ಬೆಂಗಳೂರು, ಮಾರ್ಚ್ 3: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ (ಇಸ್ರೇಲ್-ಇರಾನ್ ಸಂಘರ್ಷ) ಪರಿಣಾಮ ಬೆಂಗಳೂರಿನಲ್ಲಿ ಡ್ರೈ ಫ್ರೂಟ್ಸ್ ಬೆಲೆ (ಒಣ ಹಣ್ಣಿನ ಬೆಲೆ) ಏರಿಕೆಯಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಪೂರೈಕೆ ಸಮಸ್ಯೆಯೂ ಎದುರಾಗಬಹುದು ಎಂದು ಸ್ಥಳೀಯ ವ್ಯಾಪಾರಿಗಳು. ನಗರಕ್ಕೆ ಆಮದಾಗುವ ಡ್ರೈ ಫ್ರೂಟ್ಸ್‌ಗಳಲ್ಲಿ ಹೆಚ್ಚಿನ ಪ್ರಮಾಣದ ವಸ್ತುಗಳು ಇರಾನ್‌ನಿಂದ ಬರುತ್ತವೆ. ಅಂಜೂರ, ಮಾಮ್ರಾ ಬಾದಾಮಿ, ಪಿಸ್ತಾ, ಪೈನ್ ಬೀಜಗಳ ಜೊತೆಗೆ ಮಜಾಫತಿ ಖರ್ಜೂರಗಳು ವಿಶೇಷವಾಗಿ ಹೆಚ್ಚು ಬೇಡಿಕೆಯಲ್ಲಿವೆ. ರಂಜಾನ್ ಸಮಯದಲ್ಲಿ ಮಜಫತಿ ಖರ್ಜೂರಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂದು ಅವರು ಹೇಳಿದ್ದಾರೆ.
ಮಜಫತಿ ಖರ್ಜೂರಗಳು ಸಾಮಾನ್ಯವಾಗಿ ಪ್ರತಿ ಕೆಜಿಗೆ ಸುಮಾರು 300 ರೂ.ಗಳಂತೆ ಮಾರಾಟವಾಗುತ್ತದೆ. ರಂಜಾನ್ ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಎಂದು ರಸೆಲ್ ಮಾರುಕಟ್ಟೆ ಹಣ್ಣು ಮತ್ತು ಡ್ರೈ ಫ್ರೂಟ್ಸ್ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಡ್ರೀಸ್ ಚೌಧರಿ ಈ ಕುರಿತು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ರಂಜಾನ್ ಹಬ್ಬದ ಹಿನ್ನೆಲೆ ಈಗಾಗಲೇ ಇರುವ ವ್ಯಾಪಾರಿಗಳು ಸಾಕಷ್ಟು ಡ್ರೈಟ್ಸ್ ಸ್ಟಾಕ್ ಮಾಡಿಕೊಂಡಿದ್ದಾರೆ. ಹಬ್ಬದ ಸಮಯದಲ್ಲಿ ಮಾರಾಟ ಎಂಬ ಕಾರಣಕ್ಕೆ ನಾವು ಮುಂಚಿತವಾಗಿ ಡ್ರೈಯೂಟ್ಸ್ ಸಂಗ್ರಹಿಸುತ್ತೇವೆ. ಆದ್ದರಿಂದ ಈವರೆಗೆ ಯಾವುದೇ ಕೊರತೆ ಎದುರಾಗುವುದಿಲ್ಲ. ಆದರೆ ಯುದ್ಧ ಮುಂದುವರಿದರೆ ಸಮಸ್ಯೆ ಗಂಭೀರವಾಗಿದೆ ಎಂದು ಅವರು ಸೂಚಿಸಿದ್ದಾರೆ.
ಬೆಂಗಳೂರಿನ ಹಲವೆಡೆ ಡ್ರೈ ಫ್ರೂಟ್ಸ್ ಬೆಲೆ ಏರಿಕೆ
ಬೆಂಗಳೂರಿನ ಕೆಲವು ವ್ಯಾಪಾರಿಗಳು ಬೆಲೆ ಏರಿಕೆಯಾಗಿದೆ. ಪಿಸ್ತಾ ಬೆಲೆಯಲ್ಲಿ ಸುಮಾರು 200 ರೂ. ಏರಿಕೆಯಾಗಿದೆ. ಬೇಡಿಕೆಯಿದ್ದು, ಸ್ಟಾಕ್ ಕಡಿಮೆ ಇರುವ ಕಾರಣ ದರವನ್ನು ಹೆಚ್ಚಿಸಬೇಕು ಎಂದು ಶಿವಾಜಿನಗರದ ಎಚ್ ಮೇವಾ ಅಂಗಡಿಯ ಮಾಲೀಕ ಕೆ ಹಮೀದ್ ತಿಳಿಸಿದ್ದಾಗಿಯೂ ‘ಡೆಕ್ಕನ್ ಹೆರಾಲ್ಡ್’ ವರದಿಯಲ್ಲಿದೆ.
ಬೆಂಗಳೂರಿನಲ್ಲಿ ಈಗ ಹೇಗಿದೆ ಡ್ರೈ ಫ್ರೂಟ್ಸ್ ದರ?
ಪ್ರಸ್ತುತ ಬೆಂಗಳೂರಿನ ಇರಾನ್‌ನಿಂದ ಆಮದು ಆಗುವ ಪಿಸ್ತಾ ಕೆಜಿಗೆ 1,800 ರೂ.ನಿಂದ 2,100 ರೂ.ಗಳವರೆಗೆ ಮಾರಾಟವಾಗುತ್ತಿದೆ. ಅಂಜೂರ ಸುಮಾರು 1,600 ರೂ., ಮಾಮ್ರಾ ಬಾದಾಮಿ 2,500 ರೂ., ಪೈನ್ ಬೀಜಗಳು 8,000 ರೂ.ಗಳ ದರದಲ್ಲಿ ಮಾರಾಟವಾಗುತ್ತಿವೆ.
ಇರಾನ್ ಕೇಸರಿಗೂ ಭಾರೀ ಬೇಡಿಕೆ
ಇರಾನಿನ ಕೇಸರಿಗೆ ಕೂಡ ಭಾರೀ ಬೇಡಿಕೆ ಇದೆ. ಜಗತ್ತಿನಲ್ಲೇ ಉತ್ತಮ ತಳಿಯ ಕೇಸರಿ ಎಂದು ಪರಿಗಣಿಸುವ ಇರಾನಿನ ಕೇಸರಿ ಪ್ರಸ್ತುತ ಕೆಜಿಗೆ 2.5 ಲಕ್ಷ ರೂ.ನಿಂದ 3 ಲಕ್ಷ ರೂ. ದರ ಹೊಂದಿದೆ. ಮುಂದಿನ ಎರಡು ವಾರಗಳಲ್ಲಿ ಇದು 4 ಲಕ್ಷ ರೂ. ತಲುಪುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.
ಡ್ರೈ ಫ್ರೂಡ್ಸ್ ಜಾಯಿಕಾಯಿ, ದಾಲ್ಚಿನ್ನಿ, ಸ್ಟಾರ್ ಸೋಂಪು ಸೇರಿದಂತೆ ಕೆಲವು ಮಸಾಲೆಗಳು ಕೂಡ ಇರಾನ್‌ನಿಂದಲೇ ಆಮದಾಗುತ್ತವೆ. ಇರಾನ್‌ನಲ್ಲಿ ವ್ಯಾಪಾರ ಮತ್ತು ಬಂದರುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾದರೆ, ಅಫ್ಘಾನಿಸ್ತಾನದಿಂದ ಬರುವ ಸರಕುಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಇದನ್ನೂ ಓದಿ: ಕೊಲ್ಲಿ ರಾಷ್ಟ್ರಗಳು, ಇರಾನ್ ನಿಂದ ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳ ಸಂಚಾರ ರದ್ದು
ಒಟ್ಟಿನಲ್ಲಿ, ಇರಾನ್ ಇಸ್ರೇಲ್ ಸಂಘರ್ಷ ಬೆಂಗಳೂರಿನ ಡ್ರೈ ಫ್ರೂಟ್ಸ್ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸೂಚನೆಗಳು ಕಾಣಿಸುತ್ತವೆ, ಮುಂದಿನ ವಾರಗಳಲ್ಲಿ ಬೆಲೆ ಏರಿಕೆ ಬಿಸಿ ಎದುರಿಸಬೇಕಾಗಬಹುದು.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 9:25 am, ಮಂಗಳವಾರ, 3 ಮಾರ್ಚ್ 26