟಿ ರೇಣು ದೇಸಾಯಿ, ಇದೀಗ ಕಿಡಿಗೇಡಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ತಮ್ಮ ವೈಯಕ್ತಿಕ ಜೀವನವನ್ನು ಗುರಿಯಾಗಿಸಿ ಅವಾಚ್ಯವಾಗಿ ನಿಂದಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

ಹಲವು ವಿಚ್ಛೇದನ ಪ್ರಕರಣಗಳು ಇಬ್ಬರ ನಡುವಿನ ಹೊಂದಾಣಿಕೆಯ ಕೊರತೆಯಿಂದಲೇ ಆಗಿರುತ್ತದೆ. ಅದರಲ್ಲೂ ಸಿನಿಮಾ ಸೀರಿಯಲ್ ಮುಂತಾದ ಮನೋರಂಜನೆ ಕ್ಷೇತ್ರದಲ್ಲಿ ಇರುವ ಸೆಲೆಬ್ರಿಟಿಗಳ ವಿಚ್ಛೇದನವಂತು ಪರಸ್ಪರ ಒಪ್ಪಿಗೆಯಿಂದಲೇ ಆಗಿರುತ್ತದೆ. ವಿಚ್ಛೇದನಕ್ಕೊಳಗಾದ ಜೋಡಿಗಳು ಕೂಡ ನೆಮ್ಮದಿಯಾಗಿ ಬೇರೆ ಮದುವೆಯಾಗಿಯೋ ಅಥವಾ ಬೇರೆ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬದುಕನ್ನು ಬದಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ಈ ಸೆಲೆಬ್ರಿಟಿಗಳ ವಿಚ್ಚೇದನ ಪ್ರಕರಣಗಳಲ್ಲಿ ನಿರಂತರವಾಗಿ ಸೋಶಿಯಲ್ ಮೀಡಿಯಾ ಮೂಲಕ ಹೆಣ್ಣು ಮಕ್ಕಳನ್ನು ನಿಂದಿಸುವುದು ದೂಷಿಸುವುದು ಮಾಡಲಾಗುತ್ತಿದೆ. ಈ ರೀತಿಯ ನಿರಂತರ ಟ್ರೋಲ್‌ಗಳಿಂದ ಬೇಸತ್ತ ನಟಿ ಹೋರಾಟಗಾರ್ತಿ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಇಂತಹ ಟ್ರೋಲರ್ಸ್‌ಗಳ ವಿರುದ್ಧ ಈಗ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ರೇಣು ದೇಸಾಯಿ ಅವರು ತೆಲುಗಿನ ಸೂಪರ್ ಸ್ಟಾರ್ ಆಂಧ್ರಪ್ರದೇಶದ ಪ್ರಸ್ತುತ ಡಿಸಿಎಂ ಆಗಿರುವ ಪವನ್ ಕಲ್ಯಾಣ್ ಅವರ ವಿಚ್ಛೇದನ ಪಡೆದು ಬರೋಬ್ಬರಿ 13 ವರ್ಷಗಳೇ ಕಳೆದಿವೆ. ಪವನ್ ಕಲ್ಯಾಣ್ ಈ ವಿಚ್ಛೇದನದ ನಂತರ ಅನ್ನಾ ಲೆಜ್ನೆವಾ ಎಂಬ ವಿದೇಶಿ ಮಹಿಳೆಯನ್ನು ಮದುವೆಯಾಗಿ ಒಬ್ಬ ಮಗನನ್ನು ಪಡೆದಿದ್ದಾರೆ. ಅದರೂ ಅವರ 2ನೇ ಪತ್ನಿಯಾದ ರೇಣು ದೇಸಾಯಿ ಅವರನ್ನು ಕೆಲವು ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಅವಾಚ್ಯವಾಗಿ ನಿಂದಿಸುತ್ತಾ ಟ್ರೋಲ್ ಮಾಡುತ್ತಿದ್ದು, ಇದರಿಂದ ತೀವ್ರ ಬೇಸರದ ಜೊತೆ ಆಕ್ರೋಶಗೊಂಡಿರುವ ರೇಣು ದೇಸಾಯಿ, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ

ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಉದ್ದನೇಯ ವೀಡಿಯೋ ಪೋಸ್ಟ್ ಮಾಡಿದ ರೇಣು ದೇಸಾಯಿ, ಇತ್ತೀಚೆಗೆ ತಾವು ಎದುರಿಸಿದ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. 2012 ರಲ್ಲಿ ನಟ ಮತ್ತು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದಾಗಿನಿಂದಲೂ ತಾವು ಟ್ರೋಲಿಂಗ್ ಎದುರಿಸುತ್ತಿರುವುದಾಗಿ ಹೇಳಿದ ರೇಣು, ಜನವರಿಯಲ್ಲಿ ಬೀದಿ ನಾಯಿ ಕಡಿತದ ವಿಷಯದ ಬಗ್ಗೆ ಮಾತನಾಡಲು ಸುದ್ದಿಗೋಷ್ಠಿ ನಡೆಸಿದ ನಂತರ ಇದು ಇನ್ನಷ್ಟು ತೀವ್ರಗೊಂಡಿದೆ ಎಂದು ಹೇಳಿದರು. ತಮ್ಮನ್ನು ಟ್ರೋಲ್ ಮಾಡುವವರು ಮಿತಿ ಮೀರಿದ್ದು, ಅಶ್ಲೀಲ ಭಾಷೆ ಬಳಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

