IND vs WI ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತಕ್ಕೆ 196 ರನ್ ಟಾರ್ಗೆಟ್, ಕೋಲ್ಕತಾ ಚೇಸ್ ರೆಕಾರ್ಡ್ ಏನು? | West Indies Set 196 Runs Target To India In Crucial Match T20 World Cup Kolkata

ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತಕ್ಕೆ 196 ರನ್ ಟಾರ್ಗೆಟ್, ಕೋಲ್ಕತಾ ಚೇಸ್ ರೆಕಾರ್ಡ್ ಏನು? ಈ ಪಂದ್ಯ ಗೆದ್ದ ತಂಡ ಸೆಮಿಫೈನಲ್ ಎಂಟ್ರಿಕೊಡಲಿದೆ. ಈ ಟಾರ್ಗೆಟ್ ಭಾರತ ಚೇಸ್ ಮಾಡುತ್ತಾ? 

ಕೋಲ್ಕತಾ (ಮಾ.01) ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ಪಂದ್ಯ ಅಕ್ಷರಶಃ ಕ್ವಾರ್ಟರ್‌ಫೈನಲ್. ಈ ಮಹತ್ವದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 196 ರನ್ ಟಾರ್ಗೆಟ್ ನೀಡಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪ್ರವೇಶ ಮಾಡಲು ಈ ಪಂದ್ಯ ಗೆಲ್ಲಲೇಬೇಕು. ಪಂದ್ಯ ಗೆದ್ದ ತಂಡ ಸೆಮಿಫೈನಲ್ ಪ್ರವೇಶ ಮಾಡಲಿದೆ. ವೆಸ್ಟ್ ಇಂಡೀಸ್ 4 ವಿಕೆಟ್ ನಷ್ಟಕ್ಕೆ 195 ರನ್ ಸಿಡಿಸಿದೆ.

ಕೋಲ್ಕತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿನ ಕೆಲ ಅಂಕಿ ಅಂಶಗಳು ಪಂದ್ಯದ ರೋಚಕತೆ ಮತ್ತಷ್ಟು ಹೆಚ್ಚಿಸಲಿದೆ. ಕೋಲ್ಕತಾ ಮೈದಾನದಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 155 ರನ್. ಆದರೆ ಇದೀಗ ವೆಸ್ಟ್ ಇಂಡೀಸ್ ಇದೀಗ 195 ರನ್ ಸಿಡಿಸಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯದಲ್ಲಿ ಕೋಲ್ಕತಾದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 9 ಬಾರಿ ಗೆಲುವು ದಾಖಲಿಸಿದ್ದರೆ, ಚೇಸಿಂಗ್ ಮಾಡಿದ ತಂಡ 8 ಬಾರಿ ಗೆಲುವು ದಾಖಲಿಸಿದೆ. ಇಲ್ಲೂ ಕೂಡ ಅಂಕಿ ಅಂಶಗಳು ವೆಸ್ಟ್ ಇಂಡೀಸ್ ಪರವಾಗಿದೆ. ಕೋಲ್ಕತಾ ಮೈದಾನದಲ್ಲಿ ಹಲವು ಬಾರಿ 200 ರನ್ ಸ್ಕೋರ್ ಮಾಡಲಾಗಿದೆ. ಈ ವೇಳೆ ಚೇಸಿಂಗ್ ತಂಡ ಗೆದ್ದ ಉದಾಹರಣೆಯೂ ಇದೆ. ಹೀಗಾಗಿ ಇಂದಿನ ಪಂದ್ಯ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

195 ರನ್ ಅಬ್ಬರ

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಶೈ ಹೋಪ್ 32 ರನ್ ಸಿಡಿಸಿದರೆ, ರೋಸ್ಟನ್ ಚೇಸ್ 40 ರನ್ ಸಿಡಿಸಿದ್ದಾರೆ. ಶಿಮ್ರೊನ್ ಹೆಟ್ಮೆಯರ್ 27 ರನ್ ಕಾಣಿಕೆ ನೀಡಿದ್ದಾರೆ. ರೊವ್ಮಾನ್ ಪೊವೆಲ್ ಅಜೇಯ 34 ಹಾಗೂ ಜೇಸನ್ ಹೋಲ್ಡರ್ ಅಜೇಯ 37 ರನ್ ಸಿಡಿಸಿದರು.

Source link

Leave a Reply

Your email address will not be published. Required fields are marked *