Actress Amulya Husband: ನಟಿ ಅಮೂಲ್ಯ ಪತಿ ಜಗದೀಶ್ ಆರ್ ಚಂದ್ರ ಅವರು ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಈಗ ಅವರಿಗೆ ಬಿಜೆಪಿ ಪಕ್ಷವು ಒಳ್ಳೆಯ ಹುದ್ದೆಯನ್ನು ನೀಡಿದೆ. ಅನೇಕರು ಜಗದೀಶ್ಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

2018ರಲ್ಲಿ ಬಿಜೆಪಿ ತೊರೆದು, ಜೆಡಿಎಸ್ ಪಕ್ಷಕ್ಕೆ ಬಂದಿದ್ದರು. ಆ ಬಳಿಕ ಮತ್ತೆ ಅವರು ಬಿಜೆಪಿಗೆ ಬಂದಿದ್ದರು. ಅವರು ವಿಧಾನಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದು, ಸಾಕಷ್ಟು ಬಾರಿ ಟಿಕೆಟ್ ಕೈತಪ್ಪಿತ್ತು.

ಕೊರೊನಾ ವೇಳೆ ಕೂಡ ಅಮೂಲ್ಯ ಕುಟುಂಬವು ಸಾಕಷ್ಟು ಜನರಿಗೆ ಸಹಾಯ ಮಾಡಿತ್ತು. ಆರ್ ಆರ್ ನಗರ ಸುತ್ತಮುತ್ತ ಜಗದೀಶ್ ಅವರು ಕೂಡ ಒಂದಿಷ್ಟು ಸಮಸ್ಯೆಗಳಿಗೆ ದನಿ ಎತ್ತಿದ್ದರು. ಇದಕ್ಕೂ ಮುನ್ನ ಜಗದೀಶ್ ಅವರು ವಿದೇಶದಲ್ಲಿ ಓದಿದ್ದರು ಎನ್ನಲಾಗಿದೆ.

ಜಗದೀಶ್ ಆರ್ ಚಂದ್ರ ಅವರ ತಂದೆ ಜಿ ಎಚ್ ರಾಮಚಂದ್ರ ಅವರು ಉದ್ಯಮಿ, ರಾಜಕಾರಣಿ ಕೂಡ ಹೌದು. ಬಿಜೆಪಿಯು ಕೇಂದ್ರ ಜಿಲ್ಲೆಯ ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದೆ. ಅವರಲ್ಲಿ ಜಗದೀಶ್ ಆರ್ ಚಂದ್ರ ಕೂಡ ಒಬ್ಬರು.

ಈಗ ಜಗದೀಶ್ ಆರ್ ಚಂದ್ರ ಅವರು ಯುವ ಮೋರ್ಚಾ ಅಧ್ಯಕ್ಷರಾಗಿ ಬಡ್ತಿ ಪಡೆದಿದ್ದಾರೆ. ಬಿಜೆಪಿ ಕೇಂದ್ರ ಜಿಲ್ಲಾಧ್ಯಕ್ಷರಾದ ಸಪ್ತಗಿರಿ ಗೌಡ ಅವರು ಆದೇಶ ಹೊರಡಿಸಿದ್ದಾರೆ.

Source link
ನಟಿ ಅಮೂಲ್ಯ ಪತಿ ಜಗದೀಶ್ ಆರ್ ಚಂದ್ರಗೆ ಉತ್ತಮ ಹುದ್ದೆ ಕೊಟ್ಟ BJP ಪಕ್ಷ! ಏನದು?