ಬಾರ್‌ಗೆ ಕುಡಿಯಲು ಬಂದ ದಂಪತಿ ಬಳಿ ಗಾಂಜಾ ಕೇಳಿ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ

ಬಾರ್‌ಗೆ ಕುಡಿಯಲು ಬಂದ ದಂಪತಿ ಬಳಿ ಗಾಂಜಾ ಕೇಳಿ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ

ಬಾರ್‌ಗೆ ಕುಡಿಯಲು ಬಂದ ದಂಪತಿ ಬಳಿ ಗಾಂಜಾ ಕೇಳಿ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ
ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಯುವಕನೊಬ್ಬ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಾಂಜಾ ನೀಡದ್ದಕ್ಕೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ: ಸಾಗರ ರಸ್ತೆಯಲ್ಲಿ ದಂಪತಿ ಮೇಲೆ ಯುವಕನೋರ್ವ ಮಾರಣಾಂತಿಕ ಹಲ್ಲೆ ಮಾಡಿದ್ದು, ಘಟನೆಯಲ್ಲಿ ದಂಪತಿಗಳು ಗಂಭೀರ ಗಾಯಗೊಂಡಿದ್ದಾರೆ.

ಶಿವಮೊಗ್ಗದ ಗಾಡಿಕೊಪ್ಪ ಬಳಿಯ ಸಾಗರ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ದಂಪತಿಗಳು ಕುಡಿದ ಮತ್ತಿನಲ್ಲಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ದಂಪತಿಯ ತಲೆ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಅಂಬೇಡ್ಕರ್ ನಗರದ ನಿವಾಸಿ 45 ವರ್ಷದ ರಾಜು ಹಾಗೂ 35 ವರ್ಷದ ಚುಮ್ಮ ಎಂದು ಗುರುತಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಅಲ್ಲಿ ನೂರಾರು ಜನರು ಸೇರಿದ್ದಾರೆ.

ದಾಳಿಯ ಬಳಿಕ ಯುವಕ ಅಲ್ಲಿಂದ ಓಡಿ ಹೋಗಿದ್ದಾನೆ. ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ದಂಪತಿ ನೀಡಿದ ಹೇಳಿಕೆಯ ಪ್ರಕಾರ, ಆರೋಪಿ ಟಿಪ್ಪು ನಗರದ ನಿವಾಸಿ ಎಂದು ಹೇಳಿಕೊಂಡಿದ್ದಾನೆ.

ಬಾರ್‌ಗೆ ನಾವು ಕುಡಿಯುವುದಕ್ಕೆಂದು ಬಂದಾಗ ಆತ ನಿಮ್ಮ ಬಳಿ ಗಾಂಜಾ ಇದ್ದರೆ ಕೊಡಿ ಎಂದು ಮಚ್ಚು ತೆಗೆದು ನಮ್ಮ ಮೇಲೆ ಕಚಕಚ ಅಂತ ಹಲ್ಲೆ ಮಾಡಿದ್ದಾನೆ ಎಂದು ದಂಪತಿ ಹೇಳಿದ್ದಾರೆ. ಗಂಡನನ್ನು ಹಿಡಿದು ಎಳೆದಾಡಿದಾಗ ಬಿಡಿಸಲು ಹೋದ ನನ್ನ ಮೇಲೂ ಆತ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ದೂರಿದ್ದಾರೆ.

ಇದನ್ನೂ ಓದಿ: ಧಾರವಾಡ: ಮಹಿಳೆ ಅಪಘಾತದಲ್ಲಿ ಸಾವು ಪ್ರಕರಣಕ್ಕೆ ರೋಚಕ ತಿರುವು: ಬಸ್‌ನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

Source link

Leave a Reply

Your email address will not be published. Required fields are marked *