ಸರ್ ಎಂ ವಿಶ್ವೇಶ್ವರಯ್ಯ ಸ್ಟೇಷನ್ ಹೊರಬಾಗದ ನೋಟಚಿತ್ರದ ಕ್ರೆಡಿಟ್ ಮೂಲ: tv9
ಬೆಂಗಳೂರು, ಮಾರ್ಚ್ 2: ಬೈಯಪ್ಪನಹಳ್ಳಿ ಬಳಿಯ ಸರ್ ಎಂ ವಿಶ್ವೇಶ್ವರಯ್ಯ ಸ್ಟೇಷನ್ ನಲ್ಲಿ ಅಭಿವೃದ್ಧಿ ಕಾಮಗಾರಿಗಾಗಿ ಬರೋಬ್ಬರಿ 269 ಮರಗಳನ್ನು ಕಡಿಯಲು ಇಲಾಖೆ (ಭಾರತೀಯ ರೈಲ್ವೆ) ಮುಂದಾಗುತ್ತಿದೆ. ಇದಕ್ಕೆ ಪರಿಸರ ಹೋರಾಟಗಾರರಿಂದ ಆಕ್ಷೇಪವಿದೆ. ಬೈಯಪ್ಪನಹಳ್ಳಿಯಲ್ಲಿರುವ ಎಸ್ಎಂವಿಟಿ ನಿಲ್ದಾಣದಲ್ಲಿರುವ 269 ಮರಗಳು ಹತ್ತಾರು ವರ್ಷಗಳ ಹಳೆಯದ್ದಾಗಿವೆ. ಬೃಹತ್ ಮರಗಳಾಗಿದ್ದರೆ, ಯಾವುದೇ ಕಾರಣಕ್ಕೂ ಅವುಗಳನ್ನು ಕಡಿಯಬಾರದು ಎಂದು ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಮರಗಳನ್ನು ಕಡಿಯಲು ಮುಂದಾದರೆ ರೈಲು ನಿಲ್ದಾಣದ ಎದುರು ಬೃಹತ್ ಹೋರಾಟದ ಎಚ್ಚರಿಕೆ. ಆದರೆ, ಇಲಾಖೆಗಳನ್ನು ಮಾತ್ರ ಯಾವುದನ್ನೂ ಲೆಕ್ಕಿಸದೆ ಕಡಿಯಲು ಸಿದ್ದತೆ ಮಾಡಿಕೊಂಡಿದೆ.
ಕೋಚ್ಗಳ ತಪಾಸಣೆ ಮತ್ತು ನಿರ್ವಹಣೆಗಾಗಿ ಡಿಪೋ ನಿರ್ಮಾಣಕ್ಕೆ ಇಲಾಖೆ ಮುಂದಾಗಿದೆ. ಇಲಾಖೆ ಉದ್ದೇಶಿಸಿರುವ ಅದೇ ಜಾಗದಲ್ಲಿ 269 ಮರಗಳಿವೆ. ಹೀಗಾಗಿ ಆ ಮರಗಳನ್ನು ಕಡಿದು ಕಾಮಗಾರಿ ಮಾಡಲು ಇಲಾಖೆ ತೀರ್ಮಾನ ಮಾಡಿದೆ. ಇದಕ್ಕೆ ಈಗ ಸ್ಥಳೀಯರಿಂದಲೂ ಅಸಮಾಧಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣಕ್ಕೂ ತಟ್ಟಿದ ಇರಾನ್-ಇಸ್ರೇಲ್ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು, ಪ್ರಯಾಣಿಕರ ಪರದಾಟ
ಒಟ್ಟಿನಲ್ಲಿ, ಅಭಿವೃದ್ಧಿ ಅನ್ನೋ ಹೆಸರಿನಲ್ಲಿ ಕಡಿಯುತ್ತಾ ಹೋದರೆ ಗಾರ್ಡನ್ ಸಿಟಿ ಹೋಗಿ ಮರಗಳನ್ನು ಹಿಡಿದಿಡಲು ಜಂಗಲ್ ಆಗುವುದರಲ್ಲಿ ಅನುಮಾನವಿಲ್ಲ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