Headlines

ಖಮೇನಿ ಸಾವಿಗೆ ಇರಾನ್ ಪ್ರತೀಕಾರದ ಕಿಡಿ: ಇಸ್ರೇಲ್‌ನ ಬೀಟ್ ಶೆಮೇಶ್‌ ಮೇಲೆ ದಾಳಿಗೆ 8 ಬಲಿ | Iran Retaliates For Khameneis Death 8 Killed In Attack On Israels Beit Shemesh

ಖಮೇನಿ ಸಾವಿಗೆ ಇರಾನ್ ಪ್ರತೀಕಾರದ ಕಿಡಿ: ಇಸ್ರೇಲ್‌ನ ಬೀಟ್ ಶೆಮೇಶ್‌ ಮೇಲೆ ದಾಳಿಗೆ 8 ಬಲಿ | Iran Retaliates For Khameneis Death 8 Killed In Attack On Israels Beit Shemesh



ಖಮೇನಿ ಸಾವಿಗೆ ಇರಾನ್ ಪ್ರತೀಕಾರದ ಕಿಡಿ: ಇಸ್ರೇಲ್‌ನ ಬೀಟ್ ಶೆಮೇಶ್‌ ಮೇಲೆ ದಾಳಿಗೆ 8 ಬಲಿ | Iran Retaliates For Khameneis Death 8 Killed In Attack On Israels Beit Shemesh

ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಪ್ರತೀಕಾರವಾಗಿ ಇರಾನ್, ಇಸ್ರೇಲ್‌ನ ಬೀಟ್ ಶೆಮೆಶ್ ಮೇಲೆ ದಾಳಿ ನಡೆಸಿದ್ದು, ಹಲವರು ಸಾವನ್ನಪ್ಪಿದ್ದಾರೆ. ಇರಾನ್ ವಿರುದ್ಧ ದಾಳಿ ಮುಂದುವರಿಸುವುದಾಗಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದು, ವಿಶ್ವ ನಾಯಕರು ಶಾಂತಿಗಾಗಿ ಮನವಿ ಮಾಡಿದ್ದಾರೆ.

ಇರಾನ್ ಪ್ರತೀಕಾರದ ಕಿಡಿಗೆ ಇಸ್ರೇಲ್‌ನಲ್ಲಿ 8 ಸಾವು

ಇಸ್ರೇಲ್ ಹಾಗೂ ಅಮೆರಿಕಾ ಜಂಟಿಯಾಗಿ ನಡೆಸಿದ ಇರಾನ್ ಮೇಲೆ ದಾಳಿ ನಡೆಸಿ ಅಲ್ಲಿನ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಇರಾನ್ ತೀವ್ರ ಆಕ್ರೋಶಗೊಂಡಿದೆ. ತನ್ನ ಮೇಲೆ ದಾಳಿ ಮಾಡಿದವರ ಮೇಲೆ ದಾಳಿ ಮಾಡಬೇಕಾದ ಇರಾನ್, ಬೇರೆ ದೇಶಗಳ ಹಡಗುಗಳ ಮೇಲೆ, ಸುಮ್ಮನಿದ್ದ ಯುಎಇಯ ಪ್ರದೇಶಗಳಾದ ದುಬೈ, ದೋಹಾ, ಬಹ್ರೈನ್ ಮೇಲೆ ದಾಳಿ ನಡೆಸಿರುವುದು ಗೊತ್ತೇ ಇದೆ. ಈ ದಾಳಿಯಿಂದ ಆಕ್ರೋಶಗೊಂಡ ಯುಎಇ, ಯುದ್ಧವನ್ನು ನಿಮ್ಮ ನೆರೆಹೊರೆಯವರ ಜೊತೆಗಲ್ಲ ಮಾಡೋದು ಎಂದು ಎಚ್ಚರಿಕೆ ನೀಡಿತ್ತು. ಈ ನಡುವೆ ಈಗ ಇರಾನ್ ಇಸ್ರೇಲ್‌ನ ಬೀಟ್ ಶೆಮೆಶ್‌ನ ಮೇಲೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರ ಇರಾನ್ ಪ್ರತೀಕಾರದ ಪ್ರತಿಜ್ಞೆ ಮಾಡಿದ ನಂತರ ಈ ಘಟನೆ ನಡೆದಿದೆ.

ಬೀಟ್ ಶೆಮೇಶ್ ಮಧ್ಯ ಇಸ್ರೇಲ್‌ನಲ್ಲಿರುವ ಒಂದು ನಗರವಾಗಿದ್ದು, ಇದು ಜೆರುಸಲೆಮ್‌ನ ಪಶ್ಚಿಮದಿಂದ 30 ಕಿ.ಮೀ ಅಥವಾ 19 ಮೈಲು ದೂರದಲ್ಲಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಇಸ್ರೇಲ್‌ನ ವೈದ್ಯಕೀಯ ತುರ್ತು ತಂಡಗಳು ಸ್ಥಳಕ್ಕೆ ಆಗಮಿಸಿವೆ. ಗಾಯಾಳುಗಳನ್ನು ಸ್ಥಳದಿಂದ ತೆರವುಗೊಳಿಸಿ ರಕ್ಷಿಸಲು ಹೆಲಿಕಾಪ್ಟರ್ ಅನ್ನು ಸಹ ಕರೆಸಲಾಗಿದೆ ಎಂದು ವರದಿಯಾಗಿದೆ. ಬೀಟ್ ಶೆಮೆಶ್ ಮೇಲೆ ನಡೆದ ನೇರ ದಾಳಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್‌ನ ರಾಷ್ಟ್ರೀಯ ತುರ್ತು ವೈದ್ಯಕೀಯ ಘಟಕ ಮ್ಯಾಗೆನ್ ಡೇವಿಡ್ ಅಡೋಮ್‌ನ ವಕ್ತಾರ ಜಾಕಿ ಹೆಲ್ಲರ್ ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕಾ ಇಸ್ರೇಲ್ ವಿರುದ್ಧ ಪ್ರತೀಕಾರಕ್ಕೆ ತನ್ನ ಪ್ರದೇಶದ ಮೇಲೆ ದಾಳಿ ಮಾಡಿದ ಇರಾನ್‌ಗೆ ಯುಎಇ ಹೇಳಿದ್ದೇನು?

ಖಮೇನಿ ಹತ್ಯೆಯ ನಂತರ ಇರಾನ್ ಬಲವಾದ ಪ್ರತೀಕಾರದ ಎಚ್ಚರಿಕೆ ನೀಡಿದ ನಂತರ ಇಲ್ಲಿ ಕ್ಷಿಪಣಿ ದಾಳಿಗಳು ನಡೆದಿವೆ. ಇರಾನ್ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದು, ಈ ಪ್ರದೇಶದಲ್ಲಿ ವಾಷಿಂಗ್ಟನ್ ಮತ್ತು ಟೆಲ್ ಅವಿವ್‌ಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ಮಾಡುವುದನ್ನು ಮುಂದುವರಿಸುವುದಾಗಿ ಎಚ್ಚರಿಸಿದೆ.

ಇಸ್ರೇಲ್ ದಾಳಿ ಮುಂದುವರಿಸಲಿದೆ ಎಂದ ನೆತನ್ಯಾಹು

ಈ ನಡುವೆ ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರು ತಮ್ಮ ದೇಶವು ಇರಾನ್ ವಿರುದ್ಧ ದಾಳಿಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಕಳೆದ 47 ವರ್ಷಗಳಿಂದ ಇಸ್ರೇಲ್‌ಗೆ ಸಾವು ಮತ್ತು ಅಮೆರಿಕಕ್ಕೆ ಸಾವು ಎಂದು ಅವರು ಕರೆ ನೀಡುತ್ತಿದ್ದಾರೆ ಎಂದ ಇಸ್ರೇಲ್ ಅಧ್ಯಕ್ಷರು, ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಆಡಳಿತ ಬದಲಾವಣೆಯಾಗಬೇಕು ಎಂದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇರಾನ್ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುವುದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.

ಇರಾನ್ ಇಂದು ತುಂಬಾ ಬಲವಾಗಿ ಹೊಡೆಯಲಿದೆ ಎಂದು ಹೇಳಿದೆ. ಅವರು ಹಿಂದೆಂದೂ ಹೊಡೆದಿಲ್ಲದಷ್ಟು ಬಲವಾಗಿ. ಅವರು ಹಾಗೆ ಮಾಡದಿರುವುದು ಉತ್ತಮ, ಏಕೆಂದರೆ ಅವರು ಹಾಗೆ ಮಾಡಿದರೆ, ನಾವು ಹಿಂದೆಂದೂ ನೋಡಿರದ ಬಲದಿಂದ ಅವರನ್ನು ಹೊಡೆಯುತ್ತೇವೆ! ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕೆ ಧನ್ಯವಾದಗಳು! ಎಂದು ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಇರಾನ್ ಮೇಲೆ ದಾಳಿ ವಿರೋಧಿಸಿ ಅಮೆರಿಕಾದ ದೂತವಾಸದ ಮುಂದೆ ಪ್ರತಿಭಟನೆ ಮಾಡ್ತಿದ್ದವರ ಮೇಲೆ ಗುಂಡಿನ ದಾಳಿ: 10 ಬಲಿ

ಈ ನಡುವೆ ವಿಶ್ವ ನಾಯಕರು ಶಾಂತಿಗೆ ಕರೆ ನೀಡಿದ್ದಾರೆ. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ. ಶನಿವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ, ವಿಶ್ವಸಂಸ್ಥೆಯ ಮುಖ್ಯಸ್ಥರು ಮತ್ತು ಅನೇಕ ದೇಶಗಳು ದಾಳಿಗಳನ್ನು ನಿಲ್ಲಿಸಲು ಮತ್ತು ಸಂಘರ್ಷವು ಪ್ರದೇಶ ಮತ್ತು ಅದರಾಚೆಗೆ ವಿಸ್ತರಿಸುವುದನ್ನು ತಡೆಯಲು ಮಾತುಕತೆಗಳಿಗೆ ಮರಳಲು ಒತ್ತಾಯಿಸಿದರು. ಸಂಘರ್ಷ ಉಲ್ಬಣಗೊಳ್ಳುವುದನ್ನು ತಡೆಯಲು ಎಲ್ಲವನ್ನೂ ಮಾಡಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮಂಡಳಿಗೆ ತಿಳಿಸಿದರು.



Source link

Leave a Reply

Your email address will not be published. Required fields are marked *