Annayya Serial: ರತ್ನ-ಪರಶು ಮದುವೆಯಲ್ಲಿ ಮಹಾ ತಿರುವು…. ಅಪ್ಪ ಎಂದು ಕರೆದ ಆ ಮಗು ಯಾರು?

Annayya Serial: ರತ್ನ-ಪರಶು ಮದುವೆಯಲ್ಲಿ ಮಹಾ ತಿರುವು…. ಅಪ್ಪ ಎಂದು ಕರೆದ ಆ ಮಗು ಯಾರು?

Annayya Serial: ರತ್ನ-ಪರಶು ಮದುವೆಯಲ್ಲಿ ಮಹಾ ತಿರುವು…. ಅಪ್ಪ ಎಂದು ಕರೆದ ಆ ಮಗು ಯಾರು?

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವಣ್ಣನ ಹಿರಿಯ ತಂಗಿ ರತ್ನನ ಮದುವೆ ಸಂಭ್ರಮ ಜೋರಾಗಿಯೇ ನಡೆಯುತ್ತಿರುವ ಮಧ್ಯೆ, ಮಹಾ ತಿರುವು ಎದುರಾಗಿದೆ. ಅರಶಿನ ಶಾಸ್ತ್ರದಲ್ಲಿ ಮುಳುಗಿದ್ದ ಪರಶುನನ್ನು ಅಪ್ಪ ಎನ್ನುತ್ತಾ ಮಗುವೊಂದು ಓಡಿ ಬಂದು ಅಪ್ಪಿಕೊಂಡಿದೆ ಮುಂದೇನಾಗುತ್ತೆ?

ಅಣ್ಣಯ್ಯ ಧಾರಾವಾಹಿಯಲ್ಲಿ ಪ್ರತಿಯೊಂದು ಮದುವೆಯಲ್ಲೂ ಸಹ ಒಂದೊಂದು ಟ್ವಿಸ್ಟ್ ಇದ್ದೇ ಇರುತ್ತದೆ. ಇದೀಗ ಶಿವಣ್ಣನ ಹಿರಿಯ ತಂಗಿಯ ಮದುವೆಯ ಸಂಭ್ರಮ ಜೋರಾಗಿ ನಡೆಯುತ್ತಿದೆ. ಅರಶಿನ ಶಾಸ್ತ್ರವು ಶಾಸ್ತ್ರೋಸ್ತಕವಾಗಿ ನಡೆಯುತ್ತಿದೆ. ಇದರ ನಡುವೆ ಒಂದು ಟ್ವಿಸ್ಟ್ ಸಿಕ್ಕಿದೆ. ರತ್ನ-ಪರಶು , ಮದುವೆಯಲ್ಲಿ ಮಹಾ ತಿರುವು,

ಒಂದೆಡೆ ಸಡಗರದಿಂದ ರತ್ನ ಮತ್ತು ಪರಶು ಅರಶಿನ ಶಾಸ್ತ್ರ ನಡೆಯುತ್ತಿದೆ. ಶಿವಣ್ಣ ತಾನೇ ಮುಂದೆ ನಿಂತು ಹಿರಿಯ ತಂಗಿಯ ಮದುವೆಯ ಪ್ರತಿಯೊಂದು ಸಂಭ್ರಮವನ್ನು ನಡೆಸಿಕೊಡುತ್ತಿದ್ದಾರೆ. ರತ್ನ ಮತ್ತು ಪರಶುಗೆ ಎಲ್ಲರೂ ಅರಶಿನ ಹಚ್ಚಿ ಸಂಭ್ರಮಿಸುತ್ತಿದ್ದಾರೆ. ಆವಾಗ ಮಗುವಿನ ಆಗಮನ ಆಗುತ್ತದೆ.

ಈ ಸಂಭ್ರಮದ ನಡುವೆ ಪುಟ್ಟ ಮಗುವೊಂದು ವೇದಿಕೆಗೆ ಓಡಿ ಬಂದು ಪರಶುನನ್ನು ಅಪ್ಪ ಎಂದು ಕರೆದು, ಪರಶುನನ್ನು ಅಪ್ಪಿಕೊಂಡಿದೆ. ಈ ದೃಶ್ಯವನ್ನು ನೋಡಿ ಪರಶು ಸೇರಿ ಮನೆಮಂದಿಗೆ ಶಾಕ್ ಆಗಿದೆ. ಹಾಗಿದ್ರೆ ಪರಶುಗೆ ಈಗಾಗಲೇ ಒಂದು ಮದುವೆಯಾಗಿ ಮಗು ಕೂಡ ಇದೆಯೇ? ಅಥವಾ ಬೇರೆ ಯಾರದ್ದೋ ಮಗು ಬಂದು ತಪ್ಪಾಗಿ ಪರಶುನನ್ನು ಅಪ್ಪ ಎಂದು ಕರೆಯಿತೇ?

ಪರಶು ಮತ್ತು ವೀರಭದ್ರ ಇಬ್ಬರೂ ಸೇರಿ ಶಿವುನನ್ನು ಸೋಲಿಸುವ ಸಲುವಾಗಿ ರತ್ನನನ್ನು ಮದುವೆಯಾಗಿ ಮನೆತುಂಬಿಸುವ ಯೋಜನೆ ಮಾಡಿದ್ದರು. ಎಲ್ಲರ ಮುಂದೆ ಒಳ್ಳೆಯವನಂತೆ ನಟಿಸುವ ಪರಶುಗೆ ಈಗಾಗಲೇ ಮದುವೆಯಾಗಿರುವ ಚಾನ್ಸನ್ ಕೂಡ ಇದೆ. ಅದನ್ನು ಮುಚ್ಚಿಟ್ಟು ರತ್ನಳನ್ನು ತನ್ನ ಮೋಸದ ಬಲೆಯಲ್ಲಿ ಸಿಲುಕಿಸುವ ಸಾಧ್ಯತೆ ಕೂಡ ಇದೆ.

ಪರಶುನ ಸತ್ಯ ಎಲ್ಲರ ಎದುರು ಬಯಲಾಗುತ್ತಾ? ಆ ಮೂಲಕ ವೀರಭದ್ರನ ಮೋಸದ ಆಟ ಶಿವಣ್ಣನ ಮುಂದೆ ಕೊನೆಗೂ ಬಯಲಾಗುವ ಸಾಧ್ಯತೆ ಇದೆಯೇ ಅನ್ನೋದನ್ನು ನೀವು ಎಪಿಸೋಡ್ ನೋಡಿಯೇ ತಿಳಿಯಬೇಕು. ಆದರೆ ಇಷ್ಟು ಬೇಗ ಆದೆಲ್ಲಾ ರಿವೀಲ್ ಆಗುವ ಸಾಧ್ಯತೆ ತುಂಬಾ ಕಡಿಮೆ. ರಿವೀಲ್ ಆದರೆ ಕಥೆ ಮುಗಿದಂತೆ. ಮುಂದೇನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.

ಅಣ್ಣಯ ಧಾರಾವಾಹಿಯಲ್ಲಿ ಅಣ್ಣಯ್ಯ ಶಿವು ಪಾತ್ರದಲ್ಲಿ ವಿಕಾಶ್ ಉತ್ತಯ್ಯ, ನಾಯಕಿಯಾಗಿ ನಿಶಾ ರವಿಕೃಷ್ಣನ್, ನಾಗಶ್ರೀ ಬೇಗಾರ್, ರಾಘವಿ, ಪ್ರತೀಕ್ಷ ಶ್ರೀನಾಥ್, ಚಿರಂಜೀವಿ, ಸುಷ್ಮಿತ್ ಜೈನ್, ನಾಗೇಂದ್ರ ಶಾ ಸೇರಿ ಹಲವಾರು ಹಿರಿಯ ಕಿರಿಯ ನಟ-ನಟಿಯರು ನಟಿಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *