Headlines

ಇರಾನ್‌ ಬಳಿಕ ಮತ್ತೊಂದು ದೇಶದ ಮೇಲೆ ದಾಳಿ ಮಾಡುವ ಸುಳಿವು ನೀಡಿದ ಅಮೆರಿಕದ ಸೆನೆಟರ್‌ | Donald Trump Next Target Cuba After Iran War Us Senator Lindsey Graham San

ಇರಾನ್‌ ಬಳಿಕ ಮತ್ತೊಂದು ದೇಶದ ಮೇಲೆ ದಾಳಿ ಮಾಡುವ ಸುಳಿವು ನೀಡಿದ ಅಮೆರಿಕದ ಸೆನೆಟರ್‌ | Donald Trump Next Target Cuba After Iran War Us Senator Lindsey Graham San



ಇರಾನ್‌ ಬಳಿಕ ಮತ್ತೊಂದು ದೇಶದ ಮೇಲೆ ದಾಳಿ ಮಾಡುವ ಸುಳಿವು ನೀಡಿದ ಅಮೆರಿಕದ ಸೆನೆಟರ್‌ | Donald Trump Next Target Cuba After Iran War Us Senator Lindsey Graham San

After Iran, Is Cuba Donald Trump’s Next Target? US Senator Reveals ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಟ್ರಂಪ್ ಆಡಳಿತವು ಈಗ ಕ್ಯೂಬಾವನ್ನು ಗುರಿಯಾಗಿಸಿಕೊಂಡಿದೆ ಎಂದು ಅಮೆರಿಕದ ಸಂಸದ ಲಿಂಡ್ಸೆ ಗ್ರಹಾಂ ಬಹಿರಂಗಪಡಿಸಿದ್ದಾರೆ. 

ವಾಷಿಂಗ್ಟನ್ (ಮಾ.2): ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಭೀಕರ ದಾಳಿ ನಡೆಸುತ್ತಿದ್ದು, ಇಡೀ ಜಗತ್ತು ಪರಮಾಣು ಯುದ್ಧದ ಭೀತಿಯಲ್ಲಿದೆ. ಇರಾನ್‌ನ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳು ಧೂಳೀಪಟವಾಗಿದ್ದು, ಭಾರೀ ಪ್ರಮಾಣದ ಜೀವಹಾನಿ ಸಂಭವಿಸಿದೆ. ಇರಾನ್ ಅನ್ನು ಸಂಪೂರ್ಣವಾಗಿ ದುರ್ಬಲಗೊಳಿಸಲು ಅಮೆರಿಕ ಪಣತೊಟ್ಟಿರುವ ಬೆನ್ನಲ್ಲೇ, ಟ್ರಂಪ್ ಆಡಳಿತವು ಈಗ ಮತ್ತೊಂದು ದೇಶದ ಮೇಲೆ ದಾಳಿ ಮಾಡಲು ಸಜ್ಜಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಡೊನಾಲ್ಡ್ ಟ್ರಂಪ್ ಅವರ ಮುಂದಿನ ಗುರಿ ಯಾವುದು?

ಅಮೆರಿಕದ ಪ್ರಭಾವಿ ಸಂಸದ (Senator) ಲಿಂಡ್ಸೆ ಗ್ರಹಾಂ ಅವರು ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ್ದಾರೆ. ಟ್ರಂಪ್ ಆಡಳಿತವು ಈಗ ಕ್ಯೂಬಾ (Cuba) ದೇಶವನ್ನು ಗುರಿಯಾಗಿಸಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಕ್ಯೂಬಾದಲ್ಲಿರುವ ಕಮ್ಯುನಿಸ್ಟ್ ಸರ್ವಾಧಿಕಾರವು ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ. ಅಲ್ಲಿನ ಆಡಳಿತಕ್ಕೆ ಈಗ ಕೇವಲ ಕೆಲವೇ ದಿನಗಳು ಬಾಕಿ ಇವೆ ಎಂದು ಗ್ರಹಾಂ ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್ ಅವರು ವಿದೇಶಾಂಗ ನೀತಿಯಲ್ಲಿ ಅತ್ಯಂತ ಆಕ್ರಮಣಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧ್ಯಕ್ಷರಾಗಿದ್ದು, ಇರಾನ್‌ನ ಭಯೋತ್ಪಾದಕ ಜಾಲದ ಬೆನ್ನಲ್ಲೇ ಕ್ಯೂಬಾದ ಸರ್ವಾಧಿಕಾರವನ್ನು ಕೊನೆಗೊಳಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಮೆರಿಕ ಮತ್ತು ಕ್ಯೂಬಾ ನಡುವಿನ ದಶಕಗಳ ಹಗೆತನಕ್ಕೆ ಕಾರಣವೇನು?

ಅಮೆರಿಕ ಮತ್ತು ಕ್ಯೂಬಾ ನಡುವಿನ ಸಂಘರ್ಷಕ್ಕೆ ಸುಮಾರು 6 ದಶಕಗಳ ಇತಿಹಾಸವಿದೆ. 1959ರ ಕ್ಯೂಬಾ ಕ್ರಾಂತಿಯ ನಂತರ ಫಿಡೆಲ್ ಕ್ಯಾಸ್ಟ್ರೋ ಅಧಿಕಾರಕ್ಕೆ ಬಂದು ಕಮ್ಯುನಿಸ್ಟ್ ಸರ್ಕಾರವನ್ನು ಸ್ಥಾಪಿಸಿದರು. ಅಂದಿನಿಂದ ಅಮೆರಿಕದೊಂದಿಗೆ ಸಂಬಂಧ ಹದಗೆಟ್ಟಿತು. ಕ್ಯೂಬಾದ ಮೇಲೆ ಅಮೆರಿಕ ವಿಧಿಸಿರುವ ಕಠಿಣ ಆರ್ಥಿಕ ನಿರ್ಬಂಧಗಳು ಇಂದಿಗೂ ಜಾರಿಯಲ್ಲಿವೆ. 1962ರ ಕ್ಷಿಪಣಿ ಬಿಕ್ಕಟ್ಟು ಇತಿಹಾಸದ ಅತ್ಯಂತ ಭಯಾನಕ ಘಟ್ಟ. ಸೋವಿಯತ್ ಒಕ್ಕೂಟವು ಕ್ಯೂಬಾದಲ್ಲಿ ಪರಮಾಣು ಕ್ಷಿಪಣಿಗಳನ್ನು ನಿಯೋಜಿಸಿತ್ತು. ಇದು ಅಮೆರಿಕ ಮತ್ತು ಸೋವಿಯತ್ ಒಕ್ಕೂಟವನ್ನು ಮುಖಾಮುಖಿಯಾಗಿಸಿ, ಜಗತ್ತನ್ನು ಪರಮಾಣು ಯುದ್ಧದ ಅಂಚಿಗೆ ತಂದು ನಿಲ್ಲಿಸಿತ್ತು.

ಸಂಬಂಧ ಸುಧಾರಣೆಯ ಪ್ರಯತ್ನ ಮತ್ತು ಟ್ರಂಪ್ ಹಸ್ತಕ್ಷೇಪ

2014ರಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರು ಕ್ಯೂಬಾ ಜೊತೆಗಿನ ಸಂಬಂಧ ಸುಧಾರಿಸಲು ಪ್ರಯತ್ನಿಸಿದ್ದರು. ರಾಯಭಾರ ಕಚೇರಿಗಳನ್ನು ಪುನಃ ತೆರೆಯಲಾಗಿತ್ತು ಮತ್ತು ಪ್ರಯಾಣದ ಮೇಲಿನ ನಿರ್ಬಂಧಗಳನ್ನು ಸಡಿಲಿಸಲಾಗಿತ್ತು. ಆದರೆ, ನಂತರ ಅಧಿಕಾರಕ್ಕೆ ಬಂದ ಡೊನಾಲ್ಡ್ ಟ್ರಂಪ್, ಒಬಾಮಾ ಅವರ ನಿರ್ಧಾರಗಳನ್ನು ರದ್ದುಗೊಳಿಸಿ ಕ್ಯೂಬಾ ಮೇಲೆ ಮತ್ತೆ ಕಠಿಣ ನಿರ್ಬಂಧಗಳನ್ನು ಹೇರಿದರು. ಇದು ಈಗ ಯುದ್ಧದ ಮುನ್ಸೂಚನೆಯ ವರೆಗೆ ಬಂದು ನಿಂತಿದೆ.



Source link

Leave a Reply

Your email address will not be published. Required fields are marked *