Headlines

25ರ ಹುಡುಗಿ ಶುಗರ್‌ಬೇಬಿ, 45ರ ಅಂಕಲ್ ಶುಗರ್‌ಡ್ಯಾಡಿ: ಬೆಂಗ್ಳೂರಿನ ವಿಲ್ಲಾ ಪಾರ್ಟಿಯ ರಹಸ್ಯ!

25ರ ಹುಡುಗಿ ಶುಗರ್‌ಬೇಬಿ, 45ರ ಅಂಕಲ್ ಶುಗರ್‌ಡ್ಯಾಡಿ: ಬೆಂಗ್ಳೂರಿನ ವಿಲ್ಲಾ ಪಾರ್ಟಿಯ ರಹಸ್ಯ!

25ರ ಹುಡುಗಿ ಶುಗರ್‌ಬೇಬಿ, 45ರ ಅಂಕಲ್ ಶುಗರ್‌ಡ್ಯಾಡಿ: ಬೆಂಗ್ಳೂರಿನ ವಿಲ್ಲಾ ಪಾರ್ಟಿಯ ರಹಸ್ಯ!

ಬೆಂಗಳೂರಿನ ಅಮೃತಹಳ್ಳಿ ಗ್ಯಾಂಗ್‌ರೇ*ಪ್ ಪ್ರಕರಣದಲ್ಲಿ ಆರೋಪಿ ನಿಖಿಲ್‌ನನ್ನು ಬಂಧಿಸಲಾಗಿದೆ. ‘ಶುಗರ್ ಡ್ಯಾಡಿ’ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಈತನಿಂದ ಯುವತಿಯರಿಗೆ ಬ್ಲ್ಯಾಕ್‌ಮೇಲ್ ನಡೆಯುತ್ತಿತ್ತು. ಇದೀಗ ಪೊಲೀಸರು ಪಾರ್ಟಿಯಲ್ಲಿ ಭಾಗವಹಿಸಿದ ಪ್ರಭಾವಿಗಳ ಪಟ್ಟಿಯನ್ನು ತನಿಖೆ ಮಾಡುತ್ತಿದ್ದಾರೆ.

ಬೆಂಗಳೂರಿನ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗ್ಯಾಂಗ್‌ರೇ* ಪ್ರಕರಣ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆರೋಪಿ ನಿಖಿಲ್ ಅರೆಸ್ಟ್ ಆಗ್ತಿದ್ದಂತೆ ವಿಲ್ಲಾ ಪಾರ್ಟಿಗೆ ಬರ್ತಿದ್ದ ಶುಗರ್ ಡ್ಯಾಡಿಗಳಿಗೆ ಆತಂಕ ಶುರುವಾಗಿದೆ. ತನಿಖಾಧಿಕಾರಿಗಳಿಗೆ ಶುಗರ್ ಡ್ಯಾಡಿಗಳ ಲಿಸ್ಟ್‌ ಪಡೆದು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ಇಡೀ ಪ್ರಕರಣದ ತನಿಖೆ ಬೆಂ.ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿಯೇ ನಡೆಯುತ್ತಿದೆ. ಶುಗರ್ ಬೇಬಿ ಮತ್ತು ಶುಗರ್ ಡ್ಯಾಡಿ ಎಂಬ ಕಲ್ಪನೆಯಲ್ಲಿ ಪಾರ್ಟಿ ಆಯೋಜನೆ ಮಾಡಲಾಗುತ್ತಿತ್ತು. 25 ವರ್ಷದೊಳಗಿನ ಯುವತಿಯರಿಗೆ ಶುಗರ್ ಬೇಬಿ ಮತ್ತು 45 ವರ್ಷ ಮೇಲ್ಪಟ್ಟ ಪುರುಷರಿಗೆ ಶುಗರ್ ಡ್ಯಾಡಿ ಎಂದು ಪಾಸ್‌ವರ್ಡ್ ನೀಡಲಾಗುತ್ತಿತ್ತು.

ನಿಖಿಲ್ ಆಯೋಜನೆ ಮಾಡುತ್ತಿದ್ದ ಪಾರ್ಟಿಗೆ ಹಲವು ಉದ್ಯಮಿಗಳು, ಪ್ರಭಾವಿಗಳು ಹಿರಿಯ ಅಧಿಕಾರಿಗಳು ಭಾಗಿಯಾಗ್ತಿದ್ರು ಎಂದು ಹೇಳಲಾಗುತ್ತಿದೆ. ಮೋಜು ಮಸ್ತಿ ಹಣಕ್ಕಾಗಿ ಕೆಲ ಯುವತಿಯರು ಶುಗರ್ ಡ್ಯಾಡಿ ಪಾರ್ಟಿಯಲ್ಲಿ ಭಾಗಿಯಾಗಿತ್ತಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಪಾರ್ಟಿಗೆ ಬರುತ್ತಿದ್ದ ಶುಗರ್ ಡ್ಯಾಡಿಗಳು ತಮ್ಮ ಹೆಸರು ಹೊರಗೆ ಬರುತ್ತೆ ಎಂದು ಆತಂಕಗೊಂಡಿದ್ದಾರೆ.

ಜಕ್ಕೂರಿನ ವಿಲ್ಲಾದಲ್ಲಿ ನಡೆಯುವ ಪಾರ್ಟಿಗೆ ಯುವತಿಯರನ್ನು ಕರೆದುಕೊಂಡು ಬರಲು ಯುವಕರಿಗೆ ನಿಖಿಲ್ ಹಣ ಕೊಡುತ್ತಿದ್ದನು. ಬೇರೆ ರಾಜ್ಯದ ಯುವತಿಯರನ್ನು ನಿಖಿಲ್ ಬೆಂಗಳೂರಿಗೆ ಕರೆಸಿಕೊಳ್ಳುತ್ತಿದ್ದನು. ಆಫ್ಟರ್ ಪಾರ್ಟಿಗೆ ಒಪ್ಪಿಕೊಳ್ಳುವ ಯುವತಿಯರಿಗೆ ಶಾಪಿಂಗ್ ಮಾಡಲು ಹಣ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ನಿಖಿಲ್ ಮಾಡುತ್ತಿದ್ದನು.

ಇದನ್ನೂ ಓದಿ: ಥಿಯೇಟರ್‌ಗೆ ಬಂದು ಸಿನಿಮಾ ನೋಡೋದು ಬಿಟ್ಟು ಉಳಿದಿದ್ದೆನ್ನೆಲ್ಲಾ ಮಾಡಿದ ಕಾರ್ನರ್ ಸೀಟ್ ಜೋಡಿ

ವಿಲ್ಲಾಗೆ ಬಂದು ಆಫ್ಟರ್ ಪಾರ್ಟಿಗೆ ಒಪ್ಪಿಕೊಳ್ಳದ ಯುವತಿಯರ ಪಾನೀಯದಲ್ಲಿ ನಶೆ ಪದಾರ್ಥ ಸೇರಿಸಿ ಅತ್ಯಾ*ಚಾರ ಮಾಡಿಸಿ ವಿಡಿಯೋ-ಫೋಟೋ ತೆಗೆದುಕೊಳ್ಳುತ್ತಿದ್ದನು. ನಂತರ ಫೋಟೋ-ವಿಡಿಯೋ ತೋರಿಸಿ ನಿಖಿಲ್ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳಲ್ಲಿಯೂ ನಿಖಿಲ್ ಪಾರ್ಟಿ ಅಯೋಜನೆ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಹೇಳುವಂತೆ ಬೆತ್ತಲೆಯಾಗಿ ಸ್ನಾನ ಮಾಡಬಾರದು ಏಕೆ? ಇಲ್ಲಿದೆ ಕಾರಣ

Source link

Leave a Reply

Your email address will not be published. Required fields are marked *