ದುಬೈಯಲ್ಲಿ ಸಿಲುಕಿದ್ದ ಕನ್ನಡಿಗರು ವಾಪಸ್​​: MLC ಭೋಜೇಗೌಡ, ಬ್ಯಾಡಿಂಟ್ಮನ್ ತಾರೆ​​​ ಪಿವಿ ಸಿಂಧು ಸೇರಿ ಹಲವರು ಬೆಂಗಳೂರಿಗೆ

ದುಬೈಯಲ್ಲಿ ಸಿಲುಕಿದ್ದ ಕನ್ನಡಿಗರು ವಾಪಸ್​​: MLC ಭೋಜೇಗೌಡ, ಬ್ಯಾಡಿಂಟ್ಮನ್ ತಾರೆ​​​ ಪಿವಿ ಸಿಂಧು ಸೇರಿ ಹಲವರು ಬೆಂಗಳೂರಿಗೆ


ದುಬೈನಲ್ಲಿ ಸಿಲುಕಿದ ಕನ್ನಡಿಗರು ದುಬೈನಿಂದ ಬೆಂಗಳೂರಿಗೆ ವಾಪಸ್ಚಿತ್ರದ ಕ್ರೆಡಿಟ್ ಮೂಲ: tv9

ಬೆಂಗಳೂರು, ಮಾರ್ಚ್ 3: ಇರಾನ್-ಇಸ್ರೇಲ್ ಯುದ್ಧದ (ಇಸ್ರೇಲ್-ಇರಾನ್ ಯುದ್ಧ) ಕಾರಣ ವಿಮಾನಗಳು ರದ್ದಾಗಿ ದುಬೈಯಿಂದ ವಾಪಸ್ ಬರಲಾಗದೆ ಸಿಕ್ಕಿಹಾಕಿಕೊಂಡಿರುವ ಭಾರತೀಯರು, ಅಲ್ಲಿರುವ ಕನ್ನಡಿಗರು ಇದೀಗ ನಿರಾಳರಾಗಿದ್ದಾರೆ. ದುಬೈನಿಂದ (ದುಬೈ) ಸೋಮವಾರ ರಾತ್ರಿ ಹೊರಟ ವಿಮಾನ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAB) ಸುರಕ್ಷಿತವಾಗಿ ಬಂದಿಳಿಯಿತು. ಎಂಎಲ್‌ಸಿ ಭೋಜೇಗೌಡ, ಬ್ಯಾಡಿಂಟ್‌ಮನ್ ತಾರೆ ಪಿವಿ ಸಿಂಧು ಸೇರಿ ಅನೇಕರು ಬೆಂಗಳೂರಿಗೆ ಆಗಮಿಸಿದರು.

ಈ ವೇಳೆ ಎಂಎಲ್‌ಸಿ ಭೋಜೇಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ‘ನಾನು ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದೆ. ಅಲ್ಲಿಂದ ದುಬೈ ಮೂಲಕ ಬೆಂಗಳೂರಿಗೆ ಬರುತ್ತಿತ್ತು. ಆದರೆ ದುಬೈನಲ್ಲಿ ಸಮಸ್ಯೆ ಉಂಟಾಗಿದೆ ಎಂಬುದು ಅಲ್ಲಿ ತಲುಪಿದ ಬಳಿಕವೇ ಗೊತ್ತಾಯಿತು. ಮೊದಲು ವಿಮಾನ ಹೊರಡುವಲ್ಲಿ ವಿಳಂಬವಾಯಿತು. ಬಳಿಕ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂಬ ಮಾಹಿತಿ ನೀಡಲಾಯಿತು. ದುಬೈ ವಿಮಾನ ನಿಲ್ದಾಣದಲ್ಲಿ ಜಾಗವೇ ಇಲ್ಲದಷ್ಟು ಜನಸಂದಣಿ ಇತ್ತು’ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೂರವಾಣಿ ಮೂಲಕ ಸಂಪರ್ಕಿಸಿ. ನಮಗೆ ದುಬೈನಲ್ಲಿ ಹೋಟೆಲ್‌ನಲ್ಲಿ ವಾಸ್ತವ ವ್ಯವಸ್ಥೆ ಮಾಡಿಕೊಟ್ಟರು. ಆದರೂ ಭದ್ರತೆಯ ಆತಂಕ ಕಾಡುತ್ತಲೇ ಇತ್ತು ಎಂದು ಭೋಜೇಗೌಡ ಹೇಳಿದರು.

ತಾಯ್ನಾಡಿಗೆ ಮರಳಿದವರು ಏನಂತಾರೆ? ವಿಡಿಯೋ ನೋಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕರೆ ಮಾಡಿ ವಿಚಾರಿಸಿದರು. ಸಚಿವರಾದ ಕೃಷ್ಣ ಭೈರೇಗೌಡ ಮತ್ತು ಎಚ್.ಕೆ. ಪಾಟೀಲ್ ಕೂಡ ಪರಿಸ್ಥಿತಿಯನ್ನು ಕುರಿತು ಮಾಹಿತಿ ನೀಡಿದ್ದಾರೆ. ಕೃಷ್ಣ ಭೈರೇಗೌಡ ಜೊತೆ ಮಾತಾಡುವಾಗಲೇ ಬಾಂಬ್ ಸ್ಫೋಟದ ಶಬ್ದ ಕೇಳಿಬಂದಿತು ಎಂದು ಆತಂಕದ ಕ್ಷಣಗಳನ್ನು ಅವರು ನೆನಪಿಸಿಕೊಂಡರು.

ಬುರ್ಜ್ ಖಲೀಫಾ ಪಕ್ಕದಲ್ಲಿ ಬಾಂಬ್ ಬಿದ್ದಿದೆ ಎಂಬ ಮಾಹಿತಿ ಸಿಕ್ಕಿತು. ಆದರೆ ಅದು ಅಷ್ಟು ಪರಿಣಾಮಕಾರಿ ರೀತಿಯಲ್ಲಿ ಸ್ಫೋಟಗೊಂಡಿಲ್ಲ ಎಂದು ಬಳಿಕ ತಿಳಿದುಬಂತು ಎಂದು ಹೇಳಿದರು. ದುಬೈ ಸರ್ಕಾರ ನಮ್ಮ ನೆರವಿಗೆ ಬಂದು ಉತ್ತಮ ವ್ಯವಸ್ಥೆ ಮಾಡಿಕೊಟ್ಟಿತ್ತು. ದುಬೈ ಸೇರಿ ಹಲವೆಡೆ ಯುದ್ಧದ ವಾತಾವರಣ ಕಂಡುಬಂದಿತು. ನಾವು ಇಷ್ಟು ಬೇಗ ಸ್ವದೇಶಕ್ಕೆ ವಾಪಸ್ಸಾಗುತ್ತೇವೆಂದು ಅಲ್ಲಿಗೆ ಹಾಜರಾಗಿದ್ದೇವೆ ಎಂದು ಭೋಜೇಗೌಡ ಹೇಳಿದರು.

ಇದನ್ನೂ ಓದಿ: ದುಬೈನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಸಿದ್ದರಾಮಯ್ಯ ಆಗ್ರಹ: ಪ್ರಧಾನಿ ಮೋದಿಗೆ ಬರೆದ 2 ಪುಟಗಳ ಪತ್ರದಲ್ಲಿರೋದೇನ?

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಕನ್ನಡಿಗರು, ಸುರಕ್ಷಿತವಾಗಿ ಮರಳಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ವ್ಯಾಪಾರ, ವೈಯಕ್ತಿಕ ಪ್ರವಾಸ ಅಥವಾ ಕೆಲಸದ ನಿಮಿತ್ತ ಅಬುಧಾಬಿಗೆ ತೆರಳಿದ್ದ ಅಲ್ಲಿ ಸಿಲುಕಿಕೊಂಡಿದ್ದರು. ದುಬೈ ಮತ್ತು ಅಬುಧಾಬಿಯಲ್ಲಿ ಯುದ್ಧದ ಭೀತಿಯು ಸಾಕಷ್ಟು ಜನರಲ್ಲಿ ಭಯ ಮೂಡಿಸಿತ್ತು.

ದುಬೈಗೆ ತೆರಳಿದ್ದ ವಿಮಾನ ವಾಪಸು

ಸೋಮವಾರ ಮುಂಜಾನೆ 4.30ಕ್ಕೆ ದುಬೈಗೆ ತೆರಳಿದ್ದ ವಿಮಾನ ಅರ್ಧದಿಂದಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದೆ. 113 ಪ್ರಯಾಣಿಕರನ್ನು ಹೊತ್ತು ತೆರಳಿದ್ದ ಎಮಿಸ್ ವಿಮಾನ ಭಾರತದ ಗಡಿ ದಾಟುವಷ್ಟರಲ್ಲೇ ದುಬೈ ವಾಯುನೆಲೆ ಬಂದ್ ಆಗಿತ್ತು. ಹೀಗಾಗಿ ವಿಮಾನ ವಾಪಸ್ ಆಯಿತು.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 7:08 am, ಮಂಗಳವಾರ, 3 ಮಾರ್ಚ್ 26



Source link

Leave a Reply

Your email address will not be published. Required fields are marked *