ಟೆಹ್ರಾನ್, (ಮಾರ್ಚ್ 01): ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ (ಯುಎಸ್-ಇಸ್ರೇಲ್ ಇರಾನ್ ಮೇಲೆ ಮುಷ್ಕರ)ಇರಾನ್ ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಈ ಬೆನ್ನಲ್ಲೇ ಪ್ರಾಚ್ಯದಲ್ಲಿ ಯುದ್ದ ಆರಂಭವಾಗಿದ್ದು, ಈ ನಡುವೆ ಇರಾನ್, ಅಲಿ ಖಮೇನಿ (ಅಲಿ ಖಮೇನಿ) ಸ್ಥಾನಕ್ಕೆ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ (ಅಯತೊಲ್ಲಾ ಅರಾಫಿ) ಅವರನ್ನ ಮಧ್ಯಂತರ ಪರಮೋಚ್ಛ ನಾಯಕ ಎಂದು ಘೋಷಣೆ ಮಾಡಿದೆ. ಇರಾನ್ನ ಗಾರ್ಡಿಯನ್ ಕೌನ್ಸಿಲ್ ಸದಸ್ಯರಾಗಿರುವ ಅಲಿರೆಜಾ ಅರಾಫಿ, ಆಯತೊಲ್ಲಾ ಅಲಿ ಖಮನೈಗೆ ಆಪ್ತರಾಗಿದ್ದಾರೆ.
ಇರಾನ್ನ ಸಂವಿಧಾನಿಕ ಪ್ರಕ್ರಿಯೆಯ ಅಡಿಯಲ್ಲಿ ಆಯ್ಕೆ ಮಾಡಿ ಅವರಿಗೆ ಈ ಇರಾನ್ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲು ತಾತ್ಕಾಲಿಕ ನ್ಯಾಯಮಂಡಳಿಯನ್ನು ನೇಮಿಸಿದೆ, ಇದರ ಮುಖ್ಯ ನ್ಯಾಯ ನಿಯಂತ್ರಕ ಸದಸ್ಯರಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ಕಾರ್ಯನಿರ್ವಹಿಸಲಿದ್ದಾರೆ. ಅಧ್ಯಕ್ಷ ಮಸೌದ್ ಪೆಜೇಶ್ಕಿಯಾನ್ ಮತ್ತು ಮುಖ್ಯ ನ್ಯಾಯಮೂರ್ತಿ ಘೋಲಮ್ಹೊಸೇನ್ ಮೊಹ್ಸೆನಿ ಎಜೆಯ್ ಸಹ ಮಂಡಳಿಯಲ್ಲಿದ್ದಾರೆ. ಜೊತೆಗೆ, ಇವರು ಇರಾನ್ ನ ಮುಂದಿನ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವ ಕಾರ್ಯ ನಿರ್ವಹಿಸಲಿದ್ದಾರೆ. ಈ ಮೂಲಕ ಇಲ್ಲಿಯವರೆಗೂ ಇರಾನ್ನಲ್ಲಿ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕನ್ನು ಅಲಿರೆಜಾ ವಹಿಸಿದ್ದಾರೆ.
ಇದನ್ನೂ ಓದಿ: ಆಯತುಲ್ಲಾ ಖಮೇನಿ ಮೇಲೆ ದಾಳಿಗೆ ಶನಿವಾರ ಬೆಳಗಿನ ಸಮಯ ಆರಿಸಿದ್ದು ಯಾಕೆ? ಬೇರೆ ಇದ್ದ ಪ್ಲಾನ್ ಬದಲಾಗಿದ್ದು ಯಾಕೆ?
ಯಾರು ಈ ಮಧ್ಯಂತರ ಸುಪ್ರೀಂ ಲೀಡರ್ ಅಲಿರೆಜಾ?
ಖಮೇನಿ ಸಾವಿನ ಬಳಿಕ ತಕ್ಷಣವೇ ಮತ್ತೊಬ್ಬ ನಾಯಕನನ್ನು ಘೋಷಿಸಿದೆ. ಆದರೆ, ಇದಕ್ಕೂ ಮೊದಲೇ ತುರ್ತು ಪರಿಸ್ಥಿತಿಯಲ್ಲಿ ಇರಾನ್ ಸರ್ಕಾರವನ್ನು ಮುನ್ನಡೆಸುವ ಶಕ್ತಿ ಬೇಕು ಎಂದು ಮೊದಲೇ ಅರಿತಿದ್ದ ಖಮೇನಿ, ಗಾರ್ಡಿಯನ್ ಕೌನ್ಸಿಲ್ ಸದಸ್ಯರಾಗಿದ್ದ ತಮ್ಮ ಆಪ್ತರ ಅಲಿರೆಜಾ ಅವರನ್ನು ಆಯ್ಕೆ ಮಾಡಿದ ಸುದ್ದಿ ಹರಡುತ್ತಿದೆ. ಇದೀಗ ಖಮೇನಿ ಹತ್ಯೆ ಬೆನ್ನಲ್ಲೇ ಇರಾನ್ ನ ಮಧ್ಯಂತರ ಸುಪ್ರೀಂ ಲೀಡರ್ ಆಗಿ ಇರಾನ್ ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ ಅವರನ್ನು ಆಯ್ಕೆ ಮಾಡಲಾಗಿದೆ.
1959ರಲ್ಲಿ ಜನಿಸಿದ ಅಲಿರೆಜಾ ಅರಾಫಿ, ಇರಾನ್ನ ಧಾರ್ಮಿಕ ಸ್ಥಾಪನೆಯಲ್ಲಿ ಪ್ರಮುಖರಾಗಿದ್ದು, ಮಧ್ಯಂತರ ಸುಪ್ರೀಂ ಲೀಡರ್ ಆಗುವುದಕ್ಕೂ ಮುನ್ನ ಇರಾನ್ ಸರ್ಕಾರದಲ್ಲಿ ಇರಾನ್ನ ರಾಷ್ಟ್ರವ್ಯಾಪಿ ಇಸ್ಲಾಮಿಕ್ ಸೆಮಿನರಿ ವ್ಯವಸ್ಥೆಯ ನಿರ್ದೇಶಕರು, ಪ್ರಬಲ ಗಾರ್ಡಿಯನ್ ಕೌನ್ಸಿಲ್ನ ಪರಿಷತ್ತಿನ ಸದಸ್ಯರು ಮತ್ತು ಹಾಲಿ ಸಭೆಯ ಸದಸ್ಯರು ಹೀಗೆ ಏಕಕಾಲಕ್ಕೆ 3 ಅತ್ಯಂತ ಶಕ್ತಿಯುತ ಹುದ್ದೆಯಲ್ಲಿದ್ದರು.
ಕೋಮ್ನ ಸಾಂಪ್ರದಾಯಿಕ ಕ್ಲೆರಿಕಲ್ ರಚನೆಯಲ್ಲಿ ಸ್ವಲ್ಪ ಆಳವಾಗಿ ಹುದುಗಿದ್ದರೂ, ಅರಾಫಿ ವಿಭಿನ್ನವಾದ ಆಡಳಿತ ವ್ಯವಸ್ಥೆಯ ಒಳಗಿನವರನ್ನು ಪ್ರತಿನಿಧಿಸುತ್ತಾರೆ.ಇರಾನ್ನಲ್ಲಿ ಅರೇಬಿಕ್ ಮತ್ತು ಇಂಗ್ಲಿಷ್ ಎರಡರಲ್ಲೂ ನಿರರ್ಗಳವಾಗಿ ಮಾತನಾಡುವ ಬಹುಭಾಷಾ ಪಂಡಿತರಾಗಿದ್ದರೆ, ತಾಂತ್ರಿಕವಾಗಿಯೂ ಸಹ ಪ್ರಾವಿಣ್ಯತೆಯನ್ನು ತೋರಿಸುತ್ತದೆ. ಜೊತೆಗೆ, ಜಾಗತಿಕವಾಗಿ ತನ್ನ ಸೈದ್ಧಾಂತಿಕ ಸಂದೇಶವನ್ನು ಹರಡಲು ಆಡಳಿತವು ಕೃತಕ ಬುದ್ಧಿಮತ್ತೆಗೆ ಹೊಂದಿಕೊಳ್ಳುವ ಅಗತ್ಯತೆಯ ಬಗ್ಗೆಯೂ ಉತ್ತಮ ನಿಲುವನ್ನು ಹೊಂದಿದ್ದು, ಇರಾನ್ ನಲ್ಲಿ ಇವರನ್ನು ಹೆಚ್ಚು ವಿದ್ಯಾವಂತರೆಂದು ಕರೆಯಲಾಗುತ್ತದೆ.
ಇನ್ನು, ಉದ್ವಿಗ್ನತೆಯ ಸಮಯದಲ್ಲಿ ಅಲಿರೆಜಾ ಅರಾಫಿಯನ್ನ ಮಧ್ಯಂತರದಲ್ಲಿ ಸುಪ್ರೀಂ ನಾಯ ಸುಂದರವಾಗಿ ಆಯ್ಕೆ ಮಾಡಿರುವುದು ಸೈದ್ದಾಂತಿಕವಾಗಿ ಸಂಕೇತದಂತಿದೆ. ಈ ಹಿಂದೆ ಇರಾನ್ ನ ಇಸ್ಲಾಮಿಕ್ ಗಣರಾಜ್ಯದ ಸಿದ್ಧಾಂತವನ್ನು ವಿದೇಶಗಳಿಗೆ ರಫ್ತು ಮಾಡಲು ಮೀಸಲಾದ ಬೃಹತ್ ಧಾರ್ಮಿಕ ಕೇಂದ್ರವಾದ ಅಲ್-ಮುಸ್ತಫಾ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
ಸದ್ಯ ಅಮೆರಿಕ-ಇಸ್ರೇಲ್ ಜಂಟಿಯಾಗಿ ತಮ್ಮ ರಾಷ್ಟ್ರದ ಮೇಲೆ ಯುದ್ದ ಸಾರಿದ್ದು, ಇದನ್ನು ಹೇಗೆ ನಿಭಾಯಿಸುತ್ತಾರೆ? ಯುದ್ಧದಿಂದ ತಮ್ಮ ದೇಶವನ್ನು ರಕ್ಷಿಸುವ ಸವಾಲು ಈ ಹೊಸ ಸುಪ್ರೀಂ ಲೀಡರ್ ಅಲಿರೆಜಾ ಮೇಲಿದೆ.
ಹೆಚ್ಚಿನ ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 8:23 pm, ಭಾನುವಾರ, 1 ಮಾರ್ಚ್ 26