ಈಗ ನನಗೆ ಯಾವುದೇ ನಿಂದನೆಗಳು ಕಂಡುಬಂದರೆ ನಾನು ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ ಸೈಬರ್ ಪೊಲೀಸರು ನೀವು ಎಲ್ಲಿ ವಾಸಿಸುತ್ತಿದ್ದೀರಿ ಎಂಬುದನ್ನು ಕಂಡುಹಿಡಿದು ಬಂಧಿಸುವುದನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ. ಈ ಅರ್ಥಹೀನ ನಿಂದನೆಯಿಂದ ಸಾಕು ಸಾಕಾಗಿ ಹೋಗಿದೆ ಎಂದು ಅವರು ಹೇಳಿದ್ದಾರೆ. 2012ರಲ್ಲಿ ವಿಚ್ಛೇದನ ಆದಾಗಿನಿಂದಲೂ ನನ್ನನ್ನುಎಲ್ಲಾ ರೀತಿಯಿಂದ ಟ್ರೋಲ್ ಮಾಡಲಾಗುತ್ತಿದೆ. ನೀವು ನನ್ನ ವೈಯಕ್ತಿಕ ಬದುಕಿನ ಪ್ರತಿ ಮಜಲುಗಳನ್ನು ಹಿಡಿದು ಟ್ರೋಲ್ ಮಾಡಿದ್ದೀರಿ. ನಾನು ಎಷ್ಟು ಜೀವನಾಂಶ ಪಡೆದೆ ಎಂಬುದರಿಂದ ಹಿಡಿದು, ನಾನು ರಾಜಕೀಯ ಪಕ್ಷ ಸೇರುವ ವಿಚಾರವೂ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಟ್ರೋಲ್ ಮಾಡಲಾಯ್ತು. ನನ್ನ ಬಗ್ಗೆ ನಿಮಗೆ ಹೇಳುವುದಕ್ಕೆ ಇನ್ನು ಏನು ಉಳಿದಿಲ್ಲ ಎಂದು ನಾನು ಭಾವಿಸುತ್ತೇನೆ.

ಆದರೂ ಜನರು ಟ್ರೋಲ್ ಮಾತ್ರ ನಿಲ್ಲಿಸುತ್ತಿಲ್ಲ, ಜನವರಿಯಿಂದ ಇದು ತೀವ್ರಗೊಂಡಿದೆ. ಜನವರಿಯಲ್ಲಿ ಬೀದಿ ನಾಯಿ ವಿಷಯದ ಕುರಿತು ಪತ್ರಿಕಾಗೋಷ್ಠಿ ನಡೆಸಿದ ನಂತರ ನನ್ನನ್ನು ನಿರಂತರವಾಗಿ ಟೀಕಿಸುತ್ತಾರೆ ಎಂದು ನನಗೆ ತಿಳಿದಿತ್ತು ಆದ್ದರಿಂದ ನಾನು ಆರಂಭದಲ್ಲಿ ನಿರಾಕರಿಸಿದೆ. ಆದರೂ, ನಾನು ಹೇಳಿದ್ದನ್ನು ಅರ್ಥಮಾಡಿಕೊಳ್ಳುವ ಬದಲು, ನೀವು ಅದನ್ನು ಸರ್ಕಸ್ ಆಗಿ ಪರಿವರ್ತಿಸಿದ್ದೀರಿ. ನನ್ನನ್ನು ಮತ್ತೊಮ್ಮೆ ಟ್ರೋಲ್ ಮಾಡಲಾಯಿತು. ನಿಮಗೆ ನನ್ನ ನಟನೆ ನನ್ನ ಕೆಲಸ ಇಷ್ಟವಾಗದಿದ್ದರೆ ನನಗೆ ಹೇಳಿ ಅದು ವಾಕ್ ಸ್ವಾತಂತ್ರ್ಯ, ಅದು ಬಿಟ್ಟು ನೀವು ಪ್ರತಿ ಬಾರಿ ನನ್ನ ವೈಯಕ್ತಿಕ ಜೀವನವನ್ನು ಪ್ರಸ್ತಾಪಿಸುತ್ತಾ ನನ್ನನ್ನು ಟ್ರೋಲ್ ಮಾಡುತ್ತಿದ್ದೀರಿ ಎಂದು ರೇಣು ದೇಸಾಯಿ ಭಾವುಕರಾಗಿದ್ದಾರೆ.

Source link

Leave a Reply

Your email address will not be published. Required fields are marked *