Headlines

ಶುಲ್ಕ ಕಟ್ಟಿಲ್ಲವೆಂದು ಬೈಕ್ ಅಡವಿಟ್ಟುಕೊಂಡು ವಿದ್ಯಾರ್ಥಿಗೆ ಹಾಲ್ ಟಿಕೆಟ್ ನೀಡಿದ ಕಾಲೇಜು

ಶುಲ್ಕ ಕಟ್ಟಿಲ್ಲವೆಂದು ಬೈಕ್ ಅಡವಿಟ್ಟುಕೊಂಡು ವಿದ್ಯಾರ್ಥಿಗೆ ಹಾಲ್ ಟಿಕೆಟ್ ನೀಡಿದ ಕಾಲೇಜು


ಹಾವೇರಿ, ಮಾರ್ಚ್ 01: ಇತ್ತೀಚೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಹಣಕ್ಕಾಗಿ ಶಿಕ್ಷಣ ನೀಡುತ್ತಿವೆ ಎಂಬ ಅನುಮಾನಗಳು ಮೂಡುತ್ತಿವೆ. ಏಕೆಂದರೆ ಇದಕ್ಕೆ ಸಾಕ್ಷಿಯೆಂಬಂತೆ ಘಟನೆಯೊಂದು ನಡೆದಿದೆ. ಇಲ್ಲೊಂದು ಖಾಸಗಿ ಶಿಕ್ಷಣ ಸಂಸ್ಥೆ ಶುಲ್ಕ ಕಟ್ಟಿಲ್ಲ ಅಂತಾ ಆರೋಪಿ ವಿದ್ಯಾರ್ಥಿಗೆ ಪ್ರವೇಶ ಪತ್ರ ನೀಡಿಲ್ಲ. (ಹಾಲ್ ಟಿಕೆಟ್) ಮಾಹಿತಿ. ಸದ್ಯ ಆಡಳಿತ ಮಂಡಳಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಕಿಯಿಂದ ದರ್ಪ

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಬಿಜೆಎಸ್ ಕಾಲೇಜು ಆವರಣದಲ್ಲಿರುವ ಪಿಯುಸಿ ಡಿಬಿಎಸ್ ಮೆಡಿಕಲ್ ನೀಟ್ ಅಕಾಡೆಮಿ ಕಾಲೇಜ್ ನಲ್ಲಿ ಘಟನೆ ನಡೆದಿದೆ. ಸಾರಾ ಜೆಸ್ಸಿಕಾ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದರು, ಪರೀಕ್ಷೆ ಹಾಲ್ ಟಿಕೆಟ್ ನೀಡದೆ ಕಳೆದ ಒಂದು ವಾರದಿಂದ ಆಡಳಿತ ಮಂಡಳಿ ಸತಾಯಿಸಿದೆ. ವಿದ್ಯಾರ್ಥಿನಿ ಭವಿಷ್ಯ ಹಾಳಾಗುತ್ತೆ, ಹಾಲ್ ಟಿಕೆಟ್ ನೀಡುವಂತೆ ಕೇಳಿದಾಗ ಸುನೀತಾ ಮೇಡಂ ಎನ್ನುವವರು ಎಲ್ಲಾ ಕಾಲೇಜಿನವರು ಪುಗಸಟ್ಟೆ ಕಲಿಸುತ್ತಾರಾ ಎಂದು ದರ್ಪ ತೋರಿದ್ದಾರೆ.

ಜೊತೆಗೆ ಪ್ರಕರಣ ಮಧ್ಯಸ್ಥಿಕೆ ವಹಿಸಿದ ಶಿವಪುತ್ರ ಎಂಬುವವರ ಬೈಕ್ ಮತ್ತು ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ. ಕೊನೆಗೆ ಮೊಬೈಲ್ ಕೊಟ್ಟು ಬೈಕ್ ಇಟ್ಟುಕೊಂಡಿದ್ದಾರೆ. ಬಳಿಕ ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿಗೆ ಹಾಲ್ ಟಿಕೆಟ್ ನೀಡಿ ಪರೀಕ್ಷೆಗೆ ಅವಕಾಶ ನೀಡಿದ್ದಾರೆ.

ಇದನ್ನೂ ಓದಿ: ಶುಲ್ಕ ಬಾಕಿ: ವಿದ್ಯಾರ್ಥಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಹಾಲ್ ಟಿಕೆಟ್ ನಿರಾಕರಿಸಿದ ಕಾಲೇಜು

ಸುನೀತಾ ಡಿಬಿ ಮೇಡಂ ಸರ್ಕಾರಿ ಹಿರಿಯ ಉನ್ನತೀಕರಣ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಖಾಸಗಿ ಶಾಲೆಯಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. 30 ಸಾವಿರ ಶುಲ್ಕಕ್ಕಾಗಿ ವಿದ್ಯಾರ್ಥಿನಿ ಕಣ್ಣೀರು ಹಾಕಿದ್ದು, ಸರ್ಕಾರಿ ಶಾಲೆಯ ಶಿಕ್ಷಕರಿಗೆ ಖಾಸಗಿ ಶಾಲೆಯಲ್ಲಿ ಏನು ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಈ ಹಿಂದೆ ಈ ಶಾಲೆಯಲ್ಲಿ ಕೆಲಸ ಮಾಡಿದ ಶಿಕ್ಷಕರಿಗೆ ಸಂಬಳ ನೀಡಿಲ್ಲ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಲು ಸುನೀತಾ ಮೇಡಂ ನಿರಾಕರಿಸಿದರು. ವಿದ್ಯಾರ್ಥಿನಿ ಸಾರಾ ತಂದೆ ರಾಜು ಪ್ರತಿಕ್ರಿಯಿಸಿದ್ದು, ಶುಲ್ಕವನ್ನು ಕಟ್ಟಿದ್ದೇನೆ. ಅದಕ್ಕೆ ಸರಿಯಾದ ರಸೀದಿ ನೀಡಲ್ಲ’ ಎಂದರು. ಇನ್ನು ಈ ವಿಚಾರ ಬಿಐಒ ಶ್ಯಾಮಸುಂದರ್ ಗಮನಕ್ಕೆ ತರಲು, ನೋಟಿಸ್ ನೀಡಿ ತನಿಖೆ ಮಾಡುತ್ತಾರೆ ಅಂದಿದ್ದಾರೆ.

ಇದನ್ನೂ ಓದಿ: ಪರೀಕ್ಷೆಗೆ ಹೆದರಿ ಶಾಲೆಯ ಕಾಂಪೌಂಡ್ ಹಾರಿ 5 ಮಂದಿ SSLC ವಿದ್ಯಾರ್ಥಿಗಳು ಪರಾರಿ!

ಒಟ್ಟಿನಲ್ಲಿ ಖಾಸಗಿ ಶಾಲೆಯ ಧನದಾಯಿ ಆಸೆಗಾಗಿ ವಿದ್ಯಾರ್ಥಿನಿ ಪ್ರವೇಶ ಪತ್ರ ಸತಾಯಿಸುತ್ತಿದೆ. ಸ್ಥಳೀಯರು ಸುನೀತಾ ಮೇಡಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದು, ಸರ್ಕಾರಿ ಶಾಲೆಯ ಶಿಕ್ಷಕರ ವಿರುದ್ಧ ತನಿಖೆ ನಡೆಸುವಂತೆ ಮಾಡಲಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *