Video: ಹಕ್ಕಿಗಳ ನಡುವಿನ ಜಗಳ ಬಿಡಿಸಿದ ಮಹಿಳೆ, ವೈರಲ್‌ ಆಯ್ತು ದೃಶ್ಯ

Video: ಹಕ್ಕಿಗಳ ನಡುವಿನ ಜಗಳ ಬಿಡಿಸಿದ ಮಹಿಳೆ, ವೈರಲ್‌ ಆಯ್ತು ದೃಶ್ಯ


ಮನುಷ್ಯರಿಗಿಂತ ಪ್ರಾಣಿ ಪಕ್ಷಿಗಳೇ (ಪ್ರಾಣಿಗಳು ಮತ್ತು ಪಕ್ಷಿಗಳು) ಲೇಸು. ಒಂದು ತುತ್ತು ಅನ್ನ ಹಾಕಿದರೆ ಸಾಕು, ದಿನನಿತ್ಯ ಮನೆ ಮುಂದೆ ಬರುತ್ತವೆ. ಮನುಷ್ಯ ಮತ್ತು ಪಕ್ಷಿಯ (Bird) ಸ್ನೇಹಪರ ಸಂಬಂಧಕ್ಕೆ ಈ ವಿಡಿಯೋನೇ ಸಾಕ್ಷಿ. ಮನೆಯ ಹತ್ತಿರ ಹಾರಿ ಬಂದು ಬಾಲ್ಕನಿಯಲ್ಲಿ ಕುಳಿತುಕೊಂಡಿದ್ದ ಹಕ್ಕಿಗಳೆರಡು ಜಗಳವಾಡುತ್ತಿದ್ದ, ಮಹಿಳೆಯೊಬ್ಬಳು ಈ ಹಕ್ಕಿಗಳ ನಡುವಿನ ಜಗಳವನ್ನು ಬಿಡಿಸಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ದೃಶ್ಯ ನೋಡಿ ನೆಟ್ಟಿಗರು ಅಚ್ಚರಿ ಪಟ್ಟುಕೊಂಡಿದ್ದಾರೆ.

ಪೂಜಾ ಮೊಂಡಲ್ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಹಕ್ಕಿಗಳ ನಡುವಿನ ಜಗಳವನ್ನು ಬಿಡಿಸಿದ್ದಾಳೆ. ಮಹಿಳೆಯೂ ಮನೆಯ ಬಾಲ್ಕನಿಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದ ಹಕ್ಕಿಗಳ ನಡುವೆ ರಾಜಿ ಸಂಧಾನ ಮಾಡುತ್ತಿರುವ ದೃಶ್ಯವನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಶ್ವಾನವನ್ನು ಕಂಡೊಡನೆ ತಬ್ಬಿ ಮುದ್ದಾಡಿದ ಗೊರಿಲ್ಲಾ

ಈ ವಿಡಿಯೋ ಹೆಚ್ಚಾಗಿ ವೀಕ್ಷಿಸಿದ್ದು, ಒಬ್ಬ ಬಳಕೆದಾರ ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ, ಮತ್ತೊಬ್ಬರು, ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇತರರು, ಈ ಹಕ್ಕಿಗಳು ತುಂಬಾನೇ ಜಗಳ ಆಡುತ್ತವೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *