ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಸೂಪರ್ 8 ಸುತ್ತಿನ ಪಂದ್ಯ ರಣರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಮೊದಲೇ ಹೇಳಿದಂತೆ ಈ ಆಟದ ಗೆದ್ದ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಸಿಗುತ್ತಿತ್ತು. ಹೀಗಾಗಿ ಎರಡು ತಂಡಗಳು ಗೆಲುವಿಗಾಗಿ ರಣತಂತ್ರವನ್ನೇ ಹೆಣೆದಿದ್ದವು. ಆದರೆ ಕೆಚ್ಚೆದೆಯ ಆಟವನ್ನಾಡಿದ ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದು ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು. ಟೀಂ ಇಂಡಿಯಾದ ಈ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್ ಎಂದರೆ ತಪ್ಪಾಗಲಾರದು. ಆರಂಭಿಕ ಕಣಕ್ಕಿಳಿದಿದ್ದ ಸಂಜು ತಂಡದ ಪರ ಏಕಾಂಗಿ ಹೋರಾಟಕ್ಕಾಗಿ. ಸಂಜು ಅವರ ಈ ಸ್ಮರಣೀಯ ಇನ್ನಿಂಗ್ಸ್ ನಿಂದಾಗಿ ವಿಂಡೀಸ್ ನೀಡಿದ 195 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಐತಿಹಾಸಿಕ ಜಯ ಸಾಧಿಸಿತು.