ಬೀದರ್, ಮಾರ್ಚ್ 02: ಜಿಲ್ಲೆಯ ರೈತ ಉದ್ದು, ಸೋಯಾ, ಕಬ್ಬು ಬೆಳೆಗೆ ಮಾತ್ರ ಸೀಮಿತವಾಗಿದ್ದರು. ಹೀಗಾಗಿ ಪದೇ ಪದೇ ನಷ್ಟಕ್ಕೆ ತುತ್ತಾಗಿ, ಸಾಲದ ಸುಳಿಗೆ ಸಿಲುಕಿದ್ದಾರೆ. ಬೆಳೆ ಬದಲಾವಣೆ ಮಾಡಬೇಕೆಂದು ನಿರ್ಧರಿಸಿದ ರೈತನಿಗೆ ಚಿಯಾ ಬೆಳೆ ಕೈ ಹಿಡಿದಿದ್ದು, ಇದೀಗ ಭರ್ಜರಿ ಲಾಭ ಗಳಿಸುತ್ತಿದೆ.
ಬಹುಬೇಡಿಕೆ ಬೆಳೆದ ರೈತರು
ಗಡಿ ಜಿಲ್ಲೆ ಬೀದರ್ ನ ರೈತರು ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕಿ ನಷ್ಟ ಅನುಭವಿಸುತ್ತಿದ್ದಾರೆ. ಜೊತೆಗೆ ಪದೇ ಪದೇ ಬೆಳೆಯುವ ನಾಟಿ ಮಾಡಿ ಆರ್ಥಿಕ ಸ್ಥಿತಿವಂತರಾಗುವ ದಿಕ್ಕಿನಲ್ಲಿ ಮುಂದಾಗಿ ಏಳು-ಬೀಳು ಕಂಡಿದ್ದು, ಇದೀಗ ಬಹುಬೇಡಿಕೆ ಬೆಳೆ ಚಿಯಾ ಧಾನ್ಯ ಬೆಳೆಯುವ ಕಡೆಗೆ ಮುಖ ಮಾಡಿದೆ.
ಇದನ್ನೂ ಓದಿ: ಬೀದರ್ ರೈತನ ಕೈ ಹಿಡಿದ ಹಳದಿ ಸುಂದರಿ: ವರ್ಷಕ್ಕೆ ಲಕ್ಷಾಂತರ ರೂ ಆದಾಯ, ಆಧುನಿಕ ಯುಗದಲ್ಲಿ ಕ್ರಾಂತಿ
ಬೀದರ್ ತಾಲ್ಲೂಕಿನ ಶಮಶಾನಗರ ಗ್ರಾಮದ ಆನಂದ ಒಂದು ಜಮೀನಿನಲ್ಲಿ ಚಿಯಾ ಬೆಳೆಯನ್ನುತ್ತಿದ್ದಾರೆ. ಆ ಮೂಲಕ ಆರ್ಥಿಕವಾಗಿ ಸಮರ್ಥವಾಗಿರುವ ವಾಣಿಜ್ಯ ಬೇಸಾಯಕ್ಕೆ ಒಲವು ತೋರಿದ್ದಾರೆ. ಇಂಟರ್‌ನೆಟ್‌ನಲ್ಲಿ ಚಿಯಾ ಬೆಳೆ ಕುರಿತು ಮಾಹಿತಿ ಸಂಗ್ರಹಿಸಿ, ಬೀಜ ಖರೀದಿಸಿ ಇದೀಗ ಬೆಳೆ ಬೆಳೆದ ಸ್ಥಳೀಯ ರೈತರಿಗೆ ಮಾದರಿಯಾಗಿದೆ. ಚಿಯಾ ಪೌಷ್ಟಿಕಾಂಶ ಸೇರಿದಂತೆ ಔಷಧೀಯ ಗುಣ ಹೊಂದಿದೆ. ಈ ಬೆಳೆ ಜಾನುವಾರು ಅಥವಾ ಕಾಡುಪ್ರಾಣಿಗಳ ಹಾವಳಿ ಇಲ್ಲದೆ ನೆಮ್ಮದಿಯಿಂದ ಬೆಳೆಯುವುದಿಲ್ಲ.
ರೈತ ಆನಂದ
ರಾಗಿ ಬೇಸಾಯದ ಮಾದರಿಯಲ್ಲಿ ಚಿಯಾ ಬೆಳೆಯಬಹುದು. ಅತಿಯಾದ ನೀರಿನ ಅವಲಂಬನೆ ಇಲ್ಲದೆ ಬೆಳೆಯುವ ಬೆಳೆ ಇದಾಗಿದೆ ಎಂದು ರೈತ ಅಜರ್ ಮಸ್ತಾನ್ ಹೇಳಿದ್ದಾರೆ. ಇನ್ನು ಚಿಯಾ ಬೆಳೆಗೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಬಹುಬೇಡಿಕೆ ಇದೆ. ಒಣ ಹವಾಮಾನದಲ್ಲಿ, ವಾರಕ್ಕೊಂದು ಬಾರಿ ತುಂತುರು ನೀರಾವರಿ ನೀಡಿದರೆ ಸಾಕು. 90 ರಿಂದ 100 ದಿನದಲ್ಲಿ ಫಸಲು ಪಡೆಯಬಹುದು. ಒಂದು ಪ್ರದೇಶಕ್ಕೆ 3 ರಿಂದ 4 ಸಾವಿರ ರೂ ವೆಚ್ಚ ತಗುಲಲಿದೆ, ಪೈರು ಬೆಳೆಸಿ ನಾಟಿ ಅಥವಾ ಬಿತ್ತನೆ ಬೀಜ ನೇರವಾಗಿ ಸಾಲು ಬಿಟ್ಟು ಬೆಳೆಯಬಹುದು.
14 ರಿಂದ 19 ಸಾವಿರ ರೂ ದರ
ಒಮ್ಮೆ ಮಾತ್ರ ರಾಸಾಯನಿಕ ಗೊಬ್ಬರ ನೀಡಿದೆ ಸಾಕು. ಸ್ಥಳಿಯ ವಾತಾವರಣಕ್ಕೆ ಬೆಳೆಯಬಹುದಾದ ವಾಣಿಜ್ಯ ಬೆಳೆ ಚಿಯಾಗೆ 4 ರಿಂದ 5 ಕ್ವಿಂಟಲ್ ಇಳುವರಿ ಸಿಗಲಿದೆ. ಪ್ರಸ್ತುತ ಕ್ವಿಂಟಲ್‌ಗೆ 14 ರಿಂದ 19 ಸಾವಿರ ರೂ ದರವಿದ್ದು ರೈತರು ಹೆಚ್ಚಿನ ಲಾಭವನ್ನು ಗಳಿಸಿದ್ದಾರೆ.
ಚಿಯಾ ಧಾನ್ಯದಲ್ಲಿ ಅಧಿಕ ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಫಾಸ್ಫರಸ್ (ರಂಜಕ) ಇದ್ದು, ಹೀಗಾಗಿ ಇದಕ್ಕೆ ಭಾರೀ ಬೇಡಿಕೆಯಿದೆ. ಈ ಧಾನ್ಯ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತವೆ. ರಕ್ತದ ಒತ್ತಡ ನಿಯಂತ್ರಣ, ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣ, ಸಕ್ಕರೆ ಕಾಯಿಲೆ ನಿಯಂತ್ರಣ, ಉತ್ತಮ ಪಚನಕ್ರಿಯೆಗೆ ಸಹಕಾರಿ ಎಂದು ಸಮರ್ಥವಾಗಿ ದೃಢಪಟ್ಟಿದೆ ಎಂಬ ರೈತರ ಮಾತು.
ಚಿಯಾ ಬೆಳೆ
ಇನ್ನು ಬೀದರ್ ಜಿಲ್ಲೆಯಲ್ಲಿ ಚಿಯಾ ಬೆಳೆಯ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿಯಿಲ್ಲ. ಜೊತೆಗೆ ಮಾರುಕಟ್ಟೆಯ ಬಗ್ಗೆ ಕೂಡ ರೈತರಿಗೆ ಮಾಹಿತಿಯಿಲ್ಲ. ಹೀಗಾಗಿ ಕೆಲವು ರೈತರು ಈ ಬೆಳೆಯ ಕಡೆಗೆ ಮುಖ ಮಾಡಿದ್ದಾರೆಂದು ರೈತ ರೇವಣಸಿದ್ದಯ್ಯ ಹೇಳುತ್ತಾರೆ.
ಇದನ್ನೂ ಓದಿ: ಮಾಂಜ್ರಾ ನದಿ ಒಡಲು ಬಗೆಯುತ್ತಿರುವ ದಂಧೆಕೋರರು: ಹಗಲು-ರಾತ್ರಿ ಎನ್ನದೆ ಮರಳು ಮಾಫಿಯಾ
ರೈತರು ಚಿಯಾ ಕೃಷಿಯಲ್ಲಿ ತೊಡಗಿದ್ದಾರೆ. ಒಮ್ಮೆ ನಾಟಿ ಮಾಡಿದ ನಂತರ ಯಾವುದೇ ಖರ್ಚು ಇಲ್ಲದೇ ಶೂನ್ಯ ಬಂಡವಾಳದಲ್ಲಿ ಬೆಳೆಯಬಹುದಾದ ಬೆಳೆ ಇದೆ. ಒಟ್ಟಾರೆ ಕೇವಲ ಕಬ್ಬು ಬೆಳೆದು ಕೈ ಸುಟ್ಟುಕೊಂಡಿದ್ದ ಗಡಿ ಜಿಲ್ಲೆಯ ರೈತರಿಗೆ ಇವರು ಮಾದರಿಯಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.