Headlines

Dog Satish ಮಗನಿಗೆ ಡಿಂಪಲ್​ ಕ್ವೀನ್​ ರಚಿತಾ ರಾಮ್​ ನಾಯಕಿ? 1 ಕೋಟಿಗೆ ಆಫರ್​; ಏನಿದು ಬಿಸಿಬಿಸಿ ಸುದ್ದಿ?

Dog Satish ಮಗನಿಗೆ ಡಿಂಪಲ್​ ಕ್ವೀನ್​ ರಚಿತಾ ರಾಮ್​ ನಾಯಕಿ? 1 ಕೋಟಿಗೆ ಆಫರ್​; ಏನಿದು ಬಿಸಿಬಿಸಿ ಸುದ್ದಿ?

Dog Satish ಮಗನಿಗೆ ಡಿಂಪಲ್​ ಕ್ವೀನ್​ ರಚಿತಾ ರಾಮ್​ ನಾಯಕಿ? 1 ಕೋಟಿಗೆ ಆಫರ್​; ಏನಿದು ಬಿಸಿಬಿಸಿ ಸುದ್ದಿ?

ಬಿಗ್‌ಬಾಸ್ ಖ್ಯಾತಿಯ ಡಾಗ್ ಸತೀಶ್ ಅವರ ಮಗ ಹರ್ಷ್ ಅವರನ್ನು ನಾಯಕನನ್ನಾಗಿ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಹರ್ಷ್‌ಗೆ ನಾಯಕಿಯಾಗಿ ನಟಿ ರಚಿತಾ ರಾಮ್‌ಗೆ ಒಂದು ಕೋಟಿ ರೂಪಾಯಿ ಆಫರ್ ನೀಡಲಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬಿಗ್​ಬಾಸ್​ನಿಂದ ಫೇಮಸ್​ ಆಗಿರೋ ಡಾಗ್​ ಸತೀಶ್​ (Bigg Boss Dog Satish) ಹೇಗಾದ್ರೂ ಮಾಡಿ ತಮ್ಮ ಹೆಸರು ಚಾಲ್ತಿಯಲ್ಲಿ ಇರಬೇಕು ಎಂದುಕೊಂಡು ಒಂದರ ಮೇಲೊಂದರಂತೆ ಮನಸ್ಸಿಗೆ ಬಂದಂತೆ ಮಾತನಾಡ್ತಿರೋದು ಎಲ್ಲರಿಗೂ ಗೊತ್ತಿರುವಂಥದ್ದೇ. ಬಾಯಿ ಬಿಟ್ಟರೆ, ಕೋಟಿಯಲ್ಲಿಯೇ ಮಾತನಾಡುವ ಡಾಗ್​ ಸತೀಶ್​, ತಾವು ಅಂದುಕೊಂಡಷ್ಟು ಫೇಮಸ್​ ಆಗಿಲ್ಲ ಎಂದೋ ಏನೋ, ದರ್ಶನ್​ ಅವರ ಬಗ್ಗೆ ವಿವಾದ ಸೃಷ್ಟಿಸಿ ಕೇಸು ದಾಖಲಿಸಿಕೊಂಡಿದ್ದಾರೆ.

ಅಷ್ಟಕ್ಕೂ ಡಾಗ್​ ಸತೀಶ್​ ಅವರಿಗೆ ಜೈಲು ಹೊಸತೇನಲ್ಲ. ಇದಾಗಲೇ ಫ್ಯಾಮಿಲಿ ಮ್ಯಾಟರ್​ನಲ್ಲಿಯೂ ಜೈಲುವಾಸ ಅನುಭವಿಸಿದ್ದಾರೆ. ಅದರ ಬಗ್ಗೆಯೂ ಇದಾಗಲೇ ಹೊಗಳಿಕೊಂಡಿದ್ದ ಸತೀಶ್​ ಅವರು, ಮನೆಗಿಂತ ಜೈಲೇ ವಾಸಿ. ಅಲ್ಲಿ ಇರುವವರನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದು ನನಗೆ ಗೊತ್ತು. ರಾಜಾತಿಥ್ಯ ಪಡೆದುಕೊಳ್ಳಲು ಏನೆಲ್ಲಾ ಮಾಡಬೇಕು ಎನ್ನುವುದು ನನಗೆ ಗೊತ್ತು ಎಂದು ಸಂದರ್ಶನದಲ್ಲಿ ಹೇಳಿದ್ದರು!

ಆದರೆ, ಇದೀಗ ಸುದ್ದಿ ಮಾಡ್ತಿರೋದು ಡಾಗ್​ ಸತೀಶ್​ ಅಲ್ಲ, ಬದಲಿಗೆ ಅವರ ಮಗ ಹರ್ಷ್​. ಇದಾಗಲೇ ಡಾಗ್​ ಸತೀಶ್​ ತಮ್ಮ ಮಗನನ್ನು ವಿಶ್ವದ ನಂಬರ್​ 2 ನಾಯಕ ಮಾಡುವುದಾಗಿ ಘೋಷಿಸಿದ್ದಾರೆ. ನಂ.1 ಮಾಡಿದರೆ ಆತನಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೊಬ್ಬು ಬಂದು ಬಿಡುತ್ತದೆ ಎನ್ನುವ ಕಾರಣವನ್ನೂ ಕೊಟ್ಟಿದ್ದಾರೆ.

ಅದಕ್ಕೆ ತಕ್ಕಂತೆ ಈಗ ಅವರ ಅಭಿಮಾನಿಗಳೋ ಏನೋ ಗೊತ್ತಿಲ್ಲ, ಒಟ್ಟಿನಲ್ಲಿ ಒಂದಿಷ್ಟ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ, ಹರ್ಷ್​ ಅವರಿಗೆ ನಾಯಕಿಯಾಗಿ ಡಿಂಪಲ್​ ಕ್ವೀನ್​ ರಚಿತಾ ರಾಮ್​ ನಟಿಸುತ್ತಿದ್ದಾರೆ ಎನ್ನುವ ಪೋಸ್ಟ್​ ಸದ್ದು ಮಾಡುತ್ತಿದೆ!

ತಮ್ಮ ಮಗ ಕ್ಲಿಕ್​ ಆಗಬೇಕು ಎಂದರೆ ರಚಿತಾ ರಾಮ್​ ನಾಯಕಿಯಾಗಬೇಕು ಎಂದು ಡಾಗ್​ ಸತೀಶ್​ ಹೇಳಿದ್ದಾರಂತೆ. ಅದಕ್ಕಾಗಿಯೇ ಚಿತ್ರತಂಡ ರಚಿತಾ ಅವರಿಗೆ ಒಂದು ಕೋಟಿ ರೂಪಾಯಿ ಆಫರ್​ ಕೊಟ್ಟು ಬುಕಿಂಗ್​ ಮಾಡಿಕೊಂಡಿದೆಯಂತೆ ಎನ್ನುವ ಬಿಸಿಬಿಸಿ ಸುದ್ದಿ ಹರಿದಾಡುತ್ತಿದೆ.

ಅಷ್ಟಕ್ಕೂ ಇದು ಫೇಕ್​ ಸುದ್ದಿ ಎಂದೇ ಹಲವರು ಹೇಳುತ್ತಿದ್ದಾರೆ. ಈ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಬಂದಿಲ್ಲ. ಡಾಗ್​ ಸತೀಶ್​ ಅವರೂ ಹೇಳಿದ್ದಾರೋ ಗೊತ್ತಿಲ್ಲ. ಬಹುಶಃ ಇಂಥ ವಿಷ್ಯ ಸೋಷಿಯಲ್​ ಮೀಡಿಯಾದಲ್ಲಿ ಓಡಾಡ್ತಿದೆ ಎಂದು ತಿಳಿದರೆ ಅವರು ಹೇಳಿದರೂ ಹೇಳಬಹುದು, ಅಚ್ಚರಿಯೇನಿಲ್ಲ.

Source link

Leave a Reply

Your email address will not be published. Required fields are marked *