ಭೀಕರ ಸ್ಫೋಟಕ್ಕೆ ಮನೆಗೆ ಮನೆಯೇ ಸರ್ವನಾಶ!: ಹೊಸ ಸಿಲಿಂಡರ್ ಜೋಡಣೆ ವೇಳೆ ಅವಘಡ

ಭೀಕರ ಸ್ಫೋಟಕ್ಕೆ ಮನೆಗೆ ಮನೆಯೇ ಸರ್ವನಾಶ!: ಹೊಸ ಸಿಲಿಂಡರ್ ಜೋಡಣೆ ವೇಳೆ ಅವಘಡ


ಬಳ್ಳಾರಿ, ಮಾರ್ಚ್ 02: ಅಡುಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯೇ ಸರ್ವನಾಶವಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಸಂಡೂರ ತಾಲೂಕಿನ ತಾಳೂರು ಗ್ರಾಮದಲ್ಲಿ ನಡೆದಿದೆ. ಸುಬಾನಿ ಸಾಬ್ ಎನ್ನುವವರ ಮನೆಯಲ್ಲಿ ಹೊಸ ಸಿಲಿಂಡರ್ ಜೋಡಣೆ ವೇಳೆ ಗ್ಯಾಸ್ ಸೋರಿಕೆಯಾಗಿ ಅವಘಡ ನಡೆದಿದ್ದು, ಗ್ಯಾಸ್ ಲೀಕ್ ಆಗುತ್ತಿದ್ದಂತೆ ಮನೆಯಲ್ಲಿದ್ದ ಕುಟುಂಬಸ್ಥರು ಎಚ್ಚೆತ್ತುಕೊಂಡ ಕಾರಣ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಪೋಟದ ತೀವ್ರತೆಗೆ ಮನೆ ಸಂಪೂರ್ಣ ಛಿದ್ರ ಛಿದ್ರವಾಗಿದ್ದು, ಪಕ್ಕದ ಮನೆಯ ಗೋಡೆಯೂ ಕುಸಿದು ಬಿದ್ದಿದೆ. ಮನೆ ಮಾಲೀಕ ಸುಬಾನಿ ಸಾಬ್ ಸೇರಿದಂತೆ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಘಟನಾ ಸ್ಥಳಕ್ಕೆ ತೋರಣಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *