ಟೆಹ್ರಾನ್, (ಮಾರ್ಚ್ 01): ಅಮೆರಿಕ ಮತ್ತು ಇಸ್ರೇಲ್ (ಇಸ್ರೇಲಿ-ಯುಎಸ್ ಮುಷ್ಕರ) ಕೊನೆಗೂ ತಮ್ಮ ಗುರಿ ಸಾಧಿಸಿದೆ. ತಮ್ಮ ದೀರ್ಘಕಾಲದ ಶತ್ರುವಿನ ನೆತ್ತರು ಹೀರಿದೆ. ಖಮನೈ ಅಮೆರಿಕದ ಕೆಂಗಣ್ಣಿಗೆ ಅದ್ಯಾವ ಮಟ್ಟಿಗೆ ಗುರಿಯಾಗಿದೆ ಅಂದ್ರೆ, ಇಡೀ ಮಧ್ಯಪ್ರಾಚ್ಯದ ಎಲ್ಲಾ ಅರಬ್ ದೇಶಗಳು ಅಮೆರಿಕ, ಇಸ್ರೇಲ್‌ಗೆ ಬೆಂಬಲವಾಗಿ ನಿಂತಿವೆ. ಆದರೆ ಇರಾನ್ ದೇಶವೊಂದೇ ಏಕಾಂಗಿಯಾಗಿ ಅಮೆರಿಕಕ್ಕೆ ಸೆಡ್ಡು ಹೊಡೆದಿತ್ತು. ಅಣು ಬಾಂಬ್ ವಿಚಾರವಾಗಿ ಶುರುವಾದ ಅಮೆರಿಕ-ಖಮನೈ ತಿಕ್ಕಾಟ ಯುದ್ಧದ ಕಾರ್ಮೋಡ ಸೃಷ್ಟಿಸಿತ್ತು. ಯಾವುದೇ ಕಾರಣಕ್ಕೂ ಅಮೆರಿಕದ ಗೊಡ್ಡು ಬೆದರಿಕೆಗಳಿಗೆ ಬೆದರೋ ಮಾತೇ ಇಲ್ಲ ಎಂದು ಸೆಡ್ಡು ಹೊಡೆದು ನಿಂತಿದ್ದ ಖಮನೈ ಕಥೆಯನ್ನೇ ಮುಗಿಸಿದೆ. ಇದರ ಬೆನ್ನಲ್ಲೇ ಇಸ್ರೇಲ್, ಅಮೆರಿಕ ದಾಳಿಯಲ್ಲಿ ಇರಾನ್ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಸಹ ಸಾವನ್ನಿದ್ದಾರೆ ಎಂದು ಸೂಚಿಸಿದ್ದಾರೆ. 2005ರಿಂದ 2013ರವರೆಗೆ ಇರಾನ್ ಅಧ್ಯಕ್ಷ. ಟೆಹರಾನ್ ಹೊರವಲಯದ ನರ್ಮಕ್ ಬಳಿ ಇರುವ ಮಹಮೂದ್ ಅಹ್ಮದಿನೆಜಾದ್ ಅವರ ನಿವಾಸದ ಮೇಲೆ ಕ್ಷೀಪಣಿ ದಾಳಿ ನಡೆಸಲಾಗಿದೆ, ಇದರಲ್ಲಿ ಮಹಮೂದ್ ಅಹ್ಮದಿನೆಜಾದ್ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.