Headlines

ವಿವಾಹದ ಬಳಿಕವೂ ಸಂಸ್ಕೃತಿ ಮರೆಯದ ರಶ್ಮಿಕಾ-ವಿಜಯ್; ಅಭಿಮಾನಿಗಳಿಂದ ಮೆಚ್ಚುಗೆ

ವಿವಾಹದ ಬಳಿಕವೂ ಸಂಸ್ಕೃತಿ ಮರೆಯದ ರಶ್ಮಿಕಾ-ವಿಜಯ್; ಅಭಿಮಾನಿಗಳಿಂದ ಮೆಚ್ಚುಗೆ


ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗೆ ವಿವಾಹ ಆಗಿದ್ದಾರೆ. ಇವರ ಮದುವೆಯ ಬಗ್ಗೆ ಎಲ್ಲ ಕಡೆ ಚರ್ಚೆ ಆಯಿತು. ಇವರ ವಿವಾಹ ಫೋಟೋಗೆ ಕೋಟಿ ಕೋಟಿ ಲೈಕ್ಸ್ ಸಿಕ್ಕಿದೆ. ರಶ್ಮಿಕಾ ಮಂದಣ್ಣ ಅವರು ವಿವಾಹದ ಬಳಿಕ ಪತಿ ವಿಜಯ್ ಜೊತೆ ತಿರುಪತಿಗೆ ಭೇಟಿ ಕೊಟ್ಟಿದ್ದರು. ಈಗ ಇವರು ಮದುವೆ ಬಳಿಕವೂ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.

ಕೆಲವು ಕೆಲಸದ ಕಾರಣಕ್ಕೆ ಬೇರೆ ಕಡೆಗಳಿಗೆ ತೆರಳುತ್ತಾರೆ. ಆದರೆ, ಮದುವೆ ಬಳಿಕ ಹುಟ್ಟೂರಿಗೆ ಭೇಟಿ ಕೊಡೋದು ಸಂಪ್ರದಾಯ. ಈ ಸಂಪ್ರದಾಯವನ್ನು ವಿಜಯ್ ಹಾಗೂ ರಶ್ಮಿಕಾ ಮರೆತಿಲ್ಲ. ಹೌದು, ಮದುವೆ ಆದ ಬಳಿಕ ವಿಜಯ್ ದೇವರಕೊಂಡ ಸ್ವಂತ ದಂಪತಿಗೆ ತೆರಳಿದ್ದಾರೆ. ತೆಲಂಗಾಣದ ನಾಗರ್ ಕರ್ನೋಲ್ ತುಮ್ಮನ್ ಪೇಟೆಗೆ ಭೇಟಿ ಕೊಟ್ಟಿದ್ದಾರೆ.

ವಿಜಯ್ ಅವರು ತಮ್ಮದೇ ಆದ ಫಾರ್ಮ್ ಹೌಸ್. ಅಲ್ಲಿ ಇಂದು (ಮಾರ್ಚ್ 2) ಸತ್ಯನಾರಾಯಣ ಪೂಜೆ ಮಾಡಿದ್ದಾರೆ. ಜೊತೆಗೆ, ಗ್ರಾಮದ 2000ಕ್ಕೂ ಹೆಚ್ಚು ಜನಕ್ಕೆ ಅನ್ನದಾನ ವ್ಯವಸ್ಥೆ ಮಾಡಲಾಗಿದೆ. ರಶ್ಮಿಕಾ ಹಾಗೂ ವಿಜಯ್ ಅವರಿಗೆ ಬರುತ್ತಿದ್ದರು ಎಲ್ಲರೂ ಅವರನ್ನು ಪ್ರೀತಿಯಿಂದ ಸ್ವಾಗತಿಸಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ತಿರುಪತಿಗೆ ಭೇಟಿ ನೀಡಿದಾಗಲೂ ರಶ್ಮಿಕಾ ಹಾಗೂ ವಿಜಯ್ ಅವರ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯವನ್ನು ದಂಪತಿ ಮುಚ್ಚಿಟ್ಟಿದ್ದರು. ವಿವಾಹ ಆಗುವ ಹಲವು ವರ್ಷಗಳ ಪ್ರೀತಿಗೆ ಹೊಸ ಅರ್ಥ ತಿಳಿಸಿದೆ. ರಶ್ಮಿಕಾ ಹಾಗೂ ವಿಜಯ್ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

ಇದನ್ನೂ ಓದಿ: ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ

ರಶ್ಮಿಕಾ ವಿವಾಹದ ಕುರಿತು ಒಂದು ವರ್ಗದ ಜನರು ಅಪಸ್ವರ ತೆಗೆದಿದ್ದಾರೆ. ಆದರೆ, ಇದಕ್ಕೆ ರಶ್ಮಿಕಾ ಮಂದಣ್ಣ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಟೀಕೆಗಳಿಗೆ ಕಿವಿಕೊಡದೆ ಇಬ್ಬರೂ ಹಾಯಾಗಿ ಜೀವನ ಸಾಗಿಸುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *