‘ಟಾಕ್ಸಿಕ್’ಗೆ ತಿರುಗೇಟು ಕೊಡಲು ಸರ್​​​ಪ್ರೈಸ್ ಶಾಕ್ ರೆಡಿ ಮಾಡಿದ ‘ಧುರಂಧರ್ 2’

‘ಟಾಕ್ಸಿಕ್’ಗೆ ತಿರುಗೇಟು ಕೊಡಲು ಸರ್​​​ಪ್ರೈಸ್ ಶಾಕ್ ರೆಡಿ ಮಾಡಿದ ‘ಧುರಂಧರ್ 2’


ಒಂದು ಸಿನಿಮಾ ಹಿಟ್ ಆಗಿ ಅದಕ್ಕೆ ಸೀಕ್ವೆಲ್ ಬರ್ತಿದೆ ಎಂದರೆ ಆ ಚಿತ್ರ ಹಿಟ್ ಆಗೋದು ಖಚಿತ ಎಂಬ ವಾತಾವರಣ ನಿರ್ಮಾಣವಾಗಿದೆ. ‘ಬಾಹುಬಲಿ 2’, ‘ಕೆಜಿಎಫ್ 2’, ‘ಪುಷ್ಪ 2’ ಚಿತ್ರಗಳ ಮೂಲಕ ಇದು ಸಾಬೀತಾಗಿದೆ. ಈಗ ಮಾರ್ಚ್ 19ಕ್ಕೆ ‘ಧುರಂಧರ 2’ (ಧುರಂಧರ 2) ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ, ಈ ಚಿತ್ರಕ್ಕೆ ಪ್ರಚಾರ ಆರಂಭ ಆಗಿಲ್ಲ. ಇದು ರಣವೀರ್ ಸಿಂಗ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಯಶ್ ಎದುರು ಬರಲು ಸಾಕಷ್ಟು ಸಿದ್ಧತೆ ಬೇಕು. ಆದರೆ, ಆ ಸಿದ್ಧತೆ ತಂಡದ ಕಡೆಯಿಂದ ಆಗುತ್ತಿಲ್ಲ ಎಂಬ ಕೊರಗು ಅಭಿಮಾನಿಗಳಿಗೆ ಇದೆ. ಹೀಗಿರುವಾಗಲೇ ಸಡನ್ ಶಾಕ್ ನೀಡಲು ‘ಧುರಂಧರ 2’ ತಂಡ ಪ್ಲ್ಯಾನ್ ಮಾಡಿದೆಯಂತೆ.

ಯಾವುದೇ ವಿಷಯವನ್ನು ಘೋಷಿಸಿ ರಿಲೀಸ್ ಮಾಡಿದರೆ ಅದಕ್ಕೆ ಹೈಪ್ ಸಿಗೋ ಸಾಧ್ಯತೆ ಕಡಿಮೆ. ಆದರೆ, ಯಾವುದೇ ಘೋಷಣೆ ಇಲ್ಲದೆ ಬಂದರೆ ಅದಕ್ಕೆ ಸಿಗೋ ಹೈಪ್ ಹೆಚ್ಚು. ಹೀಗಾಗಿ, ಹೋಳಿ ಹಬ್ಬದ ಪ್ರಯುಕ್ತ ಫೆಬ್ರವರಿ 3ರಂದು ‘ಧುರಂಧರ 2’ ಟ್ರೇಲರ್ ಲಾಂಚ್ ಮಾಡಲು ಪ್ಲ್ಯಾನ್ ರೂಪಿಸಲಾಗಿದೆ. ಈ ಮೂಲಕ ಹಲ್ಚಲ್ ಎಬ್ಬಿಸಲು ಯೋಜನೆ ರೆಡಿ ಆಗಿದೆ.

‘ಟಾಕ್ಸಿಕ್’ ತಂಡ ನಿರಂತರವಾಗಿ ಸಿನಿಮಾ ಪ್ರಚಾರ ಮಾಡುತ್ತಿದೆ. ದಿನಕ್ಕೊಂದು ಅಪ್ಡೇಟ್ ಕೊಡುವ ಮೂಲಕ ಕುತೂಹಲ ಮೂಡಿಸುತ್ತಿದೆ. ಆದರೆ, ‘ಧುರಂಧರ 2’ ಟೀಂ ಆ ರೀತಿ ಅಲ್ಲ. ಈ ಮೊದಲು ‘ಧುರಂದರ್ 2’ ತಂಡದವರು ಟೀಸರ್ ರಿಲೀಸ್ ಮಾಡಿದ್ದರು. ಅದು ಮೊದಲ ಪಾರ್ಟ್‌ನ ಕೊನೆಯಲ್ಲಿ ಬರುವ ದೃಶ್ಯಗಳೇ ಇದ್ದವು. ಹೀಗಾಗಿ ಈ ಟೀಸರ್ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಈ ಕಾರಣದಿಂದ ಈಗ ಟ್ರೇಲರ್ ರಿಲೀಸ್ ಮಾಡಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ‘ಧುರಂದರ್ 2’ ತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಇದನ್ನೂ ಓದಿ: ಅಬ್ಬಬ್ಬಾ.. ‘ಟಾಕ್ಸಿಕ್’ ಚಿತ್ರಕ್ಕಾಗಿ ಕಿಯಾರಾ ಪಡೆದ ಸಂಭಾವನೆ ಇಷ್ಟವಾಯಿತೇ?

‘ಟಾಕ್ಸಿಕ್’ ವಿರುದ್ಧ ಗೆಲ್ಲಬೇಕು ಎಂದರೆ ಅದು ಸುಲಭವಲ್ಲ. ಯಶ್ ಅವರು ಏನೇ ಪ್ಲ್ಯಾನ್ ಮಾಡಿದರೂ ದೊಡ್ಡ ಮಟ್ಟದಲ್ಲಿ ಯೋಚಿಸುತ್ತಾರೆ. ಎದುರಾಳಿಯ ಪ್ಲ್ಯಾನ್ ಏನೆಂದು ತಿಳಿದರೆ ‘ಟಾಕ್ಸಿಕ್’ ರಿಲೀಸ್ ಮಾಡಲು ಅವರು ಮುಂದೆ ಬಂದಿದ್ದಾರೆ. ದಕ್ಷಿಣ ಭಾರತದ ಜೊತೆಗೆ ನಲ್ಲೂ ಸಿನಿಮಾ ಅಬ್ಬರಿಸೋದು ಫಿಕ್ಸ್ ಆಗಿದೆ. ಹೀಗಾಗಿ,ಈ ಚಿತ್ರದ ಎದುರು ಅಬ್ಬರಿಸಲು ‘ಧುರಂಧರ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ಪ್ಲ್ಯಾನ್ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *