Headlines

ನಟ ಪ್ರಭಾಸ್ ಅವರದ್ದು ಅಂಬಾನಿಗಿಂತಲೂ ಶ್ರೀಮಂತ ಕುಟುಂಬ; ರಾಜಮನೆತದ ಲಕ್ಷ ಎಕರೆ ಭೂಮಿಯನ್ನ ದಾನ ಮಾಡಿದ್ದೇ ಹೆಚ್ಚು!

ನಟ ಪ್ರಭಾಸ್ ಅವರದ್ದು ಅಂಬಾನಿಗಿಂತಲೂ ಶ್ರೀಮಂತ ಕುಟುಂಬ; ರಾಜಮನೆತದ ಲಕ್ಷ ಎಕರೆ ಭೂಮಿಯನ್ನ ದಾನ ಮಾಡಿದ್ದೇ ಹೆಚ್ಚು!

ನಟ ಪ್ರಭಾಸ್ ಅವರದ್ದು ಅಂಬಾನಿಗಿಂತಲೂ ಶ್ರೀಮಂತ ಕುಟುಂಬ; ರಾಜಮನೆತದ ಲಕ್ಷ ಎಕರೆ ಭೂಮಿಯನ್ನ ದಾನ ಮಾಡಿದ್ದೇ ಹೆಚ್ಚು!

ಪ್ರಭಾಸ್ ಅವರ ಕುಟುಂಬ ಒಂದು ಕಾಲದಲ್ಲಿ ಲಕ್ಷಾಂತರ ಎಕರೆ ಭೂಮಿಯ ಒಡೆಯರಾಗಿತ್ತು ಮತ್ತು ಅಂಬಾನಿಗಿಂತಲೂ ಶ್ರೀಮಂತರಾಗಬಹುದಿತ್ತು ಎಂದು ನಿರ್ದೇಶಕ ರಾಜಾ ವನ್ನೆಂರೆಡ್ಡಿ ಬಹಿರಂಗಪಡಿಸಿದ್ದಾರೆ. ಅವರ ಪೂರ್ವಜರ ದಾನಗುಣದ ಕಥೆ ಇಲ್ಲಿದೆ.

ಟಾಲಿವುಡ್‌ನ ಡಾರ್ಲಿಂಗ್, ‘ಬಾಹುಬಲಿ’ ಖ್ಯಾತಿಯ ಪ್ರಭಾಸ್ ಕೇವಲ ಸಿನಿಮಾಗಳ ಮೂಲಕ ಮಾತ್ರವಲ್ಲದೆ, ತಮ್ಮ ಅಸಾಧಾರಣ ಹಿನ್ನೆಲೆಯ ಕಾರಣದಿಂದಲೂ ಸುದ್ದಿಯಲ್ಲಿದ್ದಾರೆ. ಆಸ್ತಿ ವಿಚಾರದಲ್ಲಿ ಎಂದಿಗೂ ಹೆಚ್ಚು ಸದ್ದು ಮಾಡದ ಪ್ರಭಾಸ್ ಕುಟುಂಬಕ್ಕೆ ಒಂದು ಕಾಲದಲ್ಲಿ ಮುಖೇಶ್ ಅಂಬಾನಿಯನ್ನೂ ಮೀರಿಸುವಷ್ಟು ಸಂಪತ್ತು ಇತ್ತು ಎಂಬ ಸತ್ಯ ಈಗ ಹೊರಬಿದ್ದಿದೆ. ನಿರ್ದೇಶಕ ರಾಜಾ ವನ್ನೆಂರೆಡ್ಡಿ ಅವರು ಸಂದರ್ಶನವೊಂದರಲ್ಲಿ ಪ್ರಭಾಸ್ ಅವರ ರಾಜಮನೆತನದ ಅದ್ಭುತ ಆಸ್ತಿ ಮತ್ತು ಅದನ್ನು ಅವರು ದಾನ ಮಾಡಿದ ಕಥೆಯನ್ನು ಬಹಿರಂಗಪಡಿಸಿದ್ದು, ಇದು ಎಲ್ಲರನ್ನೂ ನಿಬ್ಬೆರಗಾಗಿಸಿದೆ.

ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ಪ್ರಭಾಸ್, ತಮ್ಮ ‘ಬಾಹುಬಲಿ’ ಸರಣಿಯ ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಸದ್ಯ ಅವರು ಭಾರತದ ಅತಿದೊಡ್ಡ ಹೀರೋಗಳಲ್ಲಿ ಒಬ್ಬರಾಗಿದ್ದು, ತಮ್ಮ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗಕ್ಕೆ ವಿಶ್ವಮಟ್ಟದಲ್ಲಿ ಮನ್ನಣೆ ತಂದುಕೊಟ್ಟಿದ್ದಾರೆ. ಪ್ರಸ್ತುತ ‘ಫೌಜಿ’, ‘ಸ್ಪಿರಿಟ್’ ಸೇರಿದಂತೆ ನಾಲ್ಕೈದು ದೊಡ್ಡ ಬಜೆಟ್ ಚಿತ್ರಗಳಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ‘ಕಲ್ಕಿ 2898 ಎಡಿ’, ‘ಸಲಾರ್ 2’ ಚಿತ್ರಗಳು ಇನ್ನೂ ಆರಂಭವಾಗಬೇಕಿದ್ದು, ಮುಂದಿನ ಐದಾರು ವರ್ಷಗಳ ಕಾಲ ಪ್ರಭಾಸ್ ಸಂಪೂರ್ಣವಾಗಿ ಕಾರ್ಯನಿರತರಾಗಿದ್ದಾರೆ.

ಪ್ರಭಾಸ್ ರಾಜಮನೆತನಕ್ಕೆ ಸೇರಿದವರು ಎಂಬುದು ಬಹಳಷ್ಟು ಜನರಿಗೆ ತಿಳಿದಿರುವ ವಿಚಾರ. ಅವರು ಭೀಮಾವರಂ ರಾಜರ ಕುಟುಂಬದ ಕುಡಿ. ಆದರೆ, ಅವರ ನಿಜವಾದ ಆಸ್ತಿ ಮತ್ತು ಹಿನ್ನೆಲೆಯ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಇದೀಗ ನಿರ್ದೇಶಕ ರಾಜಾ ವನ್ನೆಂರೆಡ್ಡಿ ಅವರು ಈ ಕುರಿತು ಕೆಲವು ಅಚ್ಚರಿಯ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಅವರ ಪ್ರಕಾರ, ಪ್ರಭಾಸ್ ಕುಟುಂಬಕ್ಕೆ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಇತ್ತಂತೆ.

ರಾಜಾ ವನ್ನೆಂರೆಡ್ಡಿ ಅವರ ಮಾತುಗಳ ಪ್ರಕಾರ, ಪ್ರಭಾಸ್ ಅವರ ಮುತ್ತಾತಂದಿರು ರಾಜರಾಗಿದ್ದರು. ಭೀಮಾವರಂ ಸಮೀಪದ ಸುಮಾರು 9 ಸಂಸ್ಥಾನಗಳು ಅವರ ಆಳ್ವಿಕೆಯಲ್ಲಿದ್ದವು. ಇವರ ಬಳಿ ಲಕ್ಷಾಂತರ ಎಕರೆ ಭೂಮಿ ಇತ್ತು. ಇಂದಿನ ಲೆಕ್ಕಾಚಾರದಲ್ಲಿ, ಆ ಆಸ್ತಿ ಮೌಲ್ಯವು ಸಾವಿರಾರು ಕೋಟಿ ರೂಪಾಯಿಗಳಷ್ಟು ಆಗುತ್ತಿತ್ತು. ಭಾರತದ ಟಾಪ್ ಶ್ರೀಮಂತರ ಪಟ್ಟಿಯಲ್ಲಿ ಪ್ರಭಾಸ್ ಕುಟುಂಬ ಅಗ್ರಸ್ಥಾನದಲ್ಲಿ ನಿಲ್ಲುವಷ್ಟರ ಮಟ್ಟಿಗೆ ಸಂಪತ್ತು ಇತ್ತು ಎಂದು ವನ್ನೆಂರೆಡ್ಡಿ ವಿವರಿಸಿದ್ದಾರೆ.

