ಮೈಸೂರು, ಮಾರ್ಚ್ 01: ಭಾರತಕ್ಕೆ ಬರುವ ವಿದೇಶಿಗರು (ವಿದೇಶಿಯರು) ಇಲ್ಲಿನ ಪ್ರವಾಸಿ ತಾಣಗಳು, ವಿವಿಧ ಆಹಾರಗಳನ್ನು ಇಷ್ಟಪಟ್ಟು ಸವಿಯುತ್ತಾರೆ. ಆಚಾರ ವಿಚಾರವನ್ನು ಇಷ್ಟ ಪಟ್ಟು ಇಲ್ಲೇ ಸೆಟಲ್ ಆಗ್ತಾರೆ. ಅಷ್ಟೇ ಅಲ್ಲದೆ ಭಾರತೀಯರ ಒಳ್ಳೆಯ ಮನಸ್ಸಿಗೆ ಹಾಗೂ ಅತಿಥಿ ಸತ್ಕಾರಕ್ಕೆ ಮನಸೋಲುವುದಿದೆ. ಇದೀಗ ಭಾರತಕ್ಕೆ ಭೇಟಿ ನೀಡಿದ ವಿದೇಶಿಗರು ಹಂಚಿಕೊಂಡ ಹೃದಯಸ್ಪರ್ಶಿ ಅನುಭವವು ಎಲ್ಲರ ಗಮನ ಸೆಳೆದಿದೆ. ಮೈಸೂರಿನ (ಮೈಸೂರು) ಬೀದಿಗಳಲ್ಲಿ ನಡೆದುಕೊಂಡು ಹೋಗುವಾಗ ವಿದೇಶಿಗರು ಅನಿರೀಕ್ಷಿತ ಕ್ಷಣವನ್ನು ಸೆರೆ ಹಿಡಿದಿದ್ದಾರೆ. ಉಚಿತವಾಗಿ ಬಿರಿಯಾನಿ ನೀಡಿದ್ದು, ಭಾರತೀಯರ ಆತಿಥ್ಯಕ್ಕೆ ಮನಸೋತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
lepanimusicc ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವಿದೇಶಿಗಿದ್ದಾರೆ ಮೈಸೂರಿನ ಬೀದಿಗಳಲ್ಲಿ ಸುತ್ತಾಡಿದ್ದಾರೆ. ಈ ವಿಡಿಯೋದಲ್ಲಿ ಸ್ಥಳೀಯರೊಬ್ಬರಿಗೆ ಉಚಿತವಾಗಿ ಊಟ ಬಡಿಸುವುದನ್ನು ನೋಡಬಹುದು. ಈ ಕ್ಲಿಪ್ನ ಶೀರ್ಷಿಕೆಯಲ್ಲಿ ಭಾರತವು ಅದ್ಭುತವಾದ ಸ್ಥಳ. ನಾವು ಮೈಸೂರಿನ ಜನನಿಬಿಡ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಸುವಾಸನೆ ನನ್ನ ಮೂಗಿಗೆ ಬಡಿಯಿತು. ನಾವು ರಸ್ತೆಯ ಆಚೆ ನೋಡಿದೆವು. ಒಂದು ದೊಡ್ಡ ಪಾತ್ರದ ಹಿಂದೆ ಇದ್ದ ಆ ವ್ಯಕ್ತಿ ನಗುವಿನೊಂದಿಗೆ, ಜನರಿಗೆ ಪ್ಲೇಟ್ ಬಿರಿಯಾನಿಯನ್ನು ಹಾಕುತ್ತಿದ್ದವರು ನಮ್ಮ ಕೈ ಬೀಸುತ್ತಿದ್ದರು.
ವೈರಲ್ ವಿಡಿಯೋ ಇಲ್ಲಿದೆ
ಸ್ಥಳಕ್ಕೆ ನಾನು ಹಿಂಜರಿದಿದ್ದೆ, ಆ ಬಳಿಕ ನಾವು ಹೋದೆವು. ನಾನು ಅವನ ಬಳಿ ಒಂದು ಪ್ಲೇಟ್‌ಗೆ ಎಷ್ಟು ಎಂದು ಕೇಳಿದೆ. ಅವನು ‘ಚಿಂತಿಸಬೇಡಿ, ತಿನ್ನಿರಿ’ ಎಂದು ಹೇಳಿದನು. ನನಗೆ ಒಂದು ಪ್ಲೇಟ್ ಬಿರಿಯಾನಿ ಬಡಿದ. ಅವನ ಸ್ನೇಹಿತ ನನಗೆ ಮೇಲೆ ಸ್ವಲ್ಪ ಚಿಕನ್ ಕರಿ ಬಡಿಸಿದನು. ನಾನು ಬೀದಿ ಬದಿಯಲ್ಲಿ ಕೆಲವು ಸ್ಥಳೀಯರ ಪಕ್ಕದಲ್ಲಿ ನಿಂತು ನನ್ನ ಜೀವನದಲ್ಲಿ ಹೊಟ್ಟೆ ತುಂಬುವ ರುಚಿಕರ ಬಿರಿಯಾನಿ ತಿಂದೆ ಎಂದು ಬರೆದುಕೊಂಡಿದ್ದೇನೆ.
ಇದನ್ನೂ ಓದಿ: ಧೋಬಿ ಘಾಟ್‌ಗೆ ತೆರಳಿ ತನ್ನ ಮಕ್ಕಳಿಗೆ ಜೀವನ ಪಾಠ ಹೇಳಿಕೊಟ್ಟ ತಾಯಿ
ಈ ವಿಡಿಯೋ ಅಧಿಕವಾಗಿ ವೀಕ್ಷಿಸಿದ್ದು, ಒಬ್ಬ ಬಳಕೆದಾರ ಇದು ನಮಗೆ ತಿಳಿದಿರುವ ಭಾರತ, ಅಲ್ಲಿ ಅತಿಥಿಗಳನ್ನು ಕುಟುಂಬದವರಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ವಿದೇಶಿಗರು ಭಾರತವನ್ನು ಇಷ್ಟ ಪಡಲು ಇದುವೇ ಕಾರಣ ಎಂದು ಕಾಮೆಂಟ್ ಮಾಡಿದ್ದಾರೆ. ಇತರರು, ಇದು ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಶುದ್ಧ ಮಾನವೀಯತೆ ಇದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 6:42 pm, ಭಾನುವಾರ, 1 ಮಾರ್ಚ್ 26