
ಈ ದಿನ ಮುಖ್ಯವಾದ ಕೆಲಸ ಮಾಡುತ್ತಾ ಇದ್ದೀರಿ ಅಂತಾ ಇಷ್ಟದೈವ ಅಥವಾ ಕುಲದೈವವನ್ನು ಸ್ಮರಿಸುವುದರಿಂದ ದಿನವಿಡೀ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳು ಮೂಡುತ್ತವೆ. ಸಾಫಲ್ಯ ಕಾಣುತ್ತೀರಿ.
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಸಂಗಾತಿಯ ಹಠಮಾರಿತನದ ಕಾರಣಕ್ಕೆ ನಾಲ್ಕು ಜನರ ಮಧ್ಯೆ ನಿಮಗೆ ಅವಮಾನ ಆಗುವ ಸಾಧ್ಯತೆಗಳಿವೆ. ಈಚೆಗಷ್ಟೇ ಮನೆ ಕಟ್ಟಿದೆ ಅಥವಾ ರಿನೋವೇಶನ್ ಮಾಡಿಸಿದ್ದೇನೆ, ಆಯಸ್ಸು ಹಣಕಾಸಿನ ವಿಚಾರಕ್ಕೆ ಬಹಳ ಒತ್ತಡದಲ್ಲಿ ಇದ್ದೀರಿ ಅಂತಾ ಅದರಿಂದ ಹೊರಬರುವಂಥ ಮಾರ್ಗ, ಉಪಾಯಗಳು ಗೋಚರವಾಗಲಿವೆ. ಸ್ವಂತ ವ್ಯಾಪಾರ, ಉದ್ಯಮ ಹೊಂದಿರುವವರಿಗೆ ವಿಸ್ತರಣೆಯ ಅವಕಾಶಗಳು ದೊರೆಯಲಿವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ನಿಮ್ಮಲ್ಲಿ ಕೆಲವು ಬ್ಯಾಂಕ್ಗಳಲ್ಲಿ ಸಾಲಕ್ಕೆ ಪ್ರಯತ್ನ ಪಡಲಾಗಿದೆ. ಇನ್ನು ನಿಮ್ಮ ಹಣವನ್ನು ಅಥವಾ ಸ್ನೇಹಿತರ ಹಣಕಾಸಿನ ನೆರವನ್ನು ತಾತ್ಕಾಲಿಕವಾಗಿ ನೀಡಬಹುದು. ನೀವು ಮರೆತೇ ಹೋದಂತಹ ಅವಕಾಶವೊಂದು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ. ಅದನ್ನು ಒಪ್ಪಿಕೊಳ್ಳಬೇಕೋ ಅಥವಾ ಬೇಡವೋ ಎಂಬ ಗೊಂದಲಗಳು ಏನಾದರೂ ಇದ್ದಲ್ಲಿ ಹಿರಿಯರು ಅಥವಾ ಅನುಭವಗಳ ಸಲಹೆಯನ್ನು ಪಡೆದುಕೊಳ್ಳಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಈ ದಿನ ಒಂದು ಬಗೆಯ ಸಂತೋಷ- ಸಮಾಧಾನದ ಜೊತೆಗೆ, ಈ ನಿರ್ಧಾರ ಹೇಗೆ ಮಾಡಬೇಕು ಎಂಬ ಗೊಂದಲ ಇರುವಂಥ ಸವಾಲು ನಿಮ್ಮ ಎದುರು ನಿಲ್ಲಲಿದೆ. ಈ ಸಮಯದಲ್ಲಿ ನಿಮಗೆ ದೊರೆಯುವ ಅವಕಾಶವೋ ಜವಾಬ್ದಾರಿಯೋ ಒಳ್ಳೆಯದಕ್ಕೋ ಅಥವಾ ಕೆಟ್ಟದ್ದಕ್ಕೋ ಎಂದು ನಿರ್ಧರಿಸುವುದಕ್ಕೆ ಬಹಳ ಸಮಯ.
ಲೇಖನ- ಸ್ವಾತಿ ಎನ್.ಕೆ.