ಸಾಮಾನ್ಯವಾಗಿ ಮನೆಯಲ್ಲಿ ಬಳಕೆ ಮಾಡುವ ಕುಕ್ಕರ್, ಟೀ-ಕಾಫಿ ಮಾಡಿದ ಪಾತ್ರೆ ಕತ್ತು ಹೋಗಿದ್ಯಾ? ತಳ ಸೀದು ಹೋಗಿದ್ಯಾ? ಜಿಡ್ಡು ಹೋಗ್ತಿಲ್ವಾ? ಇದಕ್ಕೆ ಸಿಂಪಲ್ ವಿಧಾನ ಇದೆ. ಹಾಗಾದರೆ ಏನು? ಏನೇನು ಹಾಕಬೇಕು? ಉಜ್ಜದೆ, ತಿಕ್ಕದೆ ಹೇಗೆ ತೊಳೆಯಬಹುದು?

ಕುಕ್ಕರ್ ಅಥವಾ ಕಾಫಿ, ಟೀ ಮಾಡಿದ ಪಾತ್ರೆಗಳು ಕೆಲವೊಮ್ಮೆ ಕತ್ತು ಹೋಗುತ್ತವೆ, ತಳ ಸೀದು ಹೋಗುತ್ತವೆ. ಆ ಜಿಡ್ಡು ಸಾಮಾನ್ಯವಾಗಿ ಹೋಗೋದಿಲ್ಲ, ಸ್ಕ್ರಬ್ಬರ್ ಬಳಕೆ ಮಾಡಿದಾಗಲೂ ಕೂಡ ಆ ಪಾತ್ರೆ ಹಾಳಾಗುವ ಸಾಧ್ಯತೆ ಹೆಚ್ಚಿದೆ.

ಕತ್ತು ಹೋದ ಅಥವಾ ತಳ ಸೀದ ಪಾತ್ರೆ ಅಥವಾ ಕುಕ್ಕರ್‌ಗೆ ಲಿಂಬೆಹಣ್ಣಿನ ಪೀಸ್, ಒಂದು ಚಮಚ ವಿನೆಗಾರ್, ಉಪ್ಪು, ಬೇಕಿಂಗ್ ಸೋಡಾ ಜೊತೆಗೆ ಡಿಶ್ ಲಿಕ್ವಿಡ್ ಹಾಕಿ ಇಡಬೇಕು ಅಥವಾ ಇದನ್ನು ಮತ್ತೆ ಒಲೆ ಮೇಲೆ ಇಟ್ಟು ಸ್ವಲ್ಪ ನೀರು ಹಾಕಿ ಕೊತ ಕೊತ ಕುದಿಯುವವರೆಗೆ ಕಾಯಿಸಬಹುದು. ಆಗ ಆ ಕಲೆಯೆಲ್ಲವೂ ಬಿಟ್ಟು ಹೋಗುವುದು.

ಈ ವಿಧಾನ ನಿಜಕ್ಕೂ ಸರಳವಾಗಿದೆ, ಹೀಗೆ ಮಾಡಿದರೆ ಖಂಡಿತ ಕೈ ನೋವು ಕೂಡ ಬರೋದಿಲ್ಲ. ಕೆಲವೊಮ್ಮೆ ಸ್ಕ್ರಬ್ಬರ್‌ಗಳಿಂದ ಉಜ್ಜಿ ಉಜ್ಜಿ ತೊಳೆದರೆ ಪಾತ್ರೆ ಮೇಲೆ ಗೆರೆ ಆಗುವುದು.

Source link
ಅದೊಂದು ಟಿಪ್ಸ್ ಫಾಲೋ ಮಾಡಿ, ತಳ ಸೀದು ಹೋದ ಕುಕ್ಕರ್, ಕಾಫಿ ಪಾತ್ರೆ ಕ್ಷಣಾರ್ಧದಲ್ಲೆ ಕ್ಲೀನ್ ಆಗುತ್ತೆ!