
ಎಸ್ಆರ್ಎ ಮೈದಾನದಲ್ಲಿ ಸಿದ್ದು ಕೊಣ್ಣೂರ ನೇತೃತ್ವದಲ್ಲಿ ಮಹಿಳೆಯರಿಗಾಗಿ ‘ರಂಗ ಸಂಭ್ರಮ’ ಹೋಳಿಯಾಚರಣೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಷ್ಯಾದ ಖ್ಯಾತ ಡಿಜೆ ಮೀನಾ ಹಾಗೂ ಭಾರತದ ಇತರೆ ಕಲಾವಿದರು ಆಗಮಿಸಲಿದ್ದು, ಮಹಿಳೆಯರಿಗೆ ಪ್ರತ್ಯೇಕ ವೇದಿಕೆಯಲ್ಲಿ ಆಚರಣೆ ನಡೆಯಲಿದೆ.
ಬಾಗಲಕೋಟೆ: ಬನಹಟ್ಟಿಯ ಎಸ್ಆರ್ಎ ಮೈದಾನದಲ್ಲಿ ಮಹಿಳೆಯರಿಗಾಗಿ ಸಿದ್ದು ಕೊಣ್ಣೂರ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ 7 ಗಂಟೆಯಿಂದ ರಂಗ ಸಂಭ್ರಮ ಕಾರ್ಯಕ್ರಮ ನಡೆಸಲಾಗುವುದೆಂದು ಕವಿತಾ ಕೊಣ್ಣೂರ ತಿಳಿಸಿದರು.
ಅಂತಾರಾಷ್ಟ್ರಮಟ್ಟದ ಹೆಸರಾಂತ ಡಿಜೆ ಆಪರೇಟರ್ ರಷ್ಯಾದ ಮೀನಾ
ಬನಹಟ್ಟಿಯಲ್ಲಿ ರಂಗ ಸಂಭ್ರಮದ ಕುರಿತಾಗಿ ಮಾತನಾಡಿದ ಅವರು, ಅಂತಾರಾಷ್ಟ್ರಮಟ್ಟದ ಹೆಸರಾಂತ ಡಿಜೆ ಆಪರೇಟರ್ ರಷ್ಯಾದ ಮೀನಾ ಹಾಗೂ ಭಾರತದ ಆರಿಯಾ ಮತ್ತು ಅಕ್ಷಯ ಪ್ರಮುಖರಾಗಿ ಆಗಮಿಸಲಿದ್ದಾರೆ. ರಾಜ್ಯದ ಹೆಸರಾಂತ ಕಲಾ ತಂಡಗಳಾದ ಸಾಧನಾ ಹಾಗೂ ಸಮನ್ವಿ ನೇತೃತ್ವದ ತಂಡಗಳು ಕಾರ್ಯಕ್ರಮ ನೀಡಲಿದ್ದಾರೆ. ರಷ್ಯಾ ದೇಶದ ನರ್ತಕಿಯರ ಜೊತೆಗೆ ರಾಜ್ಯದ ಪ್ರಸಿದ್ಧ ಬೆಳ್ಳಿ ಡ್ಯಾನ್ಸ್ ಕಲಾವಿದರ ತಂಡ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದೆ ಎಂದು ತಿಳಿಸಿದರು.
ರಬಕವಿ-ಬನಹಟ್ಟಿ, ಜಮಖಂಡಿ ಹಾಗೂ ಮುಧೋಳ ತಾಲೂಕು ಸೇರಿದಂತೆ ವಿವಿಧೆಡೆಯಿಂದ ಆಗಮಿಸುವ ಸಾವಿರಾರು ಮಹಿಳೆಯರಿಗೆ ಬಣ್ಣದೋಕಳಿ ನಿಮಿತ್ತ ನಡೆಯುತ್ತಿರುವ ರಂಗ ಸಂಭ್ರಮಕ್ಕೆ ವಿಶೇಷ ಬಂದೋಬಸ್ತ್ನೊಂದಿಗೆ ಹೋಳಿ ಆಚರಣೆ ಕಾರ್ಯಕ್ರಮ ಯಾವುದೇ ಪಕ್ಷಬೇಧವಿಲ್ಲದೇ ಪುರುಷ ಹಾಗೂ ಮಹಿಳಾ ಪ್ರತ್ಯೇಕ ವಿಭಾಗದ ವೇದಿಕೆಯಲ್ಲಿ ಜರುಗಲಿದೆ ಎಂದರು.
ಡಾ.ದೀಪಾಲಿ ಡಂಗಿ, ಅಮ್ರತಾ ದೇಸಾಯಿ, ವಿದ್ಯಾ ಬಿಳ್ಳೂರ, ವಿಜಯಲಕ್ಷ್ಮೀ ಡೊಮನಾಳ, ಸವಿತಾ ಢವಳೇಶ್ವರ, ದಾನಮ್ಮ ಬಾಗಲಮನಿ, ರೇಣುಕಾ ಮಡ್ಡಿಮನಿ, ವಂದನಾ ಕದಂ, ಮಾಲಾ ಬಾವಲತ್ತಿ, ನೀಲಮ್ಮ ಉಳ್ಳಾಗಡ್ಡಿ, ಆಯೇಶಾ ಫಣಿಬಂದ, ಅನ್ನಪೂರ್ಣ ಪಾಟೀಲ, ಗೋದಾವರಿ ಕುಂಬಾರ, ಆಶಾ ಭೂತಿ, ಮಹಾನಂದ ಗುಣಕಿ, ಸುನಿತಾ ನಂದಗೊಂಡ, ಲಕ್ಕವ್ವ ಕರಿಗಾರ, ಶಿಲ್ಪಾ ಚರ್ಕಿ ಅನೇಕರಿದ್ದರು.