ಆದರೆ, ಈಗ ಆ ಅಪಾರ ಆಸ್ತಿಯೆಲ್ಲವೂ ಪ್ರಭಾಸ್ ಕುಟುಂಬದ ಬಳಿ ಇಲ್ಲ. ಇದಕ್ಕೆ ಕಾರಣ, ಅವರ ಪೂರ್ವಜರ ಅಸಾಧಾರಣವಾದ ಉದಾರತೆ ಮತ್ತು ದಾನಶೂರತ್ವ. ರಾಜಮನೆತನದವರು ಎಲ್ಲವನ್ನೂ ದಾನ ಮಾಡಿಬಿಟ್ಟಿದ್ದರಂತೆ. ಒಮ್ಮೆ ರುಚಿಕರವಾದ ಅಡುಗೆ ಮಾಡಿದವರಿಗೆ ಮೆಚ್ಚಿ 3,000 ಎಕರೆ ಭೂಮಿಯನ್ನು ಬರೆದುಕೊಟ್ಟಿದ್ದರಂತೆ. ಇಂತಹ ಲೆಕ್ಕವಿಲ್ಲದಷ್ಟು ದಾನ ಕಾರ್ಯಗಳನ್ನು ಮಾಡಿದ್ದಾರೆ. ಇದರ ಪರಿಣಾಮವಾಗಿ, ಈಗ ಅವರ ಬಳಿ 100 ಎಕರೆಗಿಂತಲೂ ಕಡಿಮೆ ಪೂರ್ವಜರ ಆಸ್ತಿ ಉಳಿದಿದೆ ಎಂದು ರಾಜಾ ವನ್ನೆಂರೆಡ್ಡಿ ಹೇಳಿದ್ದಾರೆ.

ರಾಜಾ ವನ್ನೆಂರೆಡ್ಡಿ ಅವರು ನೀಡಿದ ಮತ್ತೊಂದು ಅಚ್ಚರಿಯ ಮಾಹಿತಿ ಎಂದರೆ, ಆ ಲಕ್ಷಾಂತರ ಎಕರೆ ಭೂಮಿ ಈಗಲೂ ಪ್ರಭಾಸ್ ಕುಟುಂಬದ ಬಳಿ ಇದ್ದಿದ್ದರೆ, ಅವರು ಭಾರತದ ಕುಬೇರ, ಉದ್ಯಮಿ ಮುಖೇಶ್ ಅಂಬಾನಿಗಿಂತಲೂ ಶ್ರೀಮಂತವಾಗಿರುತ್ತಿದ್ದರು! ಅಂದರೆ, ಅವರ ಪೂರ್ವಜರು ಹೊಂದಿದ್ದ ಸಂಪತ್ತು ಅಷ್ಟೊಂದು ಬೃಹತ್ ಪ್ರಮಾಣದಲ್ಲಿತ್ತು.

ಪ್ರಭಾಸ್ ಕೂಡ ತಮ್ಮ ಪೂರ್ವಜರಂತೆಯೇ ಉದಾರಿ ಗುಣ ಹೊಂದಿದ್ದಾರೆ. ಕೇಳಿದ್ದನ್ನು ಕೊಡುವ ಗುಣ ಅವರದ್ದು ಎಂದು ರಾಜಾ ವನ್ನೆಂರೆಡ್ಡಿ, ಸುಮನ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಈ ಆಶ್ಚರ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇಂತಹ ಅದ್ಭುತ ಮತ್ತು ತ್ಯಾಗಮಯಿ ಹಿನ್ನೆಲೆಯನ್ನು ಹೊಂದಿರುವ ಪ್ರಭಾಸ್, ಕೇವಲ ಸಿನಿಮಾ ಸ್ಟಾರ್ ಆಗಿರುವುದಕ್ಕಿಂತ ಹೆಚ್ಚಾಗಿ, ಅಪಾರ ಇತಿಹಾಸ ಮತ್ತು ದಾನಗುಣದ ಪರಂಪರೆಯನ್ನು ಹೊಂದಿರುವ ಕುಟುಂಬದಿಂದ ಬಂದವರು ಎಂಬುದು ಈಗ ಸ್ಪಷ್ಟವಾಗಿದೆ.

Source link

Leave a Reply

Your email address will not be published. Required fields are marked *