ಬೆಂಗಳೂರು, (ಮಾರ್ಚ್ 01): ಶಾಲಾ ವಸತಿ ಮಾಲೀಕರ ಮೇಲೆ ದೌರ್ಜನ್ಯ (ದೈಹಿಕ ಕಿರುಕುಳ) ಎಸಗಿ ಇದೀಗ ಜೈಲುಪಾಲಾದ ಘಟನೆ ಬೆಂಗಳೂರು ಗ್ರಾಮಾಂತರ (ಬೆಂಗಳೂರು ಗ್ರಾಮಾಂತರ) ಜಿಲ್ಲೆ ದೇವನಹಳ್ಳಿ (ದೇವನಹಳ್ಳಿ) ಪಟ್ಟಣದಲ್ಲಿ ನಡೆದಿದೆ. ಖಾಸಗಿ ವಸತಿ ಶಾಲೆ ಮಾಲೀಕ ಧನ್ಯ ಎಂಬಾತ, ಮಕ್ಕಳ ಮೇಲೆ ದೌರ್ಜನ್ಯ ಎಸಗಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಪೋಷಕರನ್ನು ಭೇಟಿ ಮಾಡದಂತೆ ಮಕ್ಕಳನ್ನು 15 ದಿನಗಳ ಕಾಲ ಶಾಲೆಯಲ್ಲಿ ವಸತಿ ಕೂಡಿ ಹಾಕಿದ್ದಾನೆ. ಇನ್ನು ಗಂಡನ ನೀಚ ಕೃತ್ಯವನ್ನು ಮುಚ್ಚಿ ಹಾಕಲು ಪತ್ನಿ ಶೈಲಜಾ ಸಹ ಬಾಲಕಿಗೆ ನಿತ್ಯ ಪರಂಗಿ ಹಣವನ್ನು ತಿನ್ನಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಕ್ಕಳಿಗೆ ಪರೀಕ್ಷೆ ನೆಪದಲ್ಲಿ ಪೋಷಕರನ್ನ ಬೇಟಿ ಮಾಡಲು ಫೋನ್ ನಲ್ಲಿ ಮಾತನಾಡಲು ಬಿಡದೆ ಕೂಡಿ ಹಾಕಿದ್ದಾರೆ. ಜೊತೆಗೆ ನಡೆದ ವಿಚಾರ ಯಾರಿಗೂ ಹೇಳದಂತೆ ಆರೋಫಿಗಳಾದ ಧನಂಜಯ್ ಹಾಗೂ ಅವನ ಪತ್ನಿ ಶೈಲಜಾ ಬಾಲಕಿಗೆ ಪರಂಗಿ ಹಣನ್ನ ನಿತ್ಯ ತಿನ್ನಿಸಿ ಕಿರುಕುಳ ಹೇಳಿದ್ದಾರೆ. ಈ 15 ದಿನಗಳ ಕಾಲ ಕಿರಕುಳವನ್ನೆಲ್ಲ ಸಹಿಸಿಕೊಂಡಿದ್ದ ಮಕ್ಕಳು ನಿನ್ನೆ (ಫೆಬ್ರವರಿ 28) ಶಿಕ್ಷಕರೊಬ್ಬರ ಫೋನ್ ನಿಂದ ಪೋಷಕರಿಗೆ ಕರೆ ಮಾಡಿ ತಮ್ಮ ಮೇಲಾದ ದೌರ್ಜನ್ಯವನ್ನು ಹೇಳಿದ್ದಾರೆ. ಕೂಡಲೇ ಸಹ ಶಾಲೆಗೆ ದೌಡಾಯಿಸಿ ವಿಚಾರಿಸಿದಾಗ ಮಕ್ಕಳು ಹೇಳಿದ ಮಾತನ್ನು ಕೇಳಿ ಶಾಕ್ ಆಗಿದ್ದಾರೆ. ಬಳಿಕ ಆರೋಪಿ, ಅಪರಾಧಿ ಆರೋಪಿ ಧನಂಜಯ್ ಹಾಗೂ ಆತನ ಪತ್ನಿ ವಿರುದ್ಧ ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರಿನ ಅನ್ವಯ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಧನಂಜಯ್ ಹಾಗೂ ಪತ್ನಿ ಶೈಲಾಜಾಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ವಸತಿ ಶಾಲೆಯ ಬಾಲಕಿಯರಿಗೆ ಕಿರುಕುಳ; ಶಾಲೆ ನಡೆಸುತ್ತಿದ್ದ ದಂಪತಿ ಮೇಲೆ ಪೋಕ್ಸೋ ಕೇಸ್!
ವಾರ್ಡನ್ ರೂಮನಲ್ಲೇ ಕೃತ್ಯ
ಇನ್ನು ಮಕ್ಕಳ ಮೇಲೆ ದೌರ್ಜನ್ಯ ನಡೆದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಬೇಟಿ ನೀಡಿ ಪರಿಶೀಲನೆ. ಶಾಲೆಯಲ್ಲೇ ಮಾಲೀಕ ಧನಂಜಯ್ ವಾರ್ಡನ್ ರೂಮ್ ನಲ್ಲೇ ಮಂಚ ಎಲ್ಲಾ ಹಾಕಿ ಹೈಫೈ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ಅದೇ ಕೊಠಡಿಯಲ್ಲಿ ದೌರ್ಜನ್ಯ ಎಸಗಿದ್ದಾನೆ.
ಅನಧಿಕೃತ ಹಾಸ್ಟೆಲ್ ನಡೆಸುತ್ತಿದ್ದ
ಶಾಲೆಯಲ್ಲಿ ಬಾಲಕಿಯರ ವಸತಿ ಶಾಲೆ ನಡೆಸಲು ಯಾವುದೇ ಅನುಮತಿ ಪಡೆಯದ ಆರೋಪ ಕೇಳಿ ಬಂದಿದ್ದು ಅಕ್ರಮವಾಗಿ ಹಾಸ್ಟೆಲ್ ನಡೆಸುತ್ತಿರುವುದು ಸಹ ತನಿಖೆಯಲ್ಲಿ ಬಯಲಾಗಿದೆ. ಇನ್ನೂ ಇಷ್ಟೆಲ್ಲಾ ನಡೆಯುತ್ತಿದ್ದರೂ ಬಿಐಒ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೈಲೆಂಟ್ ಇದ್ದಿದ್ದು ಹಲವು ಅನುಮಾನಗಳಿಗೆ ಕಾರಣ. ಇನ್ನು ಈ ಬಗ್ಗೆ ಡಿಡಿಪಿಐ ಅವರನ್ನ ಕೇಳಿದರೆ ನಮ್ಮ ವ್ಯಾಪ್ತಿಗೆ ಬರಲ್ಲ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುತ್ತೆ ಎಂದು ಜಾರಿಕೊಂಡಿದ್ದಾರೆ.
ಈ ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡಿದ್ದರಿಂದ ಶಾಲೆಯ ಬಳಿ ಬಂದು ಮಾಲೀಕನ ಕೃತ್ಯವನ್ನು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ದೇವನಹಳ್ಳಿ, ದಂಪತಿಯನ್ನು ಪೋಕ್ಸೋ ಪ್ರಕರಣದಲ್ಲಿ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